ರನ್‌‌ ವೇಯಲ್ಲಿ ಟ್ರ್ಯಾಕ್ಟರ್‌‌ ಇರಲಿಲ್ಲ: ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕರ ಸ್ಪಷ್ಟನೆ

10:08 AM, Friday, January 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Airportಮಂಗಳೂರು: ವಿಮಾನ ನಿಲ್ದಾಣದ ರನ್‌‌ ವೇಯಲ್ಲಿ ಟ್ರ್ಯಾಕ್ಟರ್‌‌ ಇರಲಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ಸ್ಪಷ್ಟಪಡಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ ಎಂದು ಎಎನ್ಐ ವರದಿ ಮಾಡಿತ್ತು. ರನ್‌‌ ವೇ ಸಮೀಪವೇ ಟ್ರ್ಯಾಕ್ಟರ್‌‌ವೊಂದು ನಿಲ್ಲಿಸಲಾಗಿತ್ತು. ಆಗ ಮುಂಬೈನತ್ತ ತೆರಳಬೇಕಾಗಿದ್ದ ವಿಮಾನವೊಂದು ಟೇಕಾಫ್ ಆಗುತ್ತಿತ್ತು. ಇದು ಏರ್‌‌ ಟ್ರಾಫಿಕ್ ಕಂಟ್ರೋಲರ್‌‌ ಗಮನಕ್ಕೆ ಬಂದಿತ್ತು.

ಎಟಿಎಸ್‌‌ ಸಿಬ್ಬಂದಿ ಕೂಡಲೇ ವಿಮಾನದ ಪೈಲಟ್‌ಗೆ ಸಂದೇಶ ರವಾನಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ವರದಿ ತಿಳಿಸಿತ್ತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕರು, ವಿಮಾನ ಟೇಕಾಫ್ ಆಗುವ ವೇಳೆ ರನ್ ವೇಯಲ್ಲಿ ಯಾವುದೇ ಟ್ರ್ಯಾಕ್ಟರ್‌‌‌ ಆಗಲಿ, ವಸ್ತುವಾಗಲಿ ಇರಲಿಲ್ಲ. ವಿಮಾನ ಟೇಕ್ ಆಫ್ ಆಗುವ ಮುನ್ನವೇ ರನ್ ವೇಗಿಂತ ತುಂಬಾ ದೂರದಲ್ಲಿ ಟ್ರ್ಯಾಕ್ಟರ್‌‌ ಇದ್ದಿರುವುದನ್ನು ಏರ್ ಟ್ರಾಫಿಕ್ ಕಂಟ್ರೋಲರ್ ಗಮನಕ್ಕೆ ಬಂದಿತ್ತು. ಕೂಡಲೇ ಟ್ರ್ಯಾಕ್ಟರ್‌‌ಅನ್ನು ತೆಗೆಯಿಸಿದ ಬಳಿಕ ವಿಮಾನ ಸುರಕ್ಷಿತವಾಗಿ ಟೇಕ್‌ ಆಫ್ ಆಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English