ದಿ| ನಾರಾಯಣಸ್ವಾಮಿ ಅವರ ಹೆಸರು ಗೋಕರ್ಣನಾಥ ಕ್ಷೇತ್ರದಲ್ಲಿರುವ ಕೆರೆ ಹಾಗೂ ಹೂದೋಟಕ್ಕೆ ನಾಮಕರಣ

Monday, February 20th, 2017
Narayana Swamy

ಮಂಗಳೂರು:  ಬಿಲ್ಲವ ಸಮುದಾಯದ ಮುಖಂಡ, ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ದಿ| ನಾರಾಯಣಸ್ವಾಮಿ ಅವರ ಹೆಸರನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿರುವ ಕೆರೆ ಹಾಗೂ ಹೂದೋಟಕ್ಕೆ ಇಡಲಾಗಿದೆ ಎಂದು  ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ. ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ  ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಸಮಾಜದಲ್ಲಿ ಸೇವೆ ಮಾಡಿದವರನ್ನು ಗುರುತಿಸಿ ಅವರ ಸಾಧನೆಗಳನ್ನು ಅವರ ನಿಧನಾ ನಂತರ ಉಲ್ಲೇಖ ಮಾಡುವಂತಹುದು ಅಗತ್ಯವಾಗಿ ನಡೆಯಬೇಕು. ಸಮಾಜಕ್ಕಾಗಿ ಸೇವೆ ಮಾಡಿದವರನ್ನು ಸ್ಮರಿಸುವುದು ಭಾರತೀಯ ಸಂಸ್ಕೃತಿ […]

ಕುದ್ರೋಳಿ ದೇವಸ್ಥಾನದಲ್ಲಿದ್ದ ಮಹಿಳಾ ಅರ್ಚಕಿಯರು ನಾಪತ್ತೆ

Monday, October 28th, 2013
Mahila Archakiyaru

ಮಂಗಳೂರು : ಕುದ್ರೋಳಿ ದೇಗುಲದಲ್ಲಿ ಮಹಿಳಾ ಅರ್ಚಕಿಯರಾಗಿ ನೇಮಕಗೊಂಡಿದ್ದ ಇಬ್ಬರು ವಿಧವೆಯರು  ಕಳೆದ ಒಂದು ವಾರದಿಂದ ದೇವಸ್ಥಾನದ ಆವರಣದಲ್ಲಿ ಕಾಣಿಸುತ್ತಿಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಕ ಮಾಡುವ ಮೂಲಕ ದೊಡ್ಡ ಕ್ರಾಂತಿ ಮಾಡಿದ್ದೇನೆ ಎಂದು ಹೇಳಿದ್ದ ಜನಾರ್ದನ ಪೂಜಾರಿ ಇದರಿಂದ ಸಾಕಷ್ಟು ಮುಖಭಂಗ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಹಲವಾರು ಮಂದಿ ಪತ್ರಿಕೆಗೆ ಮಾಹಿತಿ ನೀಡಿದ್ದು, ದೇವಸ್ಥಾನದಲ್ಲಿ ಮಹಿಳಾ ಅರ್ಚಕಿಯರು ಕಾಣಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೇವಸ್ಥಾನದ ಆಡಳಿತ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಶಿರ್ಡಿ ಸಾಯಿಬಾಬಾ ಮಂದಿರದ ಉದ್ಘಾಟನೆ

Saturday, October 12th, 2013
temple

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಶಿರ್ಡಿ ಸಾಯಿಬಾಬಾ ಮಂದಿರದ ಉದ್ಘಾಟನೆಯನ್ನು ಜನಾರ್ದನ ಪೂಜಾರಿ ಅವರ ಅತ್ತೆ ಬೆಳ್ತಂಗಡಿಯ ದಿ| ಸಂಜೀವ ಕಾರಂದೂರು ಅವರ ಪತ್ನಿ ಪುಷ್ಪಾವತಿ ಅವರು ಶುಕ್ರವಾರ ಸಂಜೆ ನೆರವೇರಿಸಿದರು. ನೂತನ ಮಂದಿರದ ಸಂಪೂರ್ಣ ವೆಚ್ಚವನ್ನು ಜನಾರ್ದನ ಪೂಜಾರಿ ಅವರ ಪುತ್ರ ಸಂತೋಷ್‌ ಕುಮಾರ್‌ ಪೂಜಾರಿ ದಂಪತಿ ಭರಿಸಿದ್ದಾರೆ. ಚೆಂಡೆ ವಾದ್ಯಗಳ ಸಮೇತ ಪುಷ್ಪಾವತಿ ಅವರನ್ನು ಕುದ್ರೋಳಿ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ದೇವಸ್ಥಾನದಲ್ಲಿ ಪೂಜೆ ನಡೆದ ಬಳಿಕ ನವದುರ್ಗೆಯರ ಪೂಜೆಯಲ್ಲಿ ಭಾಗವಹಿಸಿದ ಅವರು […]

