ದುಬೈನಿಂದ ಬಂದ ವಿಮಾನದ ಸೀಟಿನ ಅಡಿಯಲ್ಲಿ ಸಾಗಿಸುತ್ತಿದ್ದ ಚಿನ್ನದ ಬಿಸ್ಕತ್ತು ವಶ

Sunday, September 27th, 2020
gold Biscut

ಮಂಗಳೂರು : ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ರವಿವಾರ ದುಬೈನಿಂದ ಬಂದಿಳಿದ ಪ್ರಯಾಣಿಕನಿಂದ  33.88 ಲಕ್ಷ ರೂ. ಮೌಲ್ಯದ 671 ಗ್ರಾಂ ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದುಬೈ- ಮಂಗಳೂರು- ಹೈದರಾಬಾದ್ ವಿಮಾನದಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಒಳಗೆ ಸೀಟಿನ ಅಡಿಯಲ್ಲಿ ಅಡಗಿಸಿಡಲಾಗಿತ್ತು. ದುಬೈನಿಂದ ಮಂಗಳೂರು ತನಕ ಅಂತಾರಾಷ್ಟ್ರೀಯ ಯಾನವಾಗಿ ಹಾಗೂ ಮಂಗಳೂರು- ಹೈದರಾಬಾದ್ ನಡುವೆ ದೇಶೀಯ ವಿಮಾನವಾಗಿ ಕಾರ್ಯಾಚರಿಸುತ್ತಿದ್ದು, ಮಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ಪ್ರಯಾಣಿಕ ಈ ಚಿನ್ನವನ್ನು ಸಂಗ್ರಹಿಸಿ ಕೊಂಡೊಯ್ಯುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ದೇಶೀಯ […]

ಜುಲೈ 18 ರಿಂದ ಭಾರತದಿಂದ 28 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ

Friday, July 17th, 2020
flight

ಹೊಸದಿಲ್ಲಿ:  ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಕೆಲವು ದೇಶಗಳ ವಿಮಾನಗಳಿಗೆ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. ಈ ಮೂಲಕ ಭಾರತದಿಂದ ಆಂಶಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಶುರುವಾದಂತಾಗುತ್ತದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭಾರತ ಈಗಾಗಲೇ ಅಮೆರಿಕ ಹಾಗೂ ಫ್ರಾನ್ಸ್‌ನೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ವಿಮಾನಯಾನ ಹಾರಾಟ ಒಪ್ಪಂದಕ್ಕೆ ಸಹಿ ಹಾಕಿದೆ. ಇದರನ್ವಯ ಜುಲೈ 18ರಿಂದ ಆಗಸ್ಟ್‌ 1ರವರೆಗೆ ಏರ್‌ ಫ್ರಾನ್ಸ್‌, ದೆಹಲಿ, ಮುಂಬೈ, ಬೆಂಗಳೂರು ಮತ್ತು ಪ್ಯಾರಿಸ್‌ […]

ಹುಬ್ಬಳ್ಳಿಗೆ ಇನ್ಮೇಲೆ ವಿಮಾನ ಬರಲ್ಲ, ಇಲ್ಲಿಂದ ಹೋಗಲ್ಲ

Friday, May 29th, 2020
star Airlines

ವರದಿ: ಶಂಭು, ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ- ಹುಬ್ಬಳ್ಳಿ: ಲಾಕ್ ಡೌನ್‌ ನಿಂದ ಎರಡು ತಿಂಗಳುಗಳ ಕಾಲ ಬಂದ್‌ ಆಗಿದ್ದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ಮೂರು ದಿನಗಳ ಹಿಂದೆ ಸ್ಟಾರ್‌ ಏರ್‌ ಲೈನ್ಸ್‌ ಸಂಸ್ಥೆಯು ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿ ಮತ್ತು ಮುಂಬಯಿಗೆ ವಿಮಾನ ಸಂಚಾರ ಆರಂಭಿಸಿತ್ತು. ಆದರೀಗ ಕೇವಲ ಮೂರೇ ದಿನಗಳಲ್ಲಿ ಈ ಸಂಸ್ಥೆಯು ನಗರದಿಂದ ಸಂಚರಿಸುತ್ತಿದ್ದ ತನ್ನೆಲ್ಲ ವಿಮಾನಯಾನಗಳನ್ನು ದಿಢೀರ್‌ ಎಂದು ಬಂದ್‌ ಮಾಡಿದೆ. ಈ ಬಗ್ಗೆ ವಿಚಾರಿಸಿದರೆ, ಪ್ರಯಾಣಿಕರ ಕೊರತೆ ಹಾಗೂ […]

