ಹೊಸದಿಲ್ಲಿ: ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಕೆಲವು ದೇಶಗಳ ವಿಮಾನಗಳಿಗೆ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಈ ಮೂಲಕ ಭಾರತದಿಂದ ಆಂಶಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಶುರುವಾದಂತಾಗುತ್ತದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭಾರತ ಈಗಾಗಲೇ ಅಮೆರಿಕ ಹಾಗೂ ಫ್ರಾನ್ಸ್‌ನೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ವಿಮಾನಯಾನ ಹಾರಾಟ ಒಪ್ಪಂದಕ್ಕೆ ಸಹಿ ಹಾಕಿದೆ. ಇದರನ್ವಯ ಜುಲೈ 18ರಿಂದ ಆಗಸ್ಟ್ 1ರವರೆಗೆ ಏರ್ ಫ್ರಾನ್ಸ್, ದೆಹಲಿ, ಮುಂಬೈ, ಬೆಂಗಳೂರು ಮತ್ತು ಪ್ಯಾರಿಸ್ ನಡುವೆ 28 ವಿಮಾನಗಳ ಹಾರಾಟ ನಡೆಸಲಿದೆ. ಅಮೆರಿಕದ ಯುನೈಟೆಡ್ ಏರ್‌ಲೈನ್ಸ್, ಜುಲೈ 17ರಿಂದ 31ರವರೆಗೆ ಭಾರತ ಮತ್ತು ಅಮೆರಿಕ ನಡುವೆ 18 ವಿಮಾನಗಳ ಹಾರಾಟ ನಡೆಸಲಿದೆ. ಈ ಅವಧಿಯಲ್ಲಿ ದೆಹಲಿ ಮತ್ತು ನೆವಾರ್ಕ್ (ನ್ಯೂಜೆರ್ಸಿ) ನಡುವೆ ಪ್ರತಿದಿನ ವಿಮಾನ ಹಾರಾಟ ಇರಲಿದೆ. ದೆಹಲಿ ಮತ್ತು ಸ್ಯಾನ್‌ಫ್ರಾನ್ಸಿಸ್ಕೊ ನಡುವೆ ವಾರಕ್ಕೆ ಮೂರು ಬಾರಿ ವಿಮಾನ ಹಾರಾಟ ನಡೆಸಲಿದೆ. ಏರ್ ಇಂಡಿಯಾ, ಭಾರತದಿಂದ ಫ್ರಾನ್ಸ್ ಮತ್ತು ಅಮೆರಿಕಗಳಿಗೆ ವಿಮಾನ ಹಾರಾಟ ನಡೆಸಲಿದೆ ಎಂದು ಹೇಳಿದರು.
ಶೀಘ್ರವೇ ಜರ್ಮನಿ ಮತ್ತು ಬ್ರಿಟನ್ ಜತೆ ಕೂಡ ದ್ವಿಪಕ್ಷೀಯ ಒಪ್ಪಂದಕ್ಕೆ ಬರಲಾಗು ವುದು. ಇದರನ್ವಯ, ದೆಹಲಿ ಮತ್ತು ಲಂಡನ್ ನಡುವೆ ದಿನಕ್ಕೆ ಎರಡು ವಿಮಾನಗಳು ಹಾರಾಟ ನಡೆಸಲಿವೆ ಎಂದು ಅವರು ತಿಳಿಸಿದರು.
Click this button or press Ctrl+G to toggle between Kannada and English