ಭಾರತ ಆತಂಕದಲ್ಲಿದೆ…ಬಹ್ರೇನ್‌ನಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

11:09 AM, Tuesday, January 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

rahul-gandhiಬಹ್ರೇನ್: ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಹ್ರೇನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಹ್ರೇನ್‌ನ ಮನಮ್‌ನಲ್ಲಿರುವ ಅನಿವಾಸಿ ಭಾರತೀಯರನ್ನು ರಾಹುಲ್ ಭೇಟಿಯಾಗಿ ಸಂವಾದ ನಡೆಸಿದರು. ಬಹ್ರೇನ್ ಬಳಿಕ ಕಾಂಗ್ರೆಸ್ ಯುವರಾಜ ಕೆನಡಾ ಹಾಗೂ ಸಿಂಗಪೂರ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಅನಿವಾಸಿ ಭಾರತಿಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಮೋದಿ ಸರ್ಕಾರದ ಜಿಎಸ್‌ಟಿ ಹಾಗೂ ನೋಟ್ ಬ್ಯಾನ್ ನಿರ್ಧಾರದಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ ಎಂದು ದೂರಿದರು. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಜೊತೆಗೆ ಜನರ ಮಧ್ಯೆ ದ್ವೇಷ ಹಾಗೂ ಒಡಕು ಹೆಚ್ಚುತ್ತಿದೆ ಎಂದು ದೂರಿದರು.

ಸರ್ಕಾರ ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಏನನ್ನು ತಿನ್ನಬೇಕು, ಏನು ಮಾತನಾಡಬೇಕು ಹಾಗೂ ಏನನ್ನು ಮಾತನಾಡಬಾರದು ಎಂಬುದರ ಕುರಿತು ಗಮನಹರಿಸಿದೆ ಎಂದು ಕಿಡಿಕಾರಿದರು.

ಭಾರತ ಇಂದು ಸ್ವತಂತ್ರವಾಗಿದ್ದರೂ ಮತ್ತೊಮ್ಮೆ ಇದೀಗ ಭಯ ಆವರಿಸಿದೆ. ದೇಶದಲ್ಲಿ ಸದ್ಯ ಎರಡು ಭಯಗಳಿವೆ. ಸರ್ಕಾರ ಉದ್ಯೋಗ ಸೃಷ್ಟಿಸಲು ಅಸಮರ್ಥವಾಗಿದೆ ಎಂಬ ಭಯ ಹಾಗೂ ಎಲ್ಲ ಜಾತಿ, ಧರ್ಮದ ಜನರಲ್ಲಿ ವಿಭಜನೆ ಉಂಟು ಮಾಡುತ್ತಿರುವುದು ಎಂದು ರಾಹುಲ್‌ ಆರೋಪಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English