ಶಿವರಾಜ್ ಹತ್ಯೆ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು , ಮೂವರ ಬಂಧನ

10:07 AM, Tuesday, January 23rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shivarajಮಂಗಳೂರು: ನಗರದಲ್ಲಿ ಭಾನುವಾರ ತಡರಾತ್ರಿ ನಡೆದ ಶಿವರಾಜ್ (39) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುನೀಲ್ (32), ಧೀರಜ್ (25), ಗದಗ ಮೂಲದ ಮಲ್ಲೇಶ್ (23) ಎಂದು ಗುರುತಿಸಲಾಗಿದೆ.

ಆರೋಪಿಗಳು ಹಳೇ ದ್ವೇಷದ ಹಿನ್ನಲೆಯಲ್ಲಿ ಶಿವರಾಜ್ ಕೊಲೆ ಮಾಡಲು ಬಂದಿದ್ದೆವು. ತಪ್ಪಿ ಶಿವರಾಜ್ ರನ್ನು ಕೊಲೆ ಮಾಡಿರುವುದಾಗಿ ಪೊಲೀಸರೆದುರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಓರ್ವ ಅಮಾಯಕ ಬಲಿ ಮಂಗಳೂರು ಹೊರವಲಯದ ತಣ್ಣೀರುಬಾವಿ ಎಂಬಲ್ಲಿ ತಡರಾತ್ರಿ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿವರಾಜ್ ಅವರನ್ನು ಆರೋಪಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿದ್ದರು. ರೌಡಿಶೀಟರ್ ಭರತೇಶ್ ಎಂಬವನ ಸಹೋದರನಾಗಿದ್ದ ಶಿವರಾಜ್ ರನ್ನು ಭರತೇಶ್ ಎಂದುಕೊಂಡು ಹತ್ಯೆ ಮಾಡಲಾಗಿದೆ. ಆರೋಪಿಗಳಿಗೆ ಭರತೇಶ್ ಮೇಲೆ ದ್ವೇಷವಿತ್ತು. ಪ್ರತಿದಿನ ಮನೆಯ ಟಾರಸ್ ಮೇಲೆ ಭರತೇಶ್ ಮಲಗುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆರೋಪಿಗಳು ತಡರಾತ್ರಿ ದಾಳಿ ನಡೆಸಿ ಹತ್ಯೆ ಮಾಡಿದ್ದರು.

ಆದರೆ, ಭಾನುವಾರ ಭರತೇಶ್ ಬೇರೆಡೆ ಹೋಗಿದ್ದ ಕಾರಣ ಸಹೋದರ ಶಿವರಾಜ್ ಮನೆಯ ಟೆರೇಸ್ ಮೇಲೆ ಮಲಗಿದ್ದರು. ಈ ನಡುವೆ ಕೊಲ್ಲಲು ಬಂದವರು ಟೆರೇಸ್ ಮೇಲೆ ಮಲಗಿದ್ದವ ಭರತೇಶ್ ಎಂದುಕೊಂಡು, ಅನ್ಯಾಯವಾಗಿ ಶಿವರಾಜ್ ಅವರ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆ ಇದ್ದು, ಇನ್ನೂ ಕೆಲವು ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English