ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲು ಬಿಡುವುದಿಲ್ಲ : ಪಿಣರಾಯಿ ವಿಜಯನ್

Wednesday, March 31st, 2021
pinarai

ಕಾಸರಗೋಡು : ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ವಿ.ವಿ. ರಮೇಶನ್, ಕಾಸರಗೋಡು ಕ್ಷೇತ್ರದ ಎಂ.ಎ. ಲತೀಫ್ ಪರ ಚುನಾವಣಾ ಪ್ರಚಾರದಲ್ಲಿರುವ ಕೇರಳ ಮುಖ್ಯಮಂತ್ರಿ  ಪಿಣರಾಯಿ ವಿಜಯನ್ ಕೇರಳದಲ್ಲಿ ಈ ಬಾರಿ  ಒಂದು ಸ್ಥಾನಕ್ಕೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಬಿಜೆಪಿ  2019 ರಲ್ಲಿ ಕೇವಲ ಒಂದೇ ಒಂದು ಸ್ಥಾನದಲ್ಲಿ ಖಾತೆ ತೆರೆದಿದ್ದು ನೇಮಂನಲ್ಲಿ ಗೆದ್ದಿತ್ತು. ಈ ಬಾರಿ ಈ ಖಾತೆಯನ್ನು ಮುಚ್ಚುತ್ತೇವೆ,   ಕಾಂಗ್ರೆಸ್ ನ ಒಳಒಪ್ಪಂದದಿಂದ ಬಿಜೆಪಿ ಗೆದ್ದಿತ್ತು. ಈ ಬಾರಿ ಅದನ್ನು ಬಂದ್ ಮಾಡುತ್ತೇವೆ ಎಂದು ಹೇಳಿದರು. ಮೊಗ್ರಾಲ್ ಶಾಲಾ ಮೈದಾನ ದಲ್ಲಿ ಮಂಜೇಶ್ವರ […]

ಮಂಜೇಶ್ವರ ಮೀನುಗಾರಿಕಾ ಬಂದರು ಲೋಕಾರ್ಪಣೆ

Thursday, October 1st, 2020
Fishries harbor

ಕಾಸರಗೋಡು : ಮಂಜೇಶ್ವರ ಮೀನುಗಾರಿಕಾ ಬಂದರುನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಕಾನ್ಫರೆನ್ಸ್ ಮೂಲಕ  ಉದ್ಘಾಟಿಸಿದರು. ಜೊತೆಗೆ ಕೊಯಿಲಾಂಡಿಯ ಬಂದರನ್ನೂ ಅವರು ಉದ್ಘಾಟಿಸಿದರು. ಮಂಜೇಶ್ವರ ಬಂದರು ಒಟ್ಟು 48.80 ಕೋಟಿ ರೂ.ಗಳ ಯೋಜನೆಯಾಗಿದ್ದು, ಇದರಲ್ಲಿ ಶೇ.75 ಕೇಂದ್ರ ಸರಕಾರದ ಪಾಲು, ಶೇ.25 ರಾಜ್ಯ ಸರಕಾರದ ಪಾಲು ಇರುವುದು. ಯೋಜನೆಗಾಗಿ ಈಗಾಗಲೇ 45.71 ಕೋಟಿ ರೂ. ವೆಚ್ಚ  ಮಾಡಲಾಗಿದೆ. ಬೆಸ್ತರು ನಿಜವಾಗಿಯೂ ಕರಾವಳಿಯ ರಕ್ಷಕರು. ಯಾವುದೇ ದುರಂತ ಸಂದರ್ಭದಲ್ಲಿ ಸೈನಿಕರಂತೆ ಸೇವೆ ಸಲ್ಲಿಸುತ್ತಿರುವ ಬೆಸ್ತರ ಬಗ್ಗೆ ಸರಕಾರ ಕಾಳಜಿ ಹೊಂದಿದೆ. […]

ಪಾರೆಕಟ್ಟೆಯಲ್ಲಿ ನೂತನ ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರ ಉದ್ಘಾಟನೆ

