ಟರ್ಕಿ: ಟರ್ಕಿಯ ಟ್ರಬ್ಜೊನ್ ಏರ್‌ಪೋರ್ಟ್‌ನಲ್ಲಿ 168 ಜನರಿದ್ದ ವಿಮಾನವೊಂದು ರನ್‌ವೇಯಿಂದ ಜಾರಿ ಸಮುದ್ರದತ್ತ ನುಗ್ಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಈ ಘಟನೆ ಜರುಗಿದೆ. ವಿಮಾನದಲ್ಲಿ 162 ಜನ ಪ್ರಯಾಣಿಕರು, ಇಬ್ಬರು ಪೈಲಟ್ ಹಾಗೂ ನಾಲ್ವರು ಸಿಬ್ಬಂದಿ ಇದ್ದರು. ವಿಮಾನದಿಂದ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.
ಬೋಯಿಂಗ್ 737-800 ಪ್ಯಾಸೆಂಜರ್ ವಿಮಾನ ಟರ್ಕಿ ರಾಜಧಾನಿ ಅಂಕಾರಾದಿಂದ ಟ್ರಬ್ಜೊನ್ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಏಕಾಏಕಿ ಅಲುಗಾಡಲು ಶುರು ಮಾಡಿ, ರನ್‌ವೇಯಿಂದ ಸೀದಾ ಪಕ್ಕದ ಸಮುದ್ರದತ್ತ ಜಾರಿ ಹೋಗಿತ್ತು. ಅದೃಷ್ಟವಶಾತ್ ಸಮುದ್ರ ದಂಡೆಗೆ ವಿಮಾನ ಹಾಗೆ ನಿಂತಿದೆ. ಆದರೆ, ಈ ಘಟನೆಗೆ ನಿಖರ ಕಾರಣವೇನು ಎನ್ನುವುದು ಗೊತ್ತಾಗಿಲ್ಲ ಎಂದು ವರದಿಯಾಗಿದೆ.
ವಿಮಾನ ಜಾರಿದ 20 ನಿಮಿಷಗಳ ಕಾಲ ಮತ್ತೊಬ್ಬರ ಸಹಾಯವನ್ನು ಎದುರು ನೋಡುತ್ತಾ ವಿಮಾನದಲ್ಲೇ ನಾವಿದ್ದೇವೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಈ ಘಟನೆಯಿಂದ ಭಾನುವಾರ ಬೆಳಗ್ಗೆ 8ಗಂಟೆವರೆಗೂ ಏರ್‌ಪೋರ್ಟ್‌ನ್ನು ಸ್ಥಗಿತಗೊಳಿಸಲಾಗಿತ್ತು.
Click this button or press Ctrl+G to toggle between Kannada and English