ದ್ವೇಷ ಮತ್ತು ಉದಾಸೀನತೆಯನ್ನು ತ್ಯಜಿಸಿ ಪರಸ್ಪರರನ್ನು ಪ್ರೀತಿಸಲು ಕ್ರಿಸ್ಮಸ್ ನಮಗೆ ಆಹ್ವಾನಿಸುತ್ತದೆ

Thursday, December 23rd, 2021
Mangalore Bishop

ಮಂಗಳೂರು  : ಕ್ರಿಸ್ಮಸ್ ಎಂದರೆ ಕನ್ಯಾ ಮರಿಯಮ್ಮನವರ ಮೂಲಕ ಆದ ದೇವ ಪುತ್ರ ಯೇಸುಕ್ರಿಸ್ತರ ಜನನ ಎಂಬುದು ಇದರಲ್ಲಿರುವ ಏಕಮಾತ್ರ ಹೊಸ ವಿಷಯ. ಇದೊಂದು ಮಗದೊಮ್ಮೆ ಪುನರಾವರ್ತನೆಗೊಳ್ಳದ ಅನನ್ಯ ಘಟನೆ. ಆ ಪವಿತ್ರ ರಾತ್ರಿಯಂದು ಕುರುಬರಿಗೆ ದೇವದೂತನು ಹೀಗೆಂದನು “ಇಗೋ ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭ ಸಂದೇಶವನ್ನು ನಿಮಗೆ ತಿಳಿಸುತ್ತೇನೆ”. ನಿಜವಾಗಿಯೂ ಮಾನವ ರೂಪದಲ್ಲಿರುವ ದೇವರನ್ನು ಅನೇಕರು ಅನುಭವ ಹೊಂದಿದರು ಹಾಗೂ ಸಂತೋಷಪಟ್ಟರು. “ಜೀಸಸ್” ಅಥವಾ “ಯೇಸು” ಎಂದರೆ “ದೇವರು ರಕ್ಷಕರು” ಎಂದು ಅರ್ಥವಾಗುತ್ತದೆ. ಯೇಸು ನಮ್ಮನ್ನು […]

ರೊಜಾರಿಯೋ ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್ ಸಾಮೂಹಿಕ ಪ್ರಾರ್ಥನೆ

Friday, December 25th, 2020
Bhisop

ಮಂಗಳೂರು : ರೊಜಾರಿಯೋ ಕೆಥೆಡ್ರಲ್‌ನಲ್ಲಿ ಗುರುವಾರ ರಾತ್ರಿ ಬಿಷಪ್ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಹಬ್ಬದ ಬಲಿಪೂಜೆ ನಡೆಯಿತು. ಕೆಥೆಡ್ರಲ್‌ನ ರೆಕ್ಟರ್ ವಂ. ಆಲ್ಪ್ರೆಡ್ ಜೆ.ಪಿಂಟೋ, ಸಹಾಯಕ ಗುರು ವಂ. ವಿನೋದ್ ಲೋಬೋ, ರೊಸಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ವಿಕ್ಟರ್ ಡಿಸೋಜ ಭಾಗವಹಿಸಿದ್ದರು. ಕೊರೋನ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲೆಡೆ ಸರಳವಾಗಿ ಹಬ್ಬದ ಆಚರಣೆ ಆಯೋಜಿಸಲಾಗಿದೆ. ಈ ಬಾರಿ ಸಾಂತಾಕ್ಲಾಸ್ ಸಂಭ್ರಮವೂ ಇರುವುದಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ […]

