ಉಜಿರೆ: ಜೀವನಎಂಬುದು ಸಂಗ್ರಾಮ ಮತ್ತು ವಿಶ್ರಾಮದಿಂದಕೂಡಿದೆ. ಬಾಹ್ಯದಲ್ಲಿಆಡಂಬರದ ಸೌಂದರ್ಯಕ್ಕಿಂತ ಭಕ್ತಿ, ಶಕ್ತಿ ಮತ್ತುಜ್ಞಾನದ ಮೂಲಕ ನಮ್ಮಅಂತರಂಗದ ಸೌಂದರ್ಯವನ್ನು ವೃದ್ಧಿಸಿಕೊಳ್ಳಬೇಕುಎಂದು ಪೂಜ್ಯಆಚಾರ್ಯ 108 ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಮಂಗಲ ಪ್ರವಚನ ನೀಡಿದರು.
ಪ್ರಾಮಾಣಕತೆ, ಕರ್ತವ್ಯ ಪ್ರಜ್ಞೆ, ಸಮರ್ಪಣಾ ಮನೋಭಾವ, ದಯೆ, ಅನುಕಂಪ, ಪ್ರೀತಿ-ವಿಶ್ವಾಸ ಮೊದಲಾದ ಮಾನವೀಯ ಮೌಲ್ಯಗಳಿಂದ ಜೀವನ ಮಧುರವಾಗುತ್ತದೆ.ಶಾಂತಿ, ನೆಮ್ಮದಿ ಸಿಗುತ್ತದೆ.ತಾಯಿ ಮತ್ತು ಮಗುವಿನ ಮಧ್ಯೆಇರುವ ಮಧುರ ಬಾಂಧವ್ಯವನ್ನುಅವರು ಶ್ಲಾಘಿಸಿದರು.ರಾಮನಆದರ್ಶವನ್ನು ನಾವೂ ಪಾಲಿಸಬೇಕು ಎಂದು ಸಲಹೆ ನೀಡಿದರು.
ಪ್ರಪಂಚದಲ್ಲಿ ಬಡವರು-ಬಲ್ಲಿದರು,ಇಬ್ಬರೂ ದು:ಖಿಗಳಾಗಿದ್ದಾರೆ. ಬಡವನಿಗೆತನಗೆ ಅಸನ, ವಸನ, ವಸತಿಯ ಬೇಡಿಕೆಯಚಿಂತೆಆದರೆ ಶ್ರೀಮಂತರಿಗೆ ಇನ್ನಷ್ಟು ಸಂಪತ್ತು ಸಂಗ್ರಹಿಸಬೇಕೆಂಬ ಲಾಲಸೆ ಇರುತ್ತದೆ.ಸಾಗರಕ್ಕೆ ಎಷ್ಟು ನದಿಗಳು ಸೇರಿದರೂಅದುತೃಪ್ತಿ ಹೊಂದುವುದಿಲ್ಲ. ಅದೇರೀತಿ ಸಂಸಾರದಲ್ಲಿ ಎಷ್ಟು ಸುಖ-ಸಂಪತ್ತುದೊರಕಿದರೂತೃಪ್ತಿಇರುವುದಿಲ್ಲ. ತೃಪ್ತಿಇದ್ದಲ್ಲಿ ಮಾತ್ರ ಸಂತೋಷಇರುತ್ತದೆ.ಭಗವಾನ್ ಬಾಹುಬಲಿಯ ಅಹಿಂಸೆ ಮತ್ತುತ್ಯಾಗದ ಗುಣಗಳನ್ನು ನಾವು ಅನುಸರಿಸಬೇಕು.
