ಅಬ್ದುಲ್ ಬಷೀರ್ ಹತ್ಯೆಗೆ ಜೈಲಲ್ಲಿ ಸಂಚು: ಮಂಗಳೂರು ಪೊಲೀಸ್ ಆಯುಕ್ತ

1:03 PM, Thursday, January 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

bashirಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಜನವರಿ 3 ರ ರಾತ್ರಿ ನಡೆದ ಅಬ್ದುಲ್ ಬಷೀರ್ ಅವರ ಹತ್ಯೆಗೆ ಮಂಗಳೂರು ಜೈಲಿನಲ್ಲಿಯೇ ಸಂಚು ರೂಪಿಸಲಾಗಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಅಬ್ದುಲ್ ಬಷೀರ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ತನಿಖೆಗೆ ಒಳಪಡಿಸಿದಾಗ ಈ ಹತ್ಯಾ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆಯಿತು ಎಂದು ಅವರು ಹೇಳಿದರು.

ಮತ್ತಿಬ್ಬರ ಬಂಧಿಸಿದ ಸಿಸಿಬಿ ಪೊಲೀಸ್ ಈ ಹತ್ಯೆ ಪ್ರಕರಣದ ಸಂಚನ್ನು ಮಂಗಳೂರು ಜೈಲಿನಲ್ಲಿ ಹೆಣೆಯಲಾಗಿತ್ತು ಎಂದು ಹೇಳಿದ ಅವರು , “ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಬಂಧಿತರಾಗಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಂಟ್ವಾಳದ ಮಿಥುನ್ ಪೂಜಾರಿ, ಮಂಗಳೂರು ಕಾವೂರಿನ ತಿಲಕ್ ರಾಜ್, ಬಂಟ್ವಾಳ ಫರಂಗಿಪೇಟೆಯ ರಾಜು ಹಾಗು ಮಂಗಳೂರು ಕೋಡಿಕಲ್ ನಿವಾಸಿ ಅನೂಪ್ ಕುಲಾಲ್ ಈ ಹತ್ಯಾ ಪ್ರಕರಣದಲ್ಲಿ ಇದ್ದಾರೆ,” ಎಂದು ಅವರು ವಿವರ ನೀಡಿದರು.

ಈ ನಾಲ್ವರ ಪೈಕಿ 3 ಮಂದಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ. ಮತ್ತೊಬ್ಬ ಆರೋಪಿ ಅನುಪ್ ಕುಲಾಲ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English