ಭಾರತದ ಮೊದಲ 3ಡಿ ತಾರಾಲಯ ಮಂಗಳೂರಿನಲ್ಲಿ ನಿರ್ಮಾಣ

11:33 AM, Saturday, December 23rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

3d-mangloreಮಂಗಳೂರು: ದೇಶದ ಮೊದಲ 3ಜಿ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಾಮಿ ವಿವೇಕಾನಂದ ತಾರಾಲಯದ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, ಜನವರಿ ತಿಂಗಳ ಅಂತ್ಯದೊಳಗೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದೇಶದಲ್ಲಿಯೇ ಮೊದಲ ಬಾರಿಕೆ ಆಕ್ಟಿವ್ 3ಡಿ 8ಕೆ ಪ್ರೊಜೆಕ್ಷನ್ ಸಿಸ್ಟಮ್’ನೊಂದಿಗೆ ತಾರಾಲಯ ನಿರ್ಮಾಣವಾಗುತ್ತಿದ್ದು, ಈ ತಾರಾಲಯ ಅಂತರಾಷ್ಟ್ರೀಯ ತಾರಾಲಯಗಳ ಪೈಕಿ 21ನೇ ಸ್ಥಾನದಲ್ಲಿದೆ.

ತಾರಾಲಯದ ಡೋಮ್’ನೊಳಗೆ ಅತ್ಯಂತ ಪರಿಣಾಮಕಾರಿಯಾದ ನ್ಯಾನೋಸೀಮ್ ಫ್ಯಾಬ್ರಿಕೇಶನ್ ಅಳವಡಿಕೆ ಕಾರ್ಯ ಶೇ.80ರಷ್ಟು ಪೂರ್ಣಗೊಂಡಿದ್ದು, ನ್ಯಾನೋಸೀಮ್ ಫ್ಯಾಬ್ರಿಕೇಶನ್ ಮತ್ತು ಅಳವಡಿಕೆಯನ್ನು ಅಮೆರಿಕಾದಿಂದ ಬಂದಿರುವ ಮೂವರು ಪರಿಣತರೊಂದಿಗೆ ಮಹಾರಾಷ್ಟ್ರದ ನಾಶಿಕ್’ನ ಹಲವಾರು ತಾಂತ್ರಿಕರ ಜೊತೆಗೂಡಿ ಕೆಲಸ ಸಾಗುತ್ತಿದೆ ಎಂದು ರಾಜ್ಯ ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಮ್ ಅವರು ಹೇಳಿದ್ದಾರೆ.

ರೂ.36 ಕೋಟಿ ವೆಚ್ಚದಲ್ಲಿ ಪಿಲಿಕುಳದಲ್ಲಿ 3ಡಿ ತಾರಾಲಯ ನಿರ್ಮಾಣಗೊಳ್ಳುತ್ತಿದ್ದು, ಬಹುಸಂಖ್ಯಾತ ಮಂಗಳೂರಿನ ಬಹುಸಂಖ್ಯಾತ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಇದು ಸಹಾಯಕವಾಗಲಿದೆ. ತಾರಾಲಯದಲ್ಲಿ 200 ಮಂದಿ ಏಕಕಾಲದಲ್ಲಿ ವೀಕ್ಷಿಸಬಹುದಾದ 3ಡಿ ಥಿಯೇಟರ್’ನ್ನು ವ್ಯವಸ್ಥೆಗೊಳಿಸಲಾಗಿದೆ. ಇದರಲ್ಲಿ ಖಗೋಳಶಾಸ್ತ್ರ, ವ್ಯಾಮಶಾಸ್ತ್ರ ಇತ್ಯಾದಿಗಳಿಗೆ ಫಿಲ್ಮ್ ಶೋ ಹಾಗೂ ಪೂರಕ ಚಟುವಟಿಕೆಗಳನ್ನು ಏರ್ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English