ದಕ್ಷಿಣ ಕನ್ನಡಕ್ಕೆ 2017 ಸಂತಸಕ್ಕಿಂತ ಸಂಕಟವೇ ಹೆಚ್ಚು!

11:24 AM, Wednesday, December 27th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

dakshina-kannadaಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗಂತೂ 2017 ಸಂತೋಷಕ್ಕಿಂತ ಸಂಕಟವನ್ನೇ ಹೆಚ್ಚು ನೀಡಿದೆ ಎಂದರೆ ತಪ್ಪಾಗಲಾರದು. 3-4 ತಿಂಗಳು ಜಿಲ್ಲೆಯ ಹಲವೆಡೆ ನಡೆದ ಅಹಿತಕರ ಘಟನೆಗಳು ಗಂಭೀರ ಸ್ವರೂಪವನ್ನು ಪಡೆದಿದ್ದು, ಬಹುತೇಕ ದಿನಗಳನ್ನು ನಿಷೇಧಾಜ್ಞೆಯಿಂದ ಕಳೆಯಬೇಕಾಯಿತು.

ಇದೆಲ್ಲದರ ನಡುವೆ ಎರಡು ಕೊಲೆಗಳೂ ನಡೆದು ಹೋದವು. ಸೆಲೆಬ್ರಿಟಿಗಳು ಮಂಗಳೂರಿಗೆ ಬಂದು ತಮ್ಮ ಖುಷಿಯನ್ನು ಹಂಚಿಕೊಂಡರು. ಮತ್ತೆ ಕೆಲವರು ತಮ್ಮ ವೈಯಕ್ತಿಕ ಸಾಧನೆಗಳ ಮೂಲಕ ಜಿಲ್ಲೆಗೆ ಕೀರ್ತಿ ತಂದರು.

ಜನವರಿಯಲ್ಲಿ ಚಿತ್ರನಟ ಶಿವಣ್ಣ ಕುಟುಂಬ ಸಹಿತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅದೇ ರೀತಿ ಫೆಬ್ರವರಿಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್ ರೋಡ್‌ಶೋ ನಡೆಸಿದರು. ಏ.ನಲ್ಲಿ ನಟಿ ಐಶ್ವರ್ಯ ರೈ ಅವರ ತಂದೆ ಕೃಷ್ಣರಾಜ್ ಅವರ ಅಸ್ಥಿಯನ್ನು ಮೋಕ್ಷ ಧಾಮವೆನಿಸಿದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯ ನೇತ್ರಾವತಿ-ಕುಮಾರಧಾರ ನದಿಯಲ್ಲಿ ವಿಸರ್ಜನೆ ಮಾಡುವ ಸಲುವಾಗಿ ಐಶ್ವರ್ಯ ರೈ ಕುಟುಂಬ ಸಮೇತ ಮಂಗಳೂರಿಗೆ ಆಗಮಿಸಿದ್ದರು.

ಎತ್ತಿನಹೊಳೆ ಯೋಜನೆ ವಿರೋಧಿಸಿ ಉಗ್ರ ಪ್ರತಿಭಟನೆ ನಡೆಯಿತು ಈ ವೇಳೆ ಸಂಸದರ ಬಂಧನವೂ ಆಗಿತ್ತು. ಯೋಜನೆ ನಿಲ್ಲಿಸದಿದ್ದರೆ ಪ್ರತ್ಯೇಕ ತುಳು ರಾಜ್ಯಕ್ಕೆ ಒತ್ತಡ ಹಾಕುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು. ಇನ್ನು, ಹಿಂದೂ ಸಂಘಟನೆಗಳ ವಿರೋಧದ ಮಧ್ಯೆಯೂ ಸಿಪಿಐಎಂ ಆಯೋಜಿಸಿದ್ದ ಕೋಮು ಸೌಹಾರ್ದ ಸಮಾವೇಶದಲ್ಲಿ ಭಾಗವಹಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸಿದ್ದರು.
ಮಾ.ನಲ್ಲಿ ಯಕ್ಷಗಾನದ ಮೇರು ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಪಾತ್ರ ನಿರ್ವಹಿಸುತ್ತಲೇ ಇಹಲೋಕ ತ್ಯಜಿಸಿದ್ದರು.

ಕೈಕಂಬ ನಿವಾಸಿ ಅಹಮ್ಮದ್ ಖುರೇಶಿ ಎಂಬ ಯುವಕನ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಕಾರ್ಯಕರ್ತರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇನ್ನು, ರಾಜ್ಯವನ್ನೇ ಆತಂಕಕ್ಕೆ ಈಡು ಮಾಡಿದ್ದು ಕಲ್ಲಡ್ಕ ಪ್ರಕರಣ, ಕಲಾಯಿ ಅಶ್ರಫ್ ಕೊಲೆಗೆ ಪ್ರತೀಕಾರವಾಗಿ 13 ದಿನಗಳಲ್ಲಿ ಅದೇ ತಾಲೂಕಿನ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಮಡಿವಾಳನ ಕೊಲೆ ನಡೆಯಿತು.

ಇನ್ನು ಜು.ನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಾವ್ಯಾ (16) ಎಂಬ ವಿದ್ಯಾರ್ಥಿನಿ ಸಾವು ಕರಾವಳಿಯನ್ನು ತಲ್ಲಣಗೊಳಿಸಿತ್ತು.

ಈ ವರ್ಷ ಅನೇಕ ದಿಗ್ಗಜರಿಗೆ ವಿದ್ಯಾರ್ಜನೆ ಮಾಡಿದ ಮಂಗಳೂರು ಸರ್ಕಾರಿ ಕಾಲೇಜು (ಮಂಗಳೂರು ವಿವಿ ಕಾಲೇಜು) 150ನೇ ವರ್ಷದ ಸಂಭ್ರಮ ಆಚರಿಸಿತು. ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು ಇತಿಹಾಸದ ಪುಟದಲ್ಲಿ ದಾಖಲೆಯಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English