ಆಟೋ ರಿಕ್ಷಾದಲ್ಲಿ ಬಂದಿದ್ದ ಆ ವ್ಯಕ್ತಿ ಟಿಕೆಟ್ ಕೌಂಟರ್ ಬಳಿ ಬಾಂಬ್ ಇಟ್ಟು ವಿಮಾನದಲ್ಲಿ ಪರಾರಿಯಾದನೇ !

9:24 PM, Monday, January 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Airport Bomb ಮಂಗಳೂರು : ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಬಾಂಬ್ ಇದ್ದ ಲ್ಯಾಪ್‍ಟಾಪ್ ಬ್ಯಾಗ್ ಇರಿಸಿ ಬೆಳಿಗ್ಗೆ 9ರ ಸುಮಾರಿಗೆ ನಾಪತ್ತೆಯಾಗಿದ್ದ.

ಅನಾಥವಾಗಿ ಬಿದ್ದಿದ್ದ ಆ ಲ್ಯಾಪ್‍ಟಾಪ್ ಬ್ಯಾಗ್ ಗಮನಿಸಿದ ಪ್ರಯಾಣಿಕರು ಏರ್ ಪೋರ್ಟ್ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದರು.  ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ಮಾಹಿತಿ ಮೇರೆಗೆ ಬೆಳಗ್ಗೆ 11.00 ಗೆ ಸ್ಥಳಕ್ಕೆ ಆಗಮಿಸಿದ  ಬಾಂಬ್ ಸ್ಕ್ವಾಡ್  ಬ್ಯಾಗ್ ಸ್ಕ್ಯಾನ್ ಮಾಡಿ ಸಜೀವ ಬಾಂಬ್ ಎಂದು ಗುರುತಿಸಿತ್ತು. ಬಳಿಕ ಬೆಳಗ್ಗೆ 11.10 ಕ್ಕೆ ಬಾಂಬ್ ಇದ್ದ ಬ್ಯಾಗನ್ನು ಪ್ರತಿರೋಧಕ ವಾಹನಕ್ಕೆ  ಇರಿಸಿ ಕೆಂಜಾರು ಗದ್ದೆ ಗೆ ಕೊಂಡೊಯ್ಯಲಾಯಿತು.

ಬಾಂಬ್ ನಿಷ್ಕ್ರಿಯ ಪಡೆ ಮಧ್ಯಾಹ್ನ ಕೆಂಜಾರು ಗದ್ದೆಯಲ್ಲಿ ಮರಳಿನ ಚೀಲಗಳ ನಡುವೆ ಬಾಂಬ್ ಇರಿಸಿ 12 ಅಡಿ ಆಳದಲ್ಲಿ 10 ಕೆಜಿ ತೂಕವುಳ್ಳ ಸಜೀವ ಬಾಂಬ್ ಅನ್ನು ಸ್ಪೋಟಿಸಲಾಯಿತು.

Airport Bomb ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿ ಹಾನಿ ಮಾಡಬಲ್ಲ ಸಾಮರ್ಥ್ಯವುಳ್ಳ  ಐಇಡಿ ಬಾಂಬ್  12 ಅಡಿ ಆಳದಲ್ಲಿ ಇರಿಸಿ ಸ್ಫೋಟಿಸಿರುವದರಿಂದ ಅದರ ತೀವ್ರತೆ ಅಷ್ಟಾಗಿ ಕಾಣಿಸಿಕೊಂಡಿಲ್ಲ.

ಮಧ್ಯಾಹ್ನದ ಬಳಿಕ ವಿಮಾನ ನಿಲ್ದಾಣದಿಂದ  2 ಕಿಲೋಮೀಟರ್ ದೂರದಲ್ಲಿರುವ ಕೆಂಜಾರು  ಗದ್ದೆ ಗೆ ಐಇಡಿ ಬಾಂಬ್  ನ್ನು  ಪ್ರತಿರೋಧಕ ವಾಹನ ದಲ್ಲಿ  ಸಾಗಿಸಲಾಗಿತ್ತು. 2 ಗಂಟೆ ನಿರಂತರ ಪ್ರಯತ್ನ ಮಾಡಿದ್ರೂ ಕೂಡ ಬಾಂಬ್ ನಿಷ್ಕ್ರಿಯಗೊಳಿಸಲು ಸಾಧ್ಯವಾಗಲೇ ಇಲ್ಲ.  ಸಂಜೆಯ ಹೊತ್ತಿಗೆ 12 ಅಡಿ ಆಳದ ಗುಂಡಿಯಲ್ಲಿ ಮರಳು ಚೀಲಗಳನ್ನು ಇಟ್ಟು ಅದರ ಮಧ್ಯೆ ಬಾಂಬ್ ಇರಿಸಿ, ರಿಮೋಟ್ ಮೂಲಕ ಸ್ಫೋಟಿಸಲಾಯ್ತು.

ಆ ಅಪರಿಚಿತ ವ್ಯಕ್ತಿ ಬೆಳಗ್ಗೆ 8.45 ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಆಟೋ ರಿಕ್ಷಾದಲ್ಲಿ ಬಂದಿದ್ದ ಎನ್ನಲಾಗಿದೆ.  ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ  ಬಾಂಬ್ ಇದ್ದ ಲ್ಯಾಪ್‍ಟಾಪ್ ಬ್ಯಾಗ್ ಇಟ್ಟು  ಆ ವ್ಯಕ್ತಿ ವಿಮಾನದಲ್ಲಿ ಪ್ರಯಾಣಿಸಿದನೇ ಅಥವಾ ಅಲ್ಲಿಂದ ಪರಾರಿಯಾದನೇ ಎಂಬ ಮಾಹಿತಿಯನ್ನು ಇನ್ನು ಪೊಲೀಸರು ಬಿಟ್ಟು ಕೊಟ್ಟಿಲ್ಲ.
Airport Bomb

Airport Bomb

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English