ಕೊರಗಜ್ಜ ದೈವಸ್ಥಾನಕ್ಕೆ ಖಾದರ್, ಮುಸ್ಲಿಂ ಮೂಲಭೂತವಾದಿಗಳಿಂದ ಟೀಕೆ

4:56 PM, Tuesday, January 30th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

U-T-Kaderಮಂಗಳೂರು: ತುಳುನಾಡು ದೇವ-ದೈವಗಳ ಬೀಡು. ಇಲ್ಲಿ ದೈವಾರಾಧನೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. ತುಳುನಾಡಿನಲ್ಲಿ ದೈವಗಳನ್ನು ಧರ್ಮ ಭೇದ ಮರೆತು ಎಲ್ಲರೂ ಆರಾಧಿಸುತ್ತಾರೆ. ಆದರೆ ತುಳುನಾಡಿನ ಕಾರಣಿಕ ದೈವ ಸ್ವಾಮಿ ಕೊರಗಜ್ಜನ ದೈವಸ್ಥಾನಕ್ಕೆ ಆಹಾರ ಸಚಿವ ಯುಟಿಖಾದರ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿರೋದು ಇದೀಗ ಮುಸ್ಲಿಂ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸಿದೆ.ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ಪ್ರಸಿದ್ದ ಕೊರಗಜ್ಜನ ಕ್ಷೇತ್ರದಲ್ಲಿ ಕೊರಗಜ್ಜನಿಗೆ ನರ್ತನ ಸೇವೆ ನಡೆದಿದ್ದು ಈ ಸಂಧರ್ಭದಲ್ಲಿ ಸಚಿವ ಯುಟಿಖಾದರ್ ಕೂಡಾ ಭೇಟಿ ನೀಡಿದ್ದರು.

U-T-Kader-2ಬಿಪಿಎಲ್ ಕಾರ್ಡ್ ಸಮಸ್ಯೆ ಬಗೆಹರಿಸಿದ ಶ್ರೇಯಸ್ಸು ನಮ್ಮದು: ಖಾದರ್ ಭೇಟಿ ನೀಡಿದ್ದು ಮಾತ್ರವಲ್ಲದೆ ಸ್ವತಃ ದೈವ ಪಾತ್ರಿಯಿಂದ ಕೊರಗಜ್ಜನ ಪ್ರಸಾದ ವನ್ನೂ ಸ್ವೀಕರಿಸಿದ್ದರು. ಆದರೆ ಇದೀಗ ಖಾದರ್ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿರೋದು ಮುಸ್ಲಿಂ ಮೂಲಭೂತವಾದಿಗಳ ವಿರೋಧಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಖಾದರ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದಾನಾತ್ಮಕವಾಗಿ ಟೀಕೆಗಳನ್ನು ಹರಿಬಿಡಲಾಗುತ್ತಿದೆ.

ಮುಸ್ಲಿಂ ನಾಗಿ ಖಾದರ್ ಹಿಂದೂ ಕ್ಷೇತ್ರಕ್ಕೆ ಭೇಟಿ ನೀಡಿದ್ದು ತಪ್ಪು ಎಂದು ಟೀಕಿಸಲಾಗಿದ್ದು, ಹಿಂದೂಗಳ ಕ್ಷೇತ್ರಕ್ಕೆ ಭೇಟಿ ನೀಡಿರೋದ್ರಿಂದ ಹಿಂದೂಗಳು ಮತವನ್ನು ನೀಡೋದಿಲ್ಲ. ಸುಮ್ಮನೆ ನಾಟಕವಾಡೋದು ಬಿಟ್ಟು ಮುಸ್ಲಿಂ ಧರ್ಮದ ಅನುಯಾಯಿಯಾಗಿ ಮುಂದುವರಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸಚಿವ ಯು.ಟಿ.ಖಾದರ್ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಹಾಗು ಪ್ರಸಾದ ಸ್ವೀಕರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English