ಮಂಗಳೂರು:`ಜೀವನದಿ ಪಲ್ಗುಣಿ ಉಳಿಸಿ’ ಘೋಷಣೆಯೊಂದಿಗೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಯಿತು.
ಜಾಥಾದ ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಲ್ಗುಣಿ ನದಿಯ ನೀರಿನ ಮೂಲವಾಗಿರುವ ತೋಕೂರು ಹಳ್ಳಕ್ಕೆ ಕೈಗಾರಿಕಾ ತ್ಯಾಜ್ಯ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.
ತೋಕೂರು ಹಳ್ಳದ ದಡದಲ್ಲಿರುವ ರುಚಿಗೋಲ್ಡ್, ಅದಾನಿ ವಿಲ್ಮ, ಅನುಗ್ರಹ, ಯು.ಬಿ.ಬಿಯರ್ ಮುಂತಾದ ಕೈಗಾರಿಕಾ ಘಟಕಗಳು ನಿಯಮ ಮೀರಿ ನದಿಯ ನೀರಿನ ಮೂಲಗಳಿಗೆ ತಮ್ಮ ವಿಷಯುಕ್ತ ಮಾಲಿನ್ಯವನ್ನು ಹರಿಸುತ್ತಿದ್ದು, ಅಂತಹ ಅಕ್ರಮಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನಪಾ ಸದಸ್ಯ ದಯಾನಂದ ಶೆಟ್ಟಿ ಮಾತಾಡಿದರು. ಡಿವೈಎಫ್ಐ ಮುಖಂಡರಾದ ಜೀವನ್ ರಾಜ್ ಕುತ್ತಾರ್ ಸೇರಿದಂತೆ ಮೊದಲಾದವರಿದ್ದರು.
Click this button or press Ctrl+G to toggle between Kannada and English