Friday, July 24th, 2020
police training

ಕಾಸರಗೋಡು: ಜಾಗತಿಕ ಗುಣಮಟ್ಟದ ತರಬೇತಿ ಪೊಲೀಸರಿಗೆ ನೀಡುವ ಉದ್ದೇಶದಿಂದ ಪಾರೆಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಕೇಂದ್ರವನ್ನು ಗುರುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ತರಬೇತಿಗಾಗಿ ಆಗಮಿಸುವ ಮಂದಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ವಿಜಯನ್ ಹೇಳಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಉಪಾಧ್ಯಕ್ಷ ದಿವಾಕರ ಆಚಾರ್ಯ, ಡಿ.ವೈ.ಎಸ್.ಪಿ. ಹರಿಶ್ಚಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಸ್ವಾಗತಿಸಿ, ಸಹಾಯಕ ಜಿಲ್ಲಾ […]

ಸಿಎಎ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ : ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಲು ಕೇರಳ ಸಿಎಂ ಒತ್ತಾಯ

Tuesday, January 14th, 2020
pinarayi

ನವದೆಹಲಿ : ವಿವಾದಾತ್ಮಕ ಪೌರತ್ವ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೂಲಕ ಸುಪ್ರೀಂ ನಲ್ಲಿ ಸಿಎಎ ಕಾನೂನನ್ನು ಪ್ರಶ್ನಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ. ಕೇರಳ ವಿಧಾನಸಭೆ ಕಳೆದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು. ಎಲ್ಲಾ ಪಕ್ಷದ ಶಾಸಕರೂ ಸಿಎಎ ಕೇರಳದಲ್ಲಿ ಜಾರಿಯಾಗಬಾರದು ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದರು. ಅಲ್ಲದೆ, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದ […]

ಪ್ರವಾಹ ಪರಿಸ್ಥಿತಿ ಎದುರಿಸಲು ಕೇರಳ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು: ಹೆಚ್. ಡಿ. ಕುಮಾರಸ್ವಾಮಿ

Friday, August 10th, 2018
kumarswamy

ಬೆಂಗಳೂರು: ಕೇರಳದಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಪ್ರವಾಹದಲ್ಲಿ 22 ಜನರು ಸಾವನ್ನಪ್ಪಿರುವ ಕುರಿತು ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು, ಕೇರಳಕ್ಕೆ 10 ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿ ರವಾನೆ ಮಾಡಲು ಆದೇಶಿಸಿದ್ದಾರೆ. ಆಹಾರ ಸಾಮಾಗ್ರಿಗಳ ಜೊತೆಗೆ ವೈದ್ಯರ ತಂಡ ಕಳುಹಿಸಿ ಕೊಡುವಂತೆ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಟ್ವೀಟ್ ಮಾಡಿರುವ ಸಿಎಂ, ಪ್ರವಾಹ ಪರಿಸ್ಥಿತಿ ಎದುರಿಸಲು ಕೇರಳ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಈಗಾಗಲೇ ಕಬಿನಿಯ ಹಿನ್ನಿರಿನಿಂದ […]

ದಕ್ಷಿಣ ಕನ್ನಡಕ್ಕೆ 2017 ಸಂತಸಕ್ಕಿಂತ ಸಂಕಟವೇ ಹೆಚ್ಚು!

