ದೀಪಕ್ ಹತ್ಯೆ ಪ್ರಕರಣ: ಸಾಮಾಜಿಕ ಜಾಲತಾಣ ಬದಲು ಪೊಲೀಸರಿಗೆ ಮಾಹಿತಿ ನೀಡಿ -ಸಚಿವ ಖಾದರ್

5:57 PM, Tuesday, January 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

U-T-kaderಮಂಗಳೂರು: ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮತ್ತು ಹೇಳಿಕೆ ನೀಡುವ ಬದಲು ವಿಷಯ ಗೊತ್ತಿದ್ದರೆ ಅದನ್ನು ಪೊಲೀಸರಿಗೆ ನೀಡಬಹುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ಮಂಗಳವಾರ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹಿತ ಘಟನೆಯ ಬಗ್ಗೆ ವಿವರ ಇರುವವರು ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಬದಲು ಅಥವಾ ನೇರ ಹೇಳಿಕೆ ನೀಡುವ ಬದಲು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ತನಿಖೆಗೆ ಸಹಕಾರಿಯಾಗಲಿದೆ ಎಂದರು.

ರಾಜಕೀಯ ಕಾರಣಕ್ಕೆ ಯಾರೂ ಯಾವ ಹೇಳಿಕೆ ನೀಡುವುದು ಸರಿಯಲ್ಲ. ಪ್ರಕರಣದ ಆರೋಪಿಗಳ ಹಿನ್ನೆಲೆ ನೋಡಿದರೆ ಸುಪಾರಿ ಕಿಲ್ಲರ್ಸ್ ಎಂದು ಇಲಾಖೆ ಗಮನಿಸಿದೆ. ಕೊಲೆಗೆ ವೈಯಕ್ತಿಕ ಕಾರಣವಾ ಅಥವಾ ಸುಪಾರಿ ಪಡೆದಿದ್ದಾರಾ ಎಂಬುದನ್ನು ತನಿಖೆಯಿಂದಷ್ಟೇ ತಿಳಿಯಬಹುದು. ತನಿಖೆಯ ಹಂತದಲ್ಲಿ ಗೊಂದಲಮಯ ಹೇಳಿಕೆ ನೀಡಿ ತನಿಖೆಯ ದಾರಿ ತಪ್ಪಿಸುವುದು ಸರಿಯಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English