ನೈಟ್ ಕರ್ಫ್ಯೂವನ್ನು ಹಿಂದಕ್ಕೆ ಪಡೆಯಲು ಮುಖ್ಯ ಮಂತ್ರಿಗಳಿಗೆ ಶ್ರೀ ಐವನ್ ಡಿ ಸೋಜ ವಿನಂತಿ

Wednesday, December 23rd, 2020
ivan D souza

ಮಂಗಳೂರು :  ಡಿಸೆಂಬರ್ 23ರಿಂದ ಜನವರಿ 7 ರವರೆಗೆ ಕರ್ನಾಟಕ ರಾಜ್ಯಾದ್ಯಂತ ನೈಟ್ ಕರ್ಫ್ಯೂವನ್ನು ರಾತ್ರಿ10 ರಿಂದ ಬೆಳಿಗ್ಗೆ 6ಗಂಟೆಯವರೆ ಏರಲಾಗಿದ್ದು, ಕ್ರಿಸ್‌ಮಸ್ ಮತ್ತು ಅನೇಕ ಮದುವೆ ಸಮಾರಂಭಗಳು ಸಂಜೆ ಹೊತ್ತಿನಲ್ಲಿ ನಡೆಯಲಿರುವುದರಿಂದ ಅದರಲ್ಲೂ, ಕ್ರಿಸ್‌ಮಸ್ ಡಿಸೆಂಬರ್ 24 ರಂದು ಸಂಜೆ ವೇಳೆ ಎಲ್ಲಾ ಚರ್ಚುಗಳಲ್ಲಿ ಕ್ರಿಸ್‌ಮಸ್ ಪೂಜೆ ಸಂಭ್ರಮ ನಡೆಯಲಿರುವುದರಿಂದ, ದಿನಾಂಕ 24ರಂದು ಸಂಪೂರ್ಣವಾಗಿ ಕರ್ಫ್ಯೂನಿಂದ ವಿನಾಯಿತಿ ನೀಡಬೇಕೆಂದು ಮತ್ತು ಇತರ ದಿನಗಳಲ್ಲಿ ಹಾಕಿರುವಂತೆ ರಾತ್ರಿ 11ರಿಂದ 5ಗಂಟೆಯವರೆಗೆ ಹಾಕಿರುವ ಕರ್ಫ್ಯೂನಲ್ಲಿ ಸಡಿಲಿಕೆ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ವಿನಂತಿಸಿದರು. […]

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ

Wednesday, December 23rd, 2020
nandini burfi

ಮಂಗಳೂರು  : ಕರ್ನಾಟಕ ರಾಜ್ಯದ ರೈತರ ಜೀವನಾಡಿ ಸಂಸ್ಥೆಯಾದ ಕರ್ನಾಟಕ ಹಾಲು ಮಹಾ ಮಂಡಳಿಯು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಶುಭ ಸಂದರ್ಭದಲ್ಲಿ ಗ್ರಾಹಕ ಸ್ನೇಹಿ ಸಿಹಿ ಉತ್ಸವ ಯೋಜನೆಯನ್ನು ಕರ್ನಾಟಕ ರಾಜ್ಯಾದಂತ ದಿನಾಂಕ 24.12.2020 ರಿಂದ 07.01.2020 ರವರೆಗೆ ಆಚರಿಸುತ್ತಿದೆ. ನಂದಿನಿ ಸಿಹಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದೇ ಗರಿಷ್ಠ ಮಾರಾಟ ದರದಲ್ಲಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ. ನಂದಿನಿ ವಿವಿಧ ಶ್ರೇಣಿಯ ಸಿಹಿ ಉತ್ಪನ್ನಗಳು ರಾಜ್ಯಾದಂತ ಇರುವ ನಂದಿನಿ ಡೀಲರ್ ಕೇಂದ್ರಗಳಲ್ಲಿ, ನಂದಿನಿ […]

ಕ್ರಿಸ್ಮಸ್ ಹಾಗೂ ಹೊಸ ವರ್ಷ ಸರಳ ಸಂಭ್ರಮಾಚರಣೆ – ಜಿಲ್ಲಾಧಿಕಾರಿ ಆದೇಶ

Tuesday, December 22nd, 2020
chritsmas

ಮಂಗಳೂರು : ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ಸರಕಾರವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕೋವಿಡ್-19 ಸೋಂಕಿನ ಎರಡನೇ ಅಲೆ ಹರಡುವಿಕೆಯನ್ನು ನಿಯಂತ್ರಿಸಲು ಇನ್ನೂ ಹೆಚ್ಚು ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇರುವ ಹಿನ್ನೆಲೆ ಕ್ರಿಸ್ಮಸ್ ಹಾಗೂ 2021ರ ಹೊಸ ವರ್ಷ ಸಂಭ್ರಮಾಚರಣೆಯನ್ನು ಸರಳವಾಗಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಆಚರಿಸಬೇಕು. ಅದರಂತೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 26(1)(2)(3) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ […]

ಐವನ್ ಡಿಸೋಜ ಮನೆಯ ಕ್ರಿಸ್‌ಮಸ್ ಸಂಭ್ರಮದಲ್ಲಿ ಹಾಡಿದ ಮೇಯರ್ ಕವಿತಾ ಸನಿಲ್

Monday, December 25th, 2017
ivan-desouza

ಮಂಗಳೂರು: ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಸಂಭ್ರಮ ಕೂಟದಲ್ಲಿ ಮೇಯರ್ ಕವಿತಾ ಸನಿಲ್ ಹಾಡೊಂದನ್ನು ಹಾಡಿ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು. ಕರಾಟೆ ಚಾಂಪಿಯನ್ ಆಗಿರುವ ಮೇಯರ್ ಕವಿತಾ ಸನಿಲ್, ನೃತ್ಯ, ಹಾಡಿನ ಮೂಲಕ ಈಗಾಗಲೇ ಗಮನ ಸೆಳೆದವರು. ಇಂದು ಕ್ರಿಸ್‌ಮಸ್ ಸಂಭ್ರಮದಂಗವಾಗಿ ಸಂಗೀತ ರಸಮಂಜರಿಯನ್ನೂ ಆಯೋಜಿಸಲಾಗಿತ್ತು. ಮೇಯರ್ ಕವಿತಾ ಸನಿಲ್‌ರವರು ಐವನ್ ಡಿಸೋಜ ಮತ್ತು ಅವರ ಕುಟುಂಬದವರಿಗೆ ಕ್ರಿಸ್‌ಮಸ್ ಶುಭಾಶಯ ಹೇಳಿದ ಬಳಿಕ ‘ತೇರೆ ಮೇರೆ […]

