ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ಸಂದರ್ಭದಲ್ಲಿ ಈ ಬಾರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಪತ್ರಿಕಾಭಾವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಗಂಡ ಮೃತಪಟ್ಟ ಮಹಿಳೆಯನ್ನು ಸಮಾಜ ಇತರ ಮಹಿಳೆಯರಂತೆ ಗೌರವ ಭಾವದಿಂದ ನೋಡುವಂತಾಗಬೇಕು. ಅದಕ್ಕಾಗಿ ಸುಮಾರು 1500 ಮಂದಿ ವಿಧವೆಯರಿಗೆ ಸೀರೆ, ಕುಂಕುಮದ ಕರಡಿಗೆ, ಹೂವು, ಬಳೆಗಳನ್ನು ದಸರಾ ಉತ್ಸವ ಸಂದರ್ಭದಲ್ಲಿ ನೀಡಲಾಗುವುದು ಎಂದು ಹೇಳಿದರು. ಮಹಿಳೆಯರಿಗೆ ವಿಶೇಷ ಗೌರವ ನೀಡಿವ , ಮಾತೃದೇವೋಭವ ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಗಂಡ ಮೃತಪಟ್ಟ ಕೂಡಲೇ ಆಕೆಯ ಕುತ್ತಿಗೆಯಿಂದ ಕರಿಮಣಿ ತೆಗದು,ಕುಂಕುಮ ಅಳಿಸಿ, ಬಳೆಗಳನ್ನು ಒಡೆದು ಹಾಕುವ ಕ್ರಮಗಳನ್ನು ನಡೆಸಲಾಗುತ್ತದೆ. ಆಕೆಯನ್ನು ಶುಭಕಾರ್ಯಗಳಿಂದ ದೂರವಿಡಲಾಗುತ್ತದೆ. ತಾನು ಹೆತ್ತು, ಸಾಕಿ ಸಲಹಿದ ಮಕ್ಕಳ ವಿವಾಹ ಸಮಾರಂಭದ ವಿಧಿವಿಧಾನಗಳಲ್ಲಿ ಕೂಡಾ ಆಕೆ ಭಾಗವಹಿಸುವಂತಿಲ್ಲ. ಇಂತಹ ಆಚರಣೆಗಳನ್ನು ನಿಗ್ರಹಿಸುವ ದೃಷ್ಟಿಯಿಂದ ಈ ಬಾರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿಧವೆ ಎಂಬ ಶಬ್ಧವನ್ನು ಬಳಸದೆ ಸಮಾಜದ ಈ ದೃಷ್ಠಿಕೋನದಲ್ಲಿ ಅಂತಹ ಮಹಿಳೆಯರು ಪರಿವರ್ತನೆಯಾಗಬೇಕು. ಮಠಾಧೀಶರು, ಧರ್ಮಗುರುಗಳು, ಸಮಾಜ ಸುಧಾರಕರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು , ಶಿಕ್ಷಕರು ಈ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಎಸ್. ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕುಳೂರು, ಕೋಶಾಧಿಕಾರಿ ಪದ್ಮರಾಜ್, ವಕ್ತಾರ ಹರಿಕೃಷ್ಣ ಬಂಟ್ವಾಳ್ ಅವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English
October 7th, 2011 at 22:17:19
hinduthvadalle kranthitaruva nirdhara mahelege sandha gowrava balere…..besh…mechuvanthadu….hindu dharmadalle…kranthidayaka…daari.
September 27th, 2011 at 13:53:13
reply testing ನೊಡಿ
September 27th, 2011 at 13:51:35
ಕನ್ನಡ testing