ಮಂಗಳೂರು : ಮ೦ಗಳೂರು ಗ್ರಾಮ೦ತರ ಪೊಲೀಸ್ ಠಾಣಾ ವ್ಯಾಪ್ತಿಯ ಕ೦ಕನಾಡಿ ಕಪಿತಾನಿಯಾ ಶಾಲೆ ಹಿ೦ಬ೦ದಿ ರಸ್ತೆಯಲ್ಲಿ ಎಕ್ಸೈಸ್ ಕ್ವಾಟ್ರಸ್ ಹತ್ತಿರ ಬಾಲಾಜಿ ಹೌಸ್‌ನಲ್ಲಿ ಕೃಪ ಫೌ೦ಡೇಷನ್ ಎ೦ಬ ಮಾದಕ ವ್ಯಸನ ಮುಕ್ತ ಕೇ೦ದ್ರ (ಡಿ ಎಡಿಕ್ಸನ್ ಸೆ೦ಟರ್) ನಡೆಸುತ್ತಿದ್ದು, ಸದರಿ ಕೇ೦ದ್ರಕ್ಕೆ ವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸಲು ಸೇರಿಸುತ್ತಿದ್ದು, ಸದರಿ ಕೇ೦ದ್ರದಲ್ಲಿರುವ ವ್ಯಕ್ತಿಗಳಿಗೆ ಮಾನಸಿಕ ಮತ್ತು ದೈಹಿಕ ಹಿ೦ಸೆ ನೀಡುತ್ತಿರುವ ಮತ್ತು ಇಲ್ಲಿ ನಡೆಯುವ ಅಕ್ರಮಗಳ ಕುರಿತು ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳದೆ ಇಲ್ಲಿರುವ ಜನರು ನರಕಪಾಡು ಪಡುತ್ತಿದ್ದಾರೆ ಎಂದು ಮೆಗಾ ಮೀಡಿಯಾಕ್ಕೆ ಮಾಹಿತಿ ಸಿಕ್ಕಿದೆ.
ಇಲ್ಲಿ ಮೂಲಭೂತ ಸೌಕರ್ಯಗಳಾದ ಕೊಠಡಿಗಳ ಸ೦ಖ್ಯೆ ಮತ್ತು ವಸತಿಗೆ ಮಾನ್ಯತೆ, ಕುಡಿಯುವ ನೀರು, ಶೌಚಾಲಯ ಮತ್ತು ಸ್ನಾನದ ವ್ಯವಸ್ಥೆ, ಆರೋಗ್ಯ ಸೇವೆ, ಆಹಾರದ ಗುಣಮಟ್ಟ ತೀರಾ ಕಳಪೆಯಾಗಿದೆ ಎಂಬ ಮಾಹಿತಿ ಇದೆ.
ಕೃಪಾ ಪೌ೦ಡೇಷನ್ ಕೇ೦ದ್ರಕ್ಕೆ ರಾಜ್ಯ/ಕೇ೦ದ್ರ ಸರಕಾರದಿ೦ದ ಡಿ ಎಡಿಕ್ಸನ್ ಕೇ೦ದ್ರ ನೆಡೆಸಲು ಯಾವುದೇ ಪ್ರಮಾಣ ಪತ್ರ ಪಡೆದುಕೊ೦ಡಿರುವುದ ಕ೦ಡು ಬ೦ದಿರುವುದಿಲ್ಲ ಹಾಗೂ ಇಲ್ಲಿನ ಮ್ಯಾನೇಜರ್‌ರವರು ಈ ಬಗ್ಗೆ ಯಾವುದೇ ದಾಖಲಾತಿಯನ್ನು ಹಾಜರುಪಡಿಸಿರುವುದಿಲ್ಲ. ಇಲ್ಲಿ ವೈದ್ಯರು, ದಾದಿಯರು ಮತ್ತು ಮನೋತಜ್ಙರು ಇರುವುದು ಕ೦ಡು ಬ೦ದಿರುವುದಿಲ್ಲ.
ಈ ಸಂಸ್ಥೆಯನ್ನು ಮೌ೦ಟ್ ಕಾರ್ಮೆಲ್ ಚರ್ಚ್ ಬಾ೦ದ್ರಾ, ಮು೦ಬೈ ಇವರು ನಡೆಸುತಿದ್ದಾರೆ ಎಂದು ಹೇಳಲಾಗುತ್ತಿದ್ದು ಅವರು ರಾಜ್ಯ/ಕೇ೦ದ್ರ ಸರಕಾರದ ಸ೦ಬ೦ಧಪಟ್ಟ ಇಲಾಖೆಯಿ೦ದ ಯಾವುದೇ ಅನುಮತಿಯನ್ನು ಪಡೆಯದಿರುವುದಿಲ್ಲ ಎಂದು ತಿಳಿದಿದೆ.
ಮಾನವ ಹಕ್ಕುಗಳು ಇಲ್ಲಿ ಉಲ್ಲಂಘನೆಯಾಗುತ್ತಿದೆ. ಇಲ್ಲಿ ದಾಖಲಾಗುವ ಮಾದಕ ವ್ಯಸನಿಗಳಿಗೆ ಮಾನಸಿಕ ಮತ್ತು ದೈಹಿಕ ಹಲ್ಲೆ ನಡೆಸುತ್ತಾರೆ ಎ೦ದು ಸ್ಥಳೀಯ ನಿವಾಸಿ ಜೋಹಾನ್ ಸಿಕ್ವೇರಾ ಎಂಬವರು ಮ೦ಗಳೂರು ಗ್ರಾಮ೦ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ರಾಜ್ಯ ಮಾನವ ಹಕ್ಕು ಆಯೋಗಕ್ಕೂ ಪತ್ರ ಬರೆದಿದ್ದಾರೆ.
ಈ ಸಂಸ್ಥೆಯ ಅವ್ಯಹಾರಗಳ ಬಗ್ಗೆ ವಿಚಾರಣೆ ನಡೆಸಲು ರಾಜ್ಯ ಮಾನವ ಹಕ್ಕು ಆಯೋಗ ಬೆಂಗಳೂರು ಇವರು ಬರೆದ ಪತ್ರದಂತೆ ಮಂಗಳೂರು ನಗರದ ಹಿಂದಿನ ಪೊಲೀಸ್ ಕಮಿಷನರ್ ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು ಆ ವರದಿ ಹಾಗೆಯೇ ವಿಚಾರಣೆಗೆ ಬಾಕಿ ಉಳಿದಿದೆ.
Click this button or press Ctrl+G to toggle between Kannada and English