Wednesday, December 27th, 2017
dakshina-kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗಂತೂ 2017 ಸಂತೋಷಕ್ಕಿಂತ ಸಂಕಟವನ್ನೇ ಹೆಚ್ಚು ನೀಡಿದೆ ಎಂದರೆ ತಪ್ಪಾಗಲಾರದು. 3-4 ತಿಂಗಳು ಜಿಲ್ಲೆಯ ಹಲವೆಡೆ ನಡೆದ ಅಹಿತಕರ ಘಟನೆಗಳು ಗಂಭೀರ ಸ್ವರೂಪವನ್ನು ಪಡೆದಿದ್ದು, ಬಹುತೇಕ ದಿನಗಳನ್ನು ನಿಷೇಧಾಜ್ಞೆಯಿಂದ ಕಳೆಯಬೇಕಾಯಿತು. ಇದೆಲ್ಲದರ ನಡುವೆ ಎರಡು ಕೊಲೆಗಳೂ ನಡೆದು ಹೋದವು. ಸೆಲೆಬ್ರಿಟಿಗಳು ಮಂಗಳೂರಿಗೆ ಬಂದು ತಮ್ಮ ಖುಷಿಯನ್ನು ಹಂಚಿಕೊಂಡರು. ಮತ್ತೆ ಕೆಲವರು ತಮ್ಮ ವೈಯಕ್ತಿಕ ಸಾಧನೆಗಳ ಮೂಲಕ ಜಿಲ್ಲೆಗೆ ಕೀರ್ತಿ ತಂದರು. ಜನವರಿಯಲ್ಲಿ ಚಿತ್ರನಟ ಶಿವಣ್ಣ ಕುಟುಂಬ ಸಹಿತ ಕುದ್ರೋಳಿ ಶ್ರೀ ಗೋಕರ್ಣನಾಥ […]

ಆರ್‌ಎಸ್ಎಸ್ ನಾಯಕರು ಕೇರಳದಲ್ಲಿ ತಮ್ಮ ಸಿದ್ಧಾಂತವನ್ನು ಬಿತ್ತಲು ಮಾತ್ರ ಸಾಧ್ಯವಿಲ್ಲ : ಪಿಣರಾಯಿ ವಿಜಯನ್

Saturday, February 25th, 2017
Karavail Souhardha

ಮಂಗಳೂರು : ಸಿಪಿಐಎಂ ಪಕ್ಷದ ಮಂಗಳೂರು ಘಟಕ ನೆಹರೂ ಮೈದಾನದಲ್ಲಿ  ಆಯೋಜಿಸಿದ್ದ ಕೋಮು ಸೌಹಾರ್ದ ಜಾಥಾ ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 1947ರ ಜುಲೈ 17ರಂದು ಆರ್ಗನೈಸರ್ ಎಂಬ ಪತ್ರಿಕೆಗೆ ಬರೆದ ಪ್ರಮುಖ ಲೇಖನವೊಂದರಲ್ಲಿ ಈ ದೇಶದ ಬಾವುಟ ಭಾರತಕ್ಕೆ ತಕ್ಕುದಾದುದಲ್ಲ ಎಂದು ಪ್ರತಿಪಾದಿಸಿದ್ದ ಆರ್‌‌ಎಸ್‌‌ಎಸ್‌ ದೇಶದಲ್ಲಿ ನಡೆದ ಎಲ್ಲಾ ಕೋಮು ಗಲಭೆಗಳಲ್ಲೂ ಕೈವಾಡವಿದೆ. ಕೋಮು ದ್ವೇಷದ ಕಿಡಿಗಳನ್ನು ಯುವಕರಲ್ಲಿ ಹಚ್ಚಿ ವಿಷ ಬೀಜವನ್ನು ಬಿತ್ತುವ ಮೂಲಕ ಗಲಭೆಗೆ ಕಿಚ್ಚು ಹಚ್ಚುತ್ತಿದ್ದಾರೆ ಎಂದು  ಆರೋಪಿಸಿದ್ದಾರೆ. ಆರ್‌‌ಎಸ್‌‌ಎಸ್‌ ಯೋಚನೆ ಇಂದಿಗೂ […]

