ಮಂಗಳೂರು: ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದು ಪಡಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಆಹಾರ ಮತ್ತು ನಾಗರೀಕ ಸಚಿವ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಜ್ ಸಬ್ಸಿಡಿಯಿಂದ ಏರ್ ಇಂಡಿಯಾಗೆ ಮಾತ್ರ ಲಾಭವಾಗುತ್ತಿತ್ತು, ಸಬ್ಸಿಡಿ ಪಡೆದವರು ಏರ್ ಇಂಡಿಯಾ ವಿಮಾನದಲ್ಲೇ ಪ್ರಯಾಣಿಸಬೇಕೆಂಬ ನಿಯಮ ಹಾಕಲಾಗಿತ್ತು, ಬೇರೆ ವಿಮಾನಗಳು ಅದಕ್ಕಿಂತಲೂ ಕಡಿಮೆ ದರದಲ್ಲಿ ಹಜ್ ಗೆ ಹೋಗಬಹುದು ಎಂದರು.
ಯಾವುದೋ ಕಾಲದಲ್ಲಿ ಹಜ್ ಸಬ್ಸಿಡಿ ಜಾರಿಯಾಗಿತ್ತು, ಆದರೆ ಈಗ ಹಜ್‌ಗೆ ಹೋಗುವ ಯಾತ್ರಿಕರು ಸರ್ಕಾರದ ಸಬ್ಸಿಡಿಗೆ ಕಾದು ಕೂತಿಲ್ಲ, ಆದರೆ ಈ ನಿರ್ಧಾರದ ಮೂಲಕ ಒಂದು ವರ್ಗವನ್ನು ತುಷ್ಠೀಕರಿಸುವ ಪ್ರಯತ್ನವನ್ನು ಸರ್ಕಾರ ಮಾಡಬಾರದು ಎಂದು ಅವರು ಹೇಳಿದರು.
Click this button or press Ctrl+G to toggle between Kannada and English