ಏಕಾಂಗಿಯಾಗಿ ವಿಮಾನವನ್ನೇರಿ ಬೆಂಗಳೂರಿನಲ್ಲಿ ತಾಯಿಯ ಮಡಿಲು ಸೇರಿದ ಐದು ವರ್ಷದ ಬಾಲಕ

Monday, May 25th, 2020
vihan

ಬೆಂಗಳೂರು  : ಲಾಕ್ ಡೌನ್ ನಿಂದಾಗಿ ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಐದು ವರ್ಷದ ಪುಟಾಣಿ ವಿಹಾನ್ ಸೋಮವಾರ ಏಕಾಂಗಿಯಾಗಿ ವಿಮಾನವನ್ನೇರಿ ಬೆಂಗಳೂರಿಗೆ ಬಂದು ಮೂರು ತಿಂಗಳ ಬಳಿಕ ತಾಯಿಯ ಮಡಿಲು ಸೇರಿರುವ ಘಟನೆ ನಡೆದಿದೆ. ನನ್ನ ಐದು ವರ್ಷದ ಮಗ ವಿಹಾನ್ ದಿಲ್ಲಿಯಿಂದ ಒಬ್ಬನೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಮೂರು ತಿಂಗಳ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾನೆ ಎಂದು ತಾಯಿ ಮಂಜೀಶ್ ಶರ್ಮಾ ತಿಳಿಸಿದ್ದರು. ವಿಹಾನ್ ಸ್ಪೆಷಲ್ ಕೆಟಗರಿಯಲ್ಲಿ ಪ್ರಯಾಣಿಕನಾಗಿ ಆಗಮಿಸಿದ್ದ. ಹಳದಿ ಬಣ್ಣದ ಬಟ್ಟೆ ತೊಟ್ಟಿದ್ದ ವಿಹಾನ್ […]

ರನ್​ವೇಯಲ್ಲಿ ವಿಮಾನ ಜಾರಿದ ಪರಿಣಾಮ : ಮೂರು ತುಂಡಾದ ವಿಮಾನ; ಮೂವರು ಪ್ರಯಾಣಿಕರ ದುರ್ಮರಣ

Thursday, February 6th, 2020
vimana

ಇಸ್ತಾನ್ಬುಲ್ : ಲ್ಯಾಂಡಿಂಗ್ ಮಾಡುವ ವೇಳೆ ಕೆಟ್ಟ ಹವಾಮಾನದಿಂದಾಗಿ ರನ್ವೇಯಲ್ಲಿ ವಿಮಾನ ಜಾರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 179 ಜನ ಗಾಯಗೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ, ವಿಮಾನ ಮೂರು ತುಂಡಾಗಿದ್ದು, ಜನರು ಪ್ರಾಣರಕ್ಷಣೆಗಾಗಿ ವಿಮಾನದ ಮುರಿದ ರೆಕ್ಕೆ ಸಹಾಯದಿಂದ ಮೇಲೆ ಬಂದಿದ್ದಾರೆ. ಇಸ್ತಾನ್ಬುಲ್ನ ಸಬಿಹಾ ಗೊಕ್ಸ್ ಹಾಗೂ ಏಜಿಯನ್ ಪೋರ್ಟ್ ಸಿಟಿ ನಡುವೆ ಹಾರಾಟ ನಡೆಸುತ್ತಿದ್ದ ಬೋಯಿಂಗ್ 737 ವಿಮಾನ ಅಪಘಾತಗೊಂಡಿದೆ. ಇಸ್ತಾನ್ಬುಲ್ನಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದಾಗಿ ಈ ಅನಾಹುತ ನಡೆದಿದೆ. ಅಪಘಾತ ನಡೆದಾಗ ಪ್ರಯಾಣಿಕರು […]

ಆಟೋ ರಿಕ್ಷಾದಲ್ಲಿ ಬಂದಿದ್ದ ಆ ವ್ಯಕ್ತಿ ಟಿಕೆಟ್ ಕೌಂಟರ್ ಬಳಿ ಬಾಂಬ್ ಇಟ್ಟು ವಿಮಾನದಲ್ಲಿ ಪರಾರಿಯಾದನೇ !

