ಐವನ್ ಡಿಸೋಜ ಮನೆಯ ಕ್ರಿಸ್‌ಮಸ್ ಸಂಭ್ರಮದಲ್ಲಿ ಹಾಡಿದ ಮೇಯರ್ ಕವಿತಾ ಸನಿಲ್

4:24 PM, Monday, December 25th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

ivan-desouzaಮಂಗಳೂರು: ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಸಂಭ್ರಮ ಕೂಟದಲ್ಲಿ ಮೇಯರ್ ಕವಿತಾ ಸನಿಲ್ ಹಾಡೊಂದನ್ನು ಹಾಡಿ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು.

ಕರಾಟೆ ಚಾಂಪಿಯನ್ ಆಗಿರುವ ಮೇಯರ್ ಕವಿತಾ ಸನಿಲ್, ನೃತ್ಯ, ಹಾಡಿನ ಮೂಲಕ ಈಗಾಗಲೇ ಗಮನ ಸೆಳೆದವರು. ಇಂದು ಕ್ರಿಸ್‌ಮಸ್ ಸಂಭ್ರಮದಂಗವಾಗಿ ಸಂಗೀತ ರಸಮಂಜರಿಯನ್ನೂ ಆಯೋಜಿಸಲಾಗಿತ್ತು. ಮೇಯರ್ ಕವಿತಾ ಸನಿಲ್‌ರವರು ಐವನ್ ಡಿಸೋಜ ಮತ್ತು ಅವರ ಕುಟುಂಬದವರಿಗೆ ಕ್ರಿಸ್‌ಮಸ್ ಶುಭಾಶಯ ಹೇಳಿದ ಬಳಿಕ ‘ತೇರೆ ಮೇರೆ ಬೀಚ್ ಮೇ…’ ಹಿಂದಿ ಚಲನಚಿತ್ರ ಹಾಡೊಂದನ್ನು ಹಾಡಿದರು.

ivan-desouza-2ಅಲ್ಲಿ ಸೇರಿದ್ದವರು ಶಿಳ್ಳೆ ಹಾಗೂ ಕರತಾಡನದ ಮೂಲಕ ಅವರನ್ನು ಪ್ರೋತ್ಸಾಹಿಸಿದರು. ಬಳಿಕ ಅಲ್ಲಿದ್ದ ಸಭಿಕರ ಕೋರಿಕೆಯ ಮೇರೆಗೆ ಮೇಯರ್ ‘‘ಏ ಮೆರಾ ದಿಲ್’’ ಹಿಂದಿ ಹಾಡು ಹಾಡಿದರು. ಜತೆಯಲ್ಲಿದ್ದ ಸಂಗೀತ ರಸಮಂಜರಿ ತಂಡದ ಸದಸ್ಯರು ದನಿಗೂಡಿಸಿದರು.

ಇದೇ ಸಂದರ್ಭ ಅಲ್ಲಿ ಉಪಸ್ಥಿತರಿದ್ದ ಕಾರ್ಪೊರೇಟರ್ ಅಬ್ದುಲ್ ಲತೀಫ್ ‘‘ಪಲ್ ಪಲ್ ದಿಲ್ ಕೆ ಪಾಸ್….’’ ಹಿಂದಿ ಚಲನಚಿತ್ರ ಹಾಡೊಂದನ್ನು ಹಾಡಿದರು. ಅವರ ಜತೆ ಐವನ್ ಡಿಸೋಜ ಕೂಡಾ ಹಾಡಿ ಕ್ರಿಸ್‌ಮಸ್ ಸಂಭ್ರಮ ಹಂಚಿಕೊಂಡರು. ಕ್ರಿಸ್‌ಮಸ್ ಸಂಭ್ರಮದ ಅಂಗವಾಗಿ ಐವನ್ ಡಿಸೋಜ ಮನೆಯಲ್ಲಿ ಔತಣ ಕೂಟವನ್ನು ಆಯೋಜಿಸಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English