‘ಕರಾವಳಿ ಸೌಹಾರ್ದ ರ‍್ಯಾಲಿ’ ಯನ್ನು ಯಶಸ್ವಿಗೊಳಿಸಲು ಜಿ.ವಿ.ಶ್ರೀರಾಮರೆಡ್ಡಿ ಮನವಿ

Saturday, February 25th, 2017
shivarama reddy

ಮಂಗಳೂರು  :  ಕರಾವಳಿ ಸೌಹಾರ್ದ ರ‍್ಯಾಲಿ’ ವಿಫಲಗೊಳಿಸಲು ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭೇಟಿಯನ್ನು ತಡೆಯಲು ಯತ್ನಿಸುತ್ತಿರುವ ಸಂಘಪರಿವಾರದ  ಕೃತ್ಯವನ್ನು ಖಂಡಿಸುವುದಾಗಿ ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕರಾವಳಿ ಪ್ರಾಂತ್ಯದಲ್ಲಿ ಕೋಮು ವಾದಿಗಳ ಅಟ್ಟಹಾಸ ನೆಲದ ಸಂಸ್ಕೃತಿಗೆ ಅಪಮಾನವಾಗಿದ್ದು, ದಲಿತ, ಹಿಂದುಳಿದ ವರ್ಗಗಳ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ. ಸಂಘಪರಿವಾರದ ಶಕ್ತಿಗಳ ಬಗ್ಗೆ ದಲಿತ, ಹಿಂದುಳಿದ ವರ್ಗದವರು ಎಚ್ಚೆತ್ತುಕೊಳ್ಳಬೇಕೆಂದು ಹೇಳಿದರು. ಪಿಣರಾಯಿ ವಿಜಯನ್ […]

ಪಿಣರಾಯಿ ವಿಜಯನ್ ಮಂಗಳೂರು ಆಗಮನಕ್ಕೆ ಸೂಕ್ತ ಬಂದೋಬಸ್ತ್

Thursday, February 23rd, 2017
commissioner

ಮಂಗಳೂರು : ಫೆಬ್ರವರಿ 25 ರಂದು ಹಿಂದೂ ಸಂಘಟನೆಗಳು ನೀಡಿರುವ ಕರೆಗೆ  ಸರ್ವೊಚ್ಛ ನ್ಯಾಯಾಲಯದ ನಿರ್ದೇಶನದಂತೆ ಬಂದ್‌‌ ನಡೆಸಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಬಂದ್‌‌ಗೆ ಕರೆ ನೀಡಿರುವ 44 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವ ರೀತಿ ಬಂದ್ ಅಥವಾ ಹರತಾಳ […]

ಮಂಗಳೂರಿನಲ್ಲಿ ಕೇರಳದ ಮುಖ್ಯಮಂತ್ರಿಗೆ ಕರಿಪತಾಕೆ ಪ್ರದರ್ಶನ

Friday, January 20th, 2017
BJP Protest

ಮಂಗಳೂರು: ಕೇರಳದಲ್ಲಿ ಆಡಳಿತರೂಢ ಎಡಪಕ್ಷದ ಕಾರ್ಯಕರ್ತರು ಸಂಘ ಪರಿವಾರದ ಕಾರ್ಯಕರ್ತರನ್ನು ಕೊಲೆಗೈಯುತ್ತಿರುವುದನ್ನು ಖಂಡಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಂಗಳೂರಿನಲ್ಲಿ ಕರಿಬಾವುಟ ಪ್ರದರ್ಶಿಸಲಾಯಿತು. ಮಂಗಳೂರಿನಿಂದ ತಿರುವನಂತಪುರಕ್ಕೆ ಪ್ರಯಾಣಿಸಲು ಗುರುವಾರ ಸಂಜೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕರಿಪತಾಕೆ ತೋರಿಸಿ ಪ್ರತಿಭಟನೆಯಲ್ಲಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಅವರು ಕೇರಳದಲ್ಲಿ ಅಮಾಯಕ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರ ಹತ್ಯೆಯಾಗುತ್ತಿದೆ, ಅದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೌನ ಸಮ್ಮತಿ ಸೂಚಿಸುತ್ತಿದ್ದಾರೆ ಎಂದು ಆಪಾದಿಸಿದರು. ಭಾರತೀಯ ಜನತಾ ಪಾರ್ಟಿ […]