ಮಂಗಳೂರು: ಪೂಜಾರಿಯವರದ್ದು ನೋವಿನ ಕಣ್ಣೀರು, ರಮಾನಾಥ ರೈಯವರದ್ದು ಚುನಾವಣಾ ಸೋಲಿನ ಭೀತಿಯ ಮೊಸಳೆ ಕಣ್ಣೀರು ಎಂದು ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಸಮಾರಂಭವೊಂದರಲ್ಲಿ ಅವರು ಪೂಜಾರಿಯವರನ್ನು ಕೀಳು ಪದ ಬಳಸಿ ನಿಂದಿಸಿರುವುದನ್ನು ಕಣ್ಣಾರೆ ಕಂಡವರು, ಕಿವಿಯಾರೆ ಕೇಳಿದವರೂ ಇದ್ದಾರೆ. ಆದರೆ, ತಾನು ಪೂಜಾರಿಯವರನ್ನು ಅವಾಚ್ಯವಾಗಿ ನಿಂದಿಸಿಲ್ಲ ಎಂದು ಸಚಿವ ರೈ ಈಗ ಹೇಳುತ್ತಿದ್ದಾರೆ. ಸುಳ್ಳು ಹೇಳುವುದು ಸಚಿವರ ಹುಟ್ಟುಗುಣ ಎಂದು ದೂರಿದರು.
ಕಳೆದ ವರ್ಷ ಫೆ. 7ರಂದು ಸುರತ್ಕಲ್ ಬಂಟರ ಭವನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಚಿವ ರೈ ಅವರು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೊ ಹಾಗೂ ಯುವ ಕಾಂಗ್ರೆಸ್ಸಿನ ತೇಜಸ್ ಅವರ ಮುಂದೆ ಪೂಜಾರಿಯವರನ್ನು ಅತ್ಯಂತ ಕೀಳು ಪದ ಬಳಸಿ ನಿಂದಿಸಿದ್ದಾರೆ.
ರೈ ತಪ್ಪು ಮಾಡದಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಆಗಲೇ ಸವಾಲು ಹಾಕಿದ್ದೆ. ಆಗ ಸುಮ್ಮನಿದ್ದ ಸಚಿವ ರೈ ಈಗ ಧರ್ಮಸ್ಥಳದಲ್ಲಿ ಆಣೆ ಮಾಡಲು ಸಿದ್ಧ ಎಂದಿದ್ದಾರೆ. ಆದರೆ, ನಾವಂತೂ ಅವರು ತಿಳಿಸುವ ಯಾವುದೇ ದಿನದಂದು ಧರ್ಮಸ್ಥಳಕ್ಕೆ ಬರಲು ಸಿದ್ಧ ಎಂದರು.
Click this button or press Ctrl+G to toggle between Kannada and English