ಬ್ರಹ್ಮಾವರ : 10ನೇ ವರ್ಷದ ಕಿಶೋರ ಯಕ್ಷಗಾನಕ್ಕೆ ವಿದ್ಯುಕ್ತ ತೆರೆ

11:00 AM, Tuesday, December 26th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

yakshaganaಬ್ರಹ್ಮಾವರ:ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮ. ಈ ಹಿನ್ನಲೆಯಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ 11 ವರ್ಷಗಳ ಹಿಂದೆ ಪ್ರಾರಂಭಿಸಲಾದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಕಾರ್ಯಕ್ರಮದ ಹತ್ತನೇ ವರ್ಷದ ಕಿಶೋರ ಯಕ್ಷಗಾನ ರವಿವಾರ ಇಲ್ಲಿ ವಿದ್ಯುಕ್ತವಾಗಿ ಮುಕ್ತಾಯಗೊಂಡಿತು.

ಕಿಶೋರ ಯಕ್ಷಗಾನ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಹಾಗೂ ಯಕ್ಷಶಿಕ್ಷಣದ ಸ್ಥಾಪಕ ಕೆ.ರಘುಪತಿ ಭಟ್ ಮಾತನಾಡಿ, ತಾನು ಶಾಸಕನಾಗಿ ಆರಂಭಿಸಿದ ಈ ಯೋಜನೆ ಪ್ರಕೃತ ಶಾಸಕರಾದ ಪ್ರಮೋದ್ ಮಧ್ವರಾಜ್‌ರ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂದುವರಿದಿರುವುದು ಸಂತೋಷದ ವಿಷಯ ಎಂದರು.

ಇದೇ ಸಂದರ್ಭದಲ್ಲಿ 2018ರ ಯಕ್ಷಗಾನ ಕಲಾರಂಗದ ಕ್ಯಾಲೆಂಡರ್‌ನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನೀ.ಬೀ.ಬಲ್ಲಾಳ ಬಿಡುಗಡೆ ಗೊಳಿಸಿದರು. ಬಾರಕೂರಿನ ಪ್ರವೀಣ್ ಗಡಿಯಾರ್‌ರನ್ನು ಗೌರವಿಸಲಾಯಿತು. ಕಿಶೋರ ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರ ಮೂಲಕ ವಿತರಿಸಲಾಯಿತು. ಯಕ್ಷಗುರು ಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಯಕ್ಷಗುರು ಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಅತಿಥಿಗಳಾಗಿ ಭಾಗವಹಿಸಿ ಶುಕೋರಿದರು. ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಹಾರಾಡಿ ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಧಾನಸಭಾ ವ್ಯಾಪ್ತಿಯ 43 ಪ್ರೌಢಶಾಲೆಗಳ 44 ಪ್ರದರ್ಶನಗಳಲ್ಲಿ ಒಟ್ಟು 1120 ವಿದ್ಯಾರ್ಥಿಗಳು ( 520 ಬಾಲಕರು, 600 ಬಾಲಕಿಯರು) ಭಾಗವಹಿಸಿದ್ದರು.

ರಾಜ್ಯದ ಹೆಚ್ಚಿನ ಜಿಲ್ಲೆಗಳ ವಿದ್ಯಾರ್ಥಿಗಳು ಇದರಲ್ಲಿ ಪಾತ್ರ ವಹಿಸಿರುವುದು ಯಶಸ್ಸಿನ ಸಂಕೇತ. ಜಾತಿ, ಮತ, ಲಿಂಗ, ಪ್ರಾದೇಶಿಕ ಭಿನ್ನತೆ, ಭಾಷೆ ಎಲ್ಲವನ್ನೂ ಮೀರಿ ವಿದ್ಯಾರ್ಥಿಗಳು ಒಂದಾಗಿ ಬಣ್ಣ ಹಾಕಿ ವೇಷಧರಿಸಿ ಕುಣಿದಿದ್ದಾರೆ. ಕರಾವಳಿಯ ಮಣ್ಣಿನ ಕಲೆಯನ್ನು, ಕನ್ನಡ ಭಾಷೆಯನ್ನು ಜೀವಂತವಾಗಿರಿಸುವಲ್ಲಿ ಕಿಶೋರ ಯಕ್ಷ ಅಭಿಯಾನ ಕಳೆದ 10ವರ್ಷಗಳಿಂದ ಯಶಸ್ವಿಯಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು.

ಟ್ರಸ್ಟ್‌ನ ವಿಶ್ವಸ್ಥ ನಾರಾಯಣ ಎಂ ಹೆಗಡೆ ಸ್ವಾಗತಿಸಿದರು. ಕೋಶಾಧಿಕಾರಿ ಸುಬ್ರಹ್ಮಣ್ಯ ಬಾಸ್ರಿ, ಸಲಹೆಗಾರ ಟಿ. ಬಾಸ್ಕರ ರೈ ಉಪಸ್ಥಿತರಿದ್ದರು. ಪ್ರದರ್ಶನ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಬಿ.ಆರ್. ವಂದಿಸಿದರು. ಬಳಿಕ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರಿಂದ ‘ತಾಮ್ರಧ್ವಜ ಕಾಳಗ’ ಯಕ್ಷಗಾನ ಪ್ರದರ್ಶನಗೊಂಡಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English