ನಾನೂ ಒಂದು ದಿನ ಪ್ರಧಾನಿ ಆಗಿಯೇ ಆಗುತ್ತೇನೆ: ಹುಚ್ಚ ವೆಂಕಟ್‌‌‌

10:03 AM, Friday, January 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Huccha-venkatಮಂಗಳೂರು: ಮುಂಬರುವ ಚುನಾವಣೆಯಲ್ಲಿ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಇಳಿಯಲು ಬಯಸಿದ್ದೆ. ಆದರೆ ತಂದೆ ಒಪ್ಪಿಗೆ ನೀಡಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ತಂದೆಯನ್ನು ಒಪ್ಪಿಸಿ ರಾಜಕೀಯ ಪ್ರವೇಶ ಮಾಡಲಿದ್ದೇನೆ. ನನಗೆ 60 ವರ್ಷ ಆಗುವ ವೇಳೆಗೆ ನಾನೂ ಒಂದು ದಿನ ಪ್ರಧಾನಿ ಆಗಿಯೇ ಆಗುತ್ತೇನೆ ಎಂದು ಹುಚ್ಚ ವೆಂಕಟ್ ಹೇಳಿದರು.

ತಮ್ಮ ‘ಡಿಕ್ಟೇಟರ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಕಲಿ ಮತ ಹಾಕದಂತೆ ಜನತೆಗೆ ಮನವಿ ಮಾಡಿದರು. ಅಲ್ಲದೆ ಹಣ, ಸೀರೆ, ಹೆಂಡಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳಬಾರದು ಎಂದರು.

ಇನ್ನು ಮಂಗಳೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಬಹಳ ನೋವಾಗಿದೆ. ನಾವೆಲ್ಲರೂ ಪ್ರೀತಿಯಿಂದ ಇರೋಣ, ಹಿಂಸಾಚಾರ ಬೇಡ. ನಮ್ಮನ್ನು ದೂರ ಮಾಡಲು ಬರುವವರ ಜತೆ ನಾವು ಹೋಗುವುದು ಬೇಡ. ಬದಲಿಗೆ ಒಗ್ಗಟ್ಟಿನಿಂದ ಇದ್ದು, ಶಾಂತಿ ಕದಡಲು ಬರುವವರನ್ನು ಯಾವ ರೀತಿ ಎದುರಿಸಬೇಕೆಂಬುದನ್ನು ತಿಳಿಯಬೇಕು ಎಂದರು.

‘ಡಿಕ್ಟೇಟರ್’ ಚಿತ್ರದಲ್ಲಿ ಪತ್ರಕರ್ತನಾಗಿ ತಾನು ನಟಿಸುತ್ತಿದ್ದು, ಪತ್ರಕರ್ತರ ಕಷ್ಟ-ಸುಖಗಳನ್ನು ತೆರೆಯ ಮೇಲಿಡಲಾಗುವುದು. ಚಿತ್ರಕಥೆ, ನಿರ್ದೇಶನ, ನಟನೆಯ ಜತೆ ಚಿತ್ರದಲ್ಲಿ ಐದಾರು ಹಾಡುಗಳನ್ನು ತಾವೇ ಹಾಡುತ್ತಿರುವುದಾಗಿಯೂ ಹೇಳಿದರು.

ಇನ್ನು ಚಿತ್ರದ ಚಿತ್ರೀಕರಣ ಆರಂಭಗೊಂಡಿದ್ದು, ಪ್ರೋಮೋ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಚಿತ್ರದಲ್ಲಿ ಮಿಸ್ ಈಕ್ವೇಟ್ ಇಂಡಿಯಾ ಆಗಿರುವ ಐಶ್ವರ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಾರಿಗೂ ನೋವು ಆಗದ ರೀತಿಯಲ್ಲಿ ಈ ಚಿತ್ರವನ್ನು ಮಾಡುತ್ತಿದ್ದೇನೆ. ಈ ಚಿತ್ರದ ಜತೆಯಲ್ಲೇ ‘ತಿಕ್ಲಾ ಹುಚ್ಚ ವೆಂಕಟ್’ ಹಾಗೂ ‘ದುರಹಂಕಾರಿ’ ಚಿತ್ರವನ್ನೂ ತಾವು ನಿರ್ದೇಶಿಸುತ್ತಿರುವುದಾಗಿ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English