ಮಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕರಾವಳಿಯಲ್ಲಿ ದುಷ್ಕರ್ಮಿಗಳಿಂದ ಬಲಿಯಾದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕಾಟಿಪಳ್ಳದ ನಿವಾಸದಲ್ಲಿ ದೀಪಕ್ ಕುಟುಂಬವನ್ನು ಭೇಟಿ ಮಾಡಿದ ಅವರು, ಸಂತ್ರಸ್ತ ಕುಟುಂಬದೊಂದಿಗೆ ದುಃಖ ಹಂಚಿಕೊಂಡು, ಆರ್ಥಿಕ ನೆರವಿನ ಭರವಸೆಯನ್ನೂ ನೀಡಿದರು.
ಕುಟುಂಬದ ಸದ್ಯದ ಪರಿಸ್ಥಿತಿಯ ಬಗ್ಗೆ ಹಿರಿಯ ನಾಯಕ ಹಾಗೂ ರಾಜ್ಯ ಉಪಾಧ್ಯಕ್ಷ ಬಿ.ಎಂ.ಫಾರೂಕ್ ಅವರು ದೇವೇಗೌಡರಿಗೆ ವಿವರಿಸಿದರು. ದೀಪಕ್ ತಾಯಿ ಪ್ರೇಮಾ ಅವರ ಪರಿಸ್ಥಿತಿಯನ್ನು ಕಂಡು ಮರುಗಿದ ಮಾಜಿ ಪ್ರಧಾನಿ, ತಮ್ಮ ವೈಯಕ್ತಿಕ ನೋವನ್ನೂ ಹಂಚಿಕೊಂಡರು.
ಹತ್ಯೆಯಾದ ಸಂದರ್ಭದಲ್ಲಿ ವೈಯಕ್ತಿಕ ಕಾರಣಗಳಿಂದ ಭೇಟಿ ನೀಡಲಾಗಲಿಲ್ಲ. ತಮ್ಮ ಕಡೆಯಿಂದ ಏನು ಮಾಡಬಹುದು ಎಂಬುದನ್ನು ನೋಡೋಣ. ಪಕ್ಷದ ನಾಯಕರ ವತಿಯಿಂದ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ಇನ್ನು, ಸೋಮವಾರ ಬೆಳಗ್ಗೆ ಆಕಾಶಭವನ ನಿವಾಸಿ ಕೊಲೆಯಾದ ಬಶೀರ್ ಅವರ ನಿವಾಸದಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲಿದ್ದಾರೆ.
Click this button or press Ctrl+G to toggle between Kannada and English