ಹೊಸ ವರ್ಷ ಎಂದು ಕಂಠಪೂರ್ತಿ ಕುಡಿದ… ತಂದೆ ಮೇಲೆಯೇ ತಲವಾರ್‌ ಬೀಸಿದ!

1:38 PM, Tuesday, January 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Talwar-caseಮಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಬಂದ ಮಗ ಮನೆಯಲ್ಲಿ ದಾಂಧಲೆ ನಡೆಸಿ ತಂದೆಯ ಮೇಲೆ ತಲವಾರ್‌ ದಾಳಿ ನಡೆಸಿದ ಘಟನೆ ಬೆಳ್ತಂಗಡಿಯ ಮಟ್ಲದಲ್ಲಿ ನಡೆದಿದೆ.

ಮಟ್ಲದ ಜ್ಯೋತಿಷಿ ಮಂಜುನಾಥ್ ಎಂಬವವರ ಮಗ ನವೀನ್ ಈ ಕೃತ್ಯ ಎಸಗಿದವ. ಹೊಸ ವರ್ಷದ ಆಚರಣೆಯ ವೇಳೆ ಕಂಠಪೂರ್ತಿ ಕುಡಿದಿದ್ದ ನವೀನ್, ನಶೆಯಲ್ಲಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿದ್ದಾನೆ. ಬಳಿಕ ತಂದೆಯ ಮೇಲೆ ತಲವಾರ್‌ನಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English