ಜೈನರುಸರ್ಕಾರದಿಂದಏನನ್ನೂ ಕೇಳುವುದಿಲ್ಲ. ಆದರೆ ವೀರೇಂದ್ರ ಹೆಗ್ಗಡೆಯವರಿಗೆ ಭಾರತರತ್ನ ನೀಡಿಗೌರವಿಸಲು ರಾಷ್ಟ್ರಪತಿ ಮತ್ತು ಪ್ರಧಾನಿಯನ್ನುಒತ್ತಾಯಿಸಬೇಕೆಂದು ಸ್ವಾಮೀಜಿ ಸಲಹೆ ನೀಡಿದರು.
ಅಹಂ ತ್ಯಜಿಸಿ, ಇತರರಿಗೆತೊಂದರೆ ಮಾಡದೆ, ಧನಾತ್ಮಕಚಿಂತನೆಯಿಂದ ನಾವು ಶಾಂತಿ, ನೆಮ್ಮದಿ ಹೊಂದಲು ಸಾಧ್ಯಎಂದುಅವರುಅಭಿಪ್ರಾಯಪಟ್ಟರು.
ಪೂಜ್ಯ 108 ಮುನಿಶ್ರೀ ಪ್ರಮುಖ್ ಸಾಗರ ಮುನಿಮಹಾರಾಜರು, ಪೂಜ್ಯ108 ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರು ಮತ್ತು ಪೂಜ್ಯ ೧೦೮ ವಿಕಸಂತ್ ಸಾಗರ್ ಮಹಾರಾಜ್ ಉಪಸ್ಥಿತರಿದ್ದರು.
ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿಡಿ. ವೀರೇಂದ್ರ ಹೆಗ್ಗಡೆಯವರು, ಮಹಾ ತಪಸ್ವಿಗಳೂ, ಜ್ಞಾನಿಗಳೂ ಆದ ಮುನಿಗಳು ಭಕ್ತಿ ಮತ್ತು ಮುಕ್ತಿ ಮಧ್ಯೆ ಶ್ರಾವಕರುಹಾಗೂ ಸಮಾಜ ಹೇಗಿರಬೇಕುಎಂದು ಮಾರ್ಗದರ್ಶನ ನೀಡುತ್ತಾರೆ.
ಸಮಾಜದ ಸಂಘಟನೆ ಮತ್ತುಬೆಳವಣಿಗೆಗೆ ಪ್ರೇರಣೆ ನೀಡುತ್ತಾರೆ.ಗ್ರಂಥಸ್ಥವಾಗಿರುವಜ್ಞಾನದ ನಿಧಿಯನ್ನು,ಗಂಭೀರ ವಿಚಾರಗಳನ್ನು ಸರಳವಾಗಿ ಜನರಿಗೆ ಪ್ರವಚನದ ಮೂಲಕ ತಿಳಿಸುತ್ತಾರೆ.
ಮುನಿ ಸೇವೆ ಮಾಡುವ ಅವಕಾಶ ನಮ್ಮ ಪೂರ್ವಜನ್ಮದ ಪುಣ್ಯದಿಂದ ಮಾತ್ರ ಲಭಿಸುತ್ತದೆಎಂದು ಹೇಳಿದರು.ಮುನಿಗಳ ಚಾತುರ್ಮಾಸದಿಂದ ಸಮಾಜದಲ್ಲಿಕ್ರಾಂತಿಕಾರಿ ಪರಿವರ್ತನೆಯೊಂದಿಗೆಧರ್ಮ ಪ್ರಭಾವನೆಯಾಗುತ್ತದೆಎಂದು ಹೆಗ್ಗಡೆಯವರು ಹೇಳಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಕಾಲೇಜಿನಯಕ್ಷಗಾನತರಬೇತಿಕೇಂದ್ರದ ವಿದ್ಯಾರ್ಥಿಗಳು ತರಣಿ ಸೇನ ಕಾಳಗ ಯಕ್ಷಗಾನ ಪ್ರದರ್ಶನ ನೀಡಿದರು.ಸುನಿಲ್ ಪಂಡಿತ್‌ಧನ್ಯವಾದವಿತ್ತರು.
Click this button or press Ctrl+G to toggle between Kannada and English