ಮಂಗಳೂರು: ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹಾಗೂ ಕೊಟ್ಟಾರ ಚೌಕಿಯಲ್ಲಿ ನಡೆದ ಅಬ್ದುಲ್ ಬಷೀರ್ ಅವರ ಸಾವು ತುಂಬಾ ನೋವು ತಂದಿದೆ,” ಎಂದು ಹೇಳಿದ ಅವರು, “ರಾಜ್ಯದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಹತ್ಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ,” ಎಂದು ಆರೋಪಿಸಿದರು.
“ಮಂಗಳೂರಿನಲ್ಲಿ ನಡೆದ ಎರಡು ಸಾವಿನಲ್ಲೂ ರಾಜಕೀಯ ನಡೆಯುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, “ರಾಜಕೀಯಕ್ಕಾಗಿ ಹಾಗೂ ಮತಗಳಿಕೆಯ ಲಾಭಕ್ಕಾಗಿ ಈ ಇಬ್ಬರ ಸಾವನ್ನು ಬಳಸಿಕೊಳ್ಳಬೇಡಿ,” ಎಂದು ಮನವಿ ಮಾಡಿಕೊಂಡರು.
“ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಧರ್ಮ ಧರ್ಮಗಳನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ,” ಎಂದು ಇಂದ್ರಜಿತ್ ಲಂಕೇಶ್ ವಿಷಾದ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English