ಮಂಗಳೂರು : ಮಾಲಯಾಳಂ ಚಲನಚಿತ್ರ ಹಾಗೂ ಕಿರುತೆರೆ ನಟ ಇಳೈಕಟ್ಟು ನಂಬೂದರಿ ಮಂಗಳವಾರ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ತುಳುನಾಡ ರಕ್ಷಣಾ ವೇದಿಕೆಯ ಕಛೇರಿಗೆ ಭೇಟಿ ನೀಡಿದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೊಗೀಶ್ ಶೆಟ್ಟಿ ಜಪ್ಪು ಸಾಲು ಹೊದಿಸಿ, ಮಾಲೆ ಹಾಕಿ ಸಮ್ಮಾನಿಸಿದರು.
ಬಳಿಕ ಮಾತನಾಡಿದ ನಂಬೂದರಿ ತುಳುನಾಡ ರಕ್ಷಣಾ ವೇದಿಕೆಯ ಬಗ್ಗೆ ಇಂಟರ್ನೆಟ್ ಮೂಲಕ ತಿಳಿದು ಸಂತೋಷವಾಯಿತು. ಸಂಘನೆಯ ಜನಪರ ಕೆಲಸಗಳು ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸಿದರು.
ಇಳೈಕಟ್ಟು ನಂಬೂದರಿ ಮಲಯಾಳಂನಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ, ನೂರಕ್ಕೂ ಹೆಚ್ಚು ಮಲಯಾಳ ದಾರಾವಾಹಿಗಳಲ್ಲಿ ನಟಿಸಿದ್ದು, ಇಪ್ಪತ್ತಕ್ಕಿಂತಲೂ ಹೆಚ್ಚು ಪ್ರಶಸ್ತಿಗಳು ಬಂದಿವೆ. ಏಷಿಯಾನೆಟ್ ನಲ್ಲಿ ಪ್ರಸ್ತುತ ಪ್ರಸಾರ ವಾಗುತ್ತಿರುವ ”ಕರತ್ತ ಮುತ್ತು” ಮತ್ತು ”ಕುಂಕುಮ ಪೂ” ದಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ.
ತುಳುನಾಡು ರಕ್ಷಣಾ ವೇದಿಕೆಯ ಪ್ರಶಾಂತ್ ಭಟ್ ಕಡಬ, ಅಬ್ದುಲ್ ರಶೀದ್ ಜೆಪ್ಪು, ಕಿಶೋರ್ ಭಂಡಾರಿ ಗೋರಿಗುಡ್ಡ, ವಿಶ್ವನಾಥ ಶೆಟ್ಟಿ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English