ಕುದ್ರೋಳಿಯಲ್ಲಿ ಜನವರಿ 1 ರಂದು ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ

3:42 PM, Wednesday, December 26th, 2012
Share
1 Star2 Stars3 Stars4 Stars5 Stars
(No Ratings Yet)
Loading...

Urulu Seveಮಂಗಳೂರು :ಜನವರಿ 1 ರಂದು ಶ್ರೀ ಕ್ಷೇತ್ರ ಕುದ್ರೋಳಿ ಯಲ್ಲಿ ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ಆಯೋಜಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರು ತಿಳಿಸಿದರು. ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ನಡೆಸುವುದಲ್ಲದೆ ಇದಾದ ನಂತರ ಪತಿಯನ್ನು ಕಳೆದುಕೊಂಡ ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ ಮಾಡಲಾಗುವುದು ದೇವರ ಸೃಷ್ಟಿಯಲ್ಲಿ ನಾವೆಲ್ಲರೂ ಒಂದೇ ದೇವರು ಎಲ್ಲರಿಗೂ ಸಮಾನವಾದ ಅವಕಾಶ ನೀಡಿರುವಾಗ ಮನುಷ್ಯರಾದ ನಾವೇಕೆ ತಾರತಮ್ಯ ಮಾಡಬೇಕು ಹೀಗಾಗಿ ಸೂತಕ, ಮಡಿ – ಮೈಲಿಗೆ ಯಾವುದಕ್ಕೂ ಅವಕಾಶವಿಲ್ಲ. ಜಾತಿ ಮತದ ತಾರತಮ್ಯ ಪಿಡುಗನ್ನು ಹೊಡೆದೋಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.

ರಾಜ್ಯ ರಾಜಕಾರಣದ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿನ್ನೆ ಲೋಕಾಯುಕ್ತ ಪೊಲೀಸರು ರಾಜ್ಯದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ಮನೆ ಮೇಲೆ ದಾಳಿ ಮಾಡಿದಾಗ ಚಿನ್ನಾಭರಣಗಳು ಹಾಗೂ ಬೆಳ್ಳಿಯ ಆಭರಣಗಳು ಹಾಗೂ ಆಸ್ತಿಯ ಬಗ್ಗೆ ದಾಖಲೆಗಳು ಪೊಲೀಸರಿಗೆ ದೊರೆತವು ಇವೆಲ್ಲವೂ ಈಶ್ವರಪ್ಪನವರು ಅಕ್ರಮ ಮಾಡಿದ್ದಾರೆ ಎಂಬುದನ್ನು ಸಾಬೀತು ಮಾಡಿವೆ. ಆದ್ದರಿಂದ ಅವರನ್ನು ಈ ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದರು. ಈಶ್ವರಪ್ಪ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ನೀಡಿರುವ ಹೇಳಿಕೆ ಹಾಸ್ಯಾಸ್ಪದ ಎಂದ ಅವರು ತನ್ನ ಮೇಲೂ ಪ್ರಕರಣ ದಾಖಲಾಗಬಹುದು ಎಂಬ ಭಯದಿಂದ ಈಶ್ವರಪ್ಪ ರಾಜಿನಾಮೆ ಕೊಡುವ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎಂದರು.

ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಪ್ರಕರಣವನ್ನು ಸಿಒಡಿಗೆ ಒಪ್ಪಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ದೆಹಲಿಯ ಪ್ರಕರಣವನ್ನು ಸರಕಾರವು ಫಾಸ್ಟ್ ಟ್ರ್ಯಾಕ್ ಕೋರ್ಟಿನಲ್ಲಿ ತನಿಖೆ ನಡೆಸಲು ಒಪ್ಪಿದೆ ಅದೇ ರೀತಿ ಪ್ರತಿ ರಾಜ್ಯದಲ್ಲೂ ಅಂತಹ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಹಾಗೂ ಸೌಜನ್ಯ ಕೊಲೆ ಪ್ರಕರಣ ಹಾಗೂ ಇತರ ಇಂತಹ ಪ್ರಕರಣಗಳನ್ನು ಫಾಸ್ಟ್ ಟ್ರ್ಯಾಕ್ ಕೋರ್ಟುಗಳಲ್ಲಿ ತನಿಖೆ ನಡೆಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿರುವುದಾಗಿ ಅವರು ಹೇಳಿದರು.

ಬಿಜೆಪಿ ಮತ್ತು ಕೆಜೆಪಿ ಎರಡು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ ಪೂಜಾರಿಯವರು ಎರಡೂ ಕೂಡ ಭ್ರಷ್ಟ ಜನರ ಸಮೂಹ, ಮುಂದಿನ ದಿನಗಳಲ್ಲಿ ಅಧಿಕಾರದ ಆಸೆಯಿಂದ ಬಿಜೆಪಿ ಕೆಜೆಪಿ ಒಂದಾಗಬಹುದು ಹೊರತು ಕಾಂಗ್ರೆಸ್ ಕೆಜೆಪಿಯಲ್ಲ ಎಂದರು. ಪತ್ರಿಕಾಗೋಷ್ಟಿಯಲ್ಲಿ ಮೂಡಾದ ಮಾಜಿ ಅಧ್ಯಕ್ಷ ಸುರೇಸ್ ಬಲ್ಲಾಳ್, ಕಳ್ಳಿಗೆ ತಾರನಾಥ ಶೆಟ್ಟಿ, ರೋಶನ್ ಕುವೆಲ್ಲೋ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English