ಮಂಗಳೂರು: ಮೃತ ದೀಪಕ್ ಕುಟುಂಬಕ್ಕೆ ಶಾಸಕ ಮೊಯ್ದಿನ್ ಬಾವ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಆದರೆ ತಮಗೆ ಶಾಸಕರ ಪರಿಹಾರ ನಿಧಿ ಬೇಡ, ನನ್ನ ಮಗನಿಗಿಂತ ಅವರ ಪರಿಹಾರದ ಹಣ ದೊಡ್ಡದಲ್ಲ. ಸರ್ಕಾರದಿಂದ ಬರುವ ಪರಿಹಾರವೇ ಸಾಕು ಎಂದು ದೀಪಕ್ ತಾಯಿ ಪ್ರೇಮಾ ಹೇಳಿದ್ದಾರೆ.
ಮಗನನ್ನು ಕಳೆದುಕೊಂಡ ದುಃಖವನ್ನು ಸಂಬಂಧಿಕರಲ್ಲಿ ತೋಡಿಕೊಂಡ ಪ್ರೇಮಾ, ಮಗ ದೀಪು ಮಧ್ಯಾಹ್ನ ಮನೆಗೆ ಊಟಕ್ಕೆ ಬರುತ್ತಿದ್ದ. ನಿನ್ನೆಯೂ ಎಂದಿನಂತೆ ಬರುವ ಸಮಯದಲ್ಲೇ ಅವನನ್ನು ಕೊಲೆ ಮಾಡಿದ್ದಾರೆ. ಆತನನ್ನು ಕೊಂದವರಿಗೆ ದೇವರು ತಕ್ಕ ಶಿಕ್ಷೆ ನೀಡಲಿ. ನಾನು ನಂಬಿದ ದೇವರು ಖಂಡಿತಾ ಕೈಬಿಡುವುದಿಲ್ಲ ಎಂದು ಕಣ್ಣೀರಿಟ್ಟರು.
ಮದುವೆಯಾಗು ದೀಪು ಎಂದರೆ ನನಗೆ ಮೂರು ವರ್ಷ ಮದುವೆ ಬೇಡ ಎಂದಿದ್ದ. ಮನೆಯ ಕಷ್ಟ ನೋಡಿ ಎಷ್ಟೋ ಬಾರಿ ತಾನು ವಿದೇಶಕ್ಕೆ ಹೋಗುತ್ತೇನೆ ಎನ್ನುತ್ತಿದ್ದ. ಆದರೆ, ನಾನು ಆತನನ್ನು ಕಳುಹಿಸಲು ತಯಾರಿರಲಿಲ್ಲ. ಮಗನ ಇಚ್ಛೆಯಂತೆ ಅಲ್ಲಿರುತ್ತಿದ್ದರೆ ಜೀವಂತವಾಗಿಯಾದರೂ ಇರುತ್ತಿದ್ದ ಎಂದಾಗ ಅಲ್ಲಿದ್ದವರಿಗೂ ದುಃಖ ತಡೆದುಕೊಳ್ಳಲಾಗಲಿಲ್ಲ.
Click this button or press Ctrl+G to toggle between Kannada and English