Monday, January 20th, 2020
Airport Bomb

ಮಂಗಳೂರು : ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಬಾಂಬ್ ಇದ್ದ ಲ್ಯಾಪ್‍ಟಾಪ್ ಬ್ಯಾಗ್ ಇರಿಸಿ ಬೆಳಿಗ್ಗೆ 9ರ ಸುಮಾರಿಗೆ ನಾಪತ್ತೆಯಾಗಿದ್ದ. ಅನಾಥವಾಗಿ ಬಿದ್ದಿದ್ದ ಆ ಲ್ಯಾಪ್‍ಟಾಪ್ ಬ್ಯಾಗ್ ಗಮನಿಸಿದ ಪ್ರಯಾಣಿಕರು ಏರ್ ಪೋರ್ಟ್ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದರು.  ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ಮಾಹಿತಿ ಮೇರೆಗೆ ಬೆಳಗ್ಗೆ 11.00 ಗೆ ಸ್ಥಳಕ್ಕೆ ಆಗಮಿಸಿದ  ಬಾಂಬ್ ಸ್ಕ್ವಾಡ್  ಬ್ಯಾಗ್ ಸ್ಕ್ಯಾನ್ ಮಾಡಿ ಸಜೀವ ಬಾಂಬ್ ಎಂದು ಗುರುತಿಸಿತ್ತು. ಬಳಿಕ ಬೆಳಗ್ಗೆ 11.10 ಕ್ಕೆ ಬಾಂಬ್ ಇದ್ದ ಬ್ಯಾಗನ್ನು ಪ್ರತಿರೋಧಕ ವಾಹನಕ್ಕೆ  ಇರಿಸಿ ಕೆಂಜಾರು ಗದ್ದೆ ಗೆ ಕೊಂಡೊಯ್ಯಲಾಯಿತು. ಬಾಂಬ್ ನಿಷ್ಕ್ರಿಯ ಪಡೆ […]

ಕಂಠಪೂರ್ತಿ ಕುಡಿದು ವಿಮಾನ ಚಲಾಯಿಸಲಿದ್ದ ಟರ್ಕಿ ಪೈಲಟ್‌!

Thursday, January 18th, 2018
drinking

ಮಂಗಳೂರು: ಮಂಗಳೂರಿನಿಂದ 180 ಮಂದಿ ಪ್ರಯಾಣಿಕರನ್ನು ಹೊತ್ತು ದುಬಾೖಗೆ ಮಂಗಳವಾರ ಮಧ್ಯರಾತ್ರಿ ಹೊರಡಬೇಕಿದ್ದ ಸ್ಪೈಸ್‌ ಜೆಟ್‌ ವಿಮಾನದ ಮುಖ್ಯ ಮಹಿಳಾ ಪೈಲಟ್‌ ಅತಿಯಾದ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಪರಿಣಾಮ ಸುಮಾರು ಐದು ತಾಸು ತಡವಾಗಿ ವಿಮಾನ ಟೇಕ್‌ಆಫ್ ಆದ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಏಳೆಂಟು ತಿಂಗಳಿಂದ ಪದೇ ಪದೆ ಒಂದಲ್ಲ ಒಂದು ರೀತಿಯ ಇಂತಹ ಎಡವಟ್ಟು ಸಂಭವಿಸುತ್ತಿದ್ದು, ಅದಕ್ಕೆ ಮತ್ತೂಂದು ಸೇರ್ಪಡೆಯೇ […]

ರನ್‌ವೇಯಿಂದ ಸಮುದ್ರದತ್ತ ಜಾರಿದ 168 ಜನರಿದ್ದ ಪ್ಯಾಸೆಂಜರ್‌ ವಿಮಾನ!

Tuesday, January 16th, 2018
airoplane

ಟರ್ಕಿ: ಟರ್ಕಿಯ ಟ್ರಬ್ಜೊನ್‌ ಏರ್‌ಪೋರ್ಟ್‌ನಲ್ಲಿ 168 ಜನರಿದ್ದ ವಿಮಾನವೊಂದು ರನ್‌ವೇಯಿಂದ ಜಾರಿ ಸಮುದ್ರದತ್ತ ನುಗ್ಗಿದೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಈ ಘಟನೆ ಜರುಗಿದೆ. ವಿಮಾನದಲ್ಲಿ 162 ಜನ ಪ್ರಯಾಣಿಕರು, ಇಬ್ಬರು ಪೈಲಟ್‌‌ ಹಾಗೂ ನಾಲ್ವರು ಸಿಬ್ಬಂದಿ ಇದ್ದರು. ವಿಮಾನದಿಂದ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಬೋಯಿಂಗ್‌ 737-800 ಪ್ಯಾಸೆಂಜರ್‌ ವಿಮಾನ ಟರ್ಕಿ ರಾಜಧಾನಿ ಅಂಕಾರಾದಿಂದ ಟ್ರಬ್ಜೊನ್‌ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಏಕಾಏಕಿ ಅಲುಗಾಡಲು […]