ಬೆಂಗಳೂರು : ಲಾಕ್ ಡೌನ್ ನಿಂದಾಗಿ ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಐದು ವರ್ಷದ ಪುಟಾಣಿ ವಿಹಾನ್ ಸೋಮವಾರ ಏಕಾಂಗಿಯಾಗಿ ವಿಮಾನವನ್ನೇರಿ ಬೆಂಗಳೂರಿಗೆ ಬಂದು ಮೂರು ತಿಂಗಳ ಬಳಿಕ ತಾಯಿಯ ಮಡಿಲು ಸೇರಿರುವ ಘಟನೆ ನಡೆದಿದೆ.
ನನ್ನ ಐದು ವರ್ಷದ ಮಗ ವಿಹಾನ್ ದಿಲ್ಲಿಯಿಂದ ಒಬ್ಬನೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಮೂರು ತಿಂಗಳ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾನೆ ಎಂದು ತಾಯಿ ಮಂಜೀಶ್ ಶರ್ಮಾ ತಿಳಿಸಿದ್ದರು. ವಿಹಾನ್ ಸ್ಪೆಷಲ್ ಕೆಟಗರಿಯಲ್ಲಿ ಪ್ರಯಾಣಿಕನಾಗಿ ಆಗಮಿಸಿದ್ದ. ಹಳದಿ ಬಣ್ಣದ ಬಟ್ಟೆ ತೊಟ್ಟಿದ್ದ ವಿಹಾನ್ ಮುಖದ ಮಾಸ್ಕ್ ಕೂಡಾ ಹಳದಿ ಬಣ್ಣದ್ದಾಗಿತ್ತು. ಕೈಯಲ್ಲಿ ಸ್ಪೆಷಲ್ ಕೆಟಗರಿ ಪ್ಲೇಕಾರ್ಡ್ ಹಿಡಿದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ.
ದೆಹಲಿಯಿಂದ ಆಗಮಿಸಿದ್ದ ಹಲವು ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರಲ್ಲಿ ವಿಹಾನ್ ಶರ್ಮಾ ಕೂಡಾ ಒಬ್ಬನಾಗಿದ್ದ. ಕೊನೆಗೂ ಮೂರು ತಿಂಗಳ ಬಳಿಕ ದಿಲ್ಲಿಯಿಂದ ಒಬ್ಬಂಟಿಯಾಗಿ ಪ್ರಯಾಣಿಸಿ ಬೆಂಗಳೂರಿನಲ್ಲಿ ತಾಯಿಯ ಮಡಿಲು ಸೇರಿದ್ದಾನೆ. ಕಳೆದ ಎರಡು ತಿಂಗಳುಗಳಿಂದ ವಿಹಾನ್ ದೆಹಲಿಯಲ್ಲಿ ತನ್ನ ಅಜ್ಜ-ಅಜ್ಜಿಯ ಬಳಿ ವಾಸಿಸುತ್ತಿದ್ದ.
Click this button or press Ctrl+G to toggle between Kannada and English