ಕುದ್ರೋಳಿಯಲ್ಲಿ ಜನವರಿ 1 ರಂದು ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ

Wednesday, December 26th, 2012
Urulu Seve

ಮಂಗಳೂರು :ಜನವರಿ 1 ರಂದು ಶ್ರೀ ಕ್ಷೇತ್ರ ಕುದ್ರೋಳಿ ಯಲ್ಲಿ ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ಆಯೋಜಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರು ತಿಳಿಸಿದರು. ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ನಡೆಸುವುದಲ್ಲದೆ ಇದಾದ ನಂತರ ಪತಿಯನ್ನು ಕಳೆದುಕೊಂಡ ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ ಮಾಡಲಾಗುವುದು ದೇವರ ಸೃಷ್ಟಿಯಲ್ಲಿ ನಾವೆಲ್ಲರೂ ಒಂದೇ ದೇವರು ಎಲ್ಲರಿಗೂ ಸಮಾನವಾದ ಅವಕಾಶ ನೀಡಿರುವಾಗ ಮನುಷ್ಯರಾದ ನಾವೇಕೆ ತಾರತಮ್ಯ […]

ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದ ‘ಮಂಗಳೂರು ದಸರಾ’ಕ್ಕೆ ಚಾಲನೆ

Thursday, September 29th, 2011
Kudroli Temple

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ವರ್ಷಂಪ್ರತಿ ಜರಗುವ ವೈಭವದ ‘ಮಂಗಳೂರು ದಸರಾ’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಶಾರದೆ ಹಾಗೂ ನವದುರ್ಗೆಯರ ವಿಗ್ರಹ ಪ್ರತಿಷ್ಠೆ ನಡೆಯಿತು.ಉದ್ಯಮಿ ರಮೇಶ್‌ ಕುಮಾರ್‌ ಹಾಗೂ ಊರ್ಮಿಳಾ ರಮೇಶ್‌ ಕುಮಾರ್‌ ದಂಪತಿ ಪ್ರತಿಷ್ಠಾಪನಾ ದೀಪವನ್ನು ಬೆಳಗಿದರು. ಶಾರದೆಯ ವಿಗ್ರಹವನ್ನು ಕ್ಷೇತ್ರಕ್ಕೆ ಪ್ರದಕ್ಷಿಣೆ ಮಾಡಿ ನಂತರ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 11.35ಕ್ಕೆ ನವದುರ್ಗೆಯರು ಹಾಗೂ ಶಾರದೆಯ ವಿಗ್ರಹವನ್ನು ಸಾಂಪ್ರದಾಯಿಕ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸುವ ಮೂಲಕ ಮುಂದಿನ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ

Wednesday, September 21st, 2011
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ಸಂದರ್ಭದಲ್ಲಿ ಈ ಬಾರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಪತ್ರಿಕಾಭಾವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಗಂಡ ಮೃತಪಟ್ಟ ಮಹಿಳೆಯನ್ನು ಸಮಾಜ ಇತರ ಮಹಿಳೆಯರಂತೆ ಗೌರವ ಭಾವದಿಂದ ನೋಡುವಂತಾಗಬೇಕು. ಅದಕ್ಕಾಗಿ ಸುಮಾರು 1500 ಮಂದಿ ವಿಧವೆಯರಿಗೆ ಸೀರೆ, ಕುಂಕುಮದ ಕರಡಿಗೆ, ಹೂವು, ಬಳೆಗಳನ್ನು ದಸರಾ ಉತ್ಸವ ಸಂದರ್ಭದಲ್ಲಿ ನೀಡಲಾಗುವುದು ಎಂದು ಹೇಳಿದರು. ಮಹಿಳೆಯರಿಗೆ ವಿಶೇಷ ಗೌರವ […]