ಮಂಗಳೂರಲ್ಲಿ ಮತ್ತೆ ಗ್ಯಾಂಗ್‌ವಾರ್‌… ಕ್ರಿಸ್‌ಮಸ್‌ ದಿನವೇ ರೌಡಿ ಮೆರ್ಲಿಕ್‌ ಹತ್ಯೆ

Monday, December 25th, 2017
gang-rape

ಮಂಗಳೂರು: ಶಾಂತವಾಗಿದ್ದ ಕಡಲೂರಿನಲ್ಲಿ ಮತ್ತೆ ಗ್ಯಾಂಗ್‌ವಾರ್‌ ಸದ್ದು ಮಾಡಿದೆ. ಕ್ರಿಸ್‌ಮಸ್‌ ಹಬ್ಬದ ದಿನವೇ ರೌಡಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಂಗಳೂರಿನ ವೆಲೆನ್ಸಿಯಾದಲ್ಲಿ ಘಟನೆ ನಡೆದಿದ್ದು, ಮೆರ್ಲಿಕ್ ಡಿಸೋಜಾ(25) ಹತ್ಯೆಯಾದ ರೌಡಿ. ನಿನ್ನೆ ತಡರಾತ್ರಿ ಎರಡು ಗುಂಪುಗಳ ನಡುವೆ ತಲ್ವಾರ್‌ ಕಾಳಗ ನಡೆದಿದೆ ಎನ್ನಲಾಗಿದ್ದು, ರೌಡಿ ಮಂಕಿಸ್ಟ್ಯಾಂಡ್ ವಿಜಯ್ ಸಹಚರ ಗೋರಿಗುಡ್ಡ ನಿವಾಸಿಯಾದ ಮೆರ್ಲಿಕ್‌ನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಹಬ್ಬದ ದಿನದಂದೇ ಗ್ಯಾಂಗ್‌ವಾರ್‌ ನಡೆದು ಓರ್ವನ ಹತ್ಯೆಗೈದಿರುವುದು ನಗರದಲ್ಲಿ ಮತ್ತೆ ಅಶಾಂತಿಗೆ ಕಾರಣವಾಗಿದೆ. ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಳ್ವಾಸ್‍ನಲ್ಲಿ ಕ್ರಿಸ್ಮಸ್ ಸಂಭ್ರಮ

Thursday, December 21st, 2017
alwas

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ಕ್ರಿಸ್ಮಸ್ 2017 ಕಾರ್ಯಕ್ರಮವನ್ನು ವಿದ್ಯಾಗಿರಿಯಲ್ಲಿರು ನುಡಿಸಿರಿ ವೇದಿಕೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು. ಮಂಗಳೂರು ಧರ್ಮ ಪ್ರಾಂತದ ಜ್ಯುಡಿಷಿಯಲ್ ವಿಕಾರ್ ವಂ. ವೋಲ್ಟರ್ ಡಿ’ಮೆಲ್ಲೊ ಕ್ರಿಸ್ಮಸ್ ಸಂದೇಶ ನೀಡಿ, ಭಯೋತ್ಪಾದನೆ, ಅಶಾಂತಿಯಂತಹ ಪರಿಸ್ಥಿತಿಯಲ್ಲಿ ಶಾಂತಿಯ ಮರು ಸ್ಥಾಪನೆಯಾಗಬೇಕು. ಹೃದಯಾಂತರಾಳದಲ್ಲಿ ಪ್ರೀತಿ, ವಿಶ್ವಾಸ, ಸಹೋದರತೆಯ ಭಾವನೆ ಪ್ರತಿಯೊಂದು ಮತದ ಜನರಲ್ಲಿ ಮೂಡಬೇಕು. ಹೃದಯವಂತರಾಗಿ ಶಾಂತಿಯನ್ನು ಅನುಭವಿಸುವುದು ಆದ್ಮಾತ್ಮದ ಅನುಭೂತಿ ಪಡೆಯಲು ಸಾಧ್ಯವಾಗುತ್ತದೆ. ದೇವರ ಮೇಲಿನ ಭಕ್ತಿ ಸುಮನಸ್ಸನ್ನು ನೀಡುತ್ತದೆ. ವಿಶ್ವದ ಶಾಂತಿಯ ಪ್ರತೀಕವಾಗಿರುವ […]