ಮತದಾರರ ಪಟ್ಟಿಗೆ ಕೇರಳ ವಿದ್ಯಾರ್ಥಿಗಳ ಹೆಸರು ಸೇರಿಸಿರುವ ಬಗ್ಗೆ ದೂರು: ವೇದವ್ಯಾಸ ಕಾಮತ್

3:42 PM, Wednesday, January 31st, 2018
Share
1 Star2 Stars3 Stars4 Stars5 Stars
(No Ratings Yet)
Loading...

kerala-studentಮಂಗಳೂರು: ಮಹಾನಗರ ಪಾಲಿಕೆ ಚುನಾವಣಾ ಶಾಖೆಯಲ್ಲಿ ಅನಧಿಕೃತವಾಗಿ ಕೇರಳ ಮೂಲದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಇಲ್ಲಿನ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ ಕ್ರಮದ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದುಹಾಕಿರುವುದಕ್ಕೆ ಸೂಕ್ತ ಪುರಾವೆ ಒದಗಿಸದೆ ಇಲ್ಲಿ ಏಕಾಏಕಿ 3 ಸಾವಿರಕ್ಕೂ ಅಧಿಕ ಕೇರಳದ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅರ್ಜಿ ಸ್ವೀಕರಿಸಲಾಗಿದೆ. ಪಾಲಿಕೆಯ ಚುನಾವಣಾ ಶಾಖೆಯು ಸ್ಥಳೀಯ ಶಾಸಕರ ಸೂಚನೆಯ ಮೇರೆಗೆ ಈ ರೀತಿ ಮಾಡಿರುವ ಶಂಕೆ ಇದೆ.

ಮತದಾರರ ಪಟ್ಟಿಗೆ ಅನಧಿಕೃತವಾಗಿ ಸೇರ್ಪಡೆಗೊಳಿಸುವುದನ್ನು ಬಹಿರಂಗವಾಗಿ ಚಿತ್ರೀಕರಿಸಿ ಬಯಲಿಗೆ ತರಲಾಗಿದೆ. ಆದರೆ ಬಯಲಿಗೆ ತಂದವರ ವಿರುದ್ಧವೇ ಕಾಂಗ್ರೆಸ್‌ನವರು ಪೊಲೀಸರಿಗೆ ದೂರು ನೀಡಿರುವುದು ವಿಪರ್ಯಾಸ ಎಂದು ಆರೋಪಿಸಿದರು.

ಮಂಗಳೂರಿನಲ್ಲಿ ಆಧಾರ್ ಕಾರ್ಡ್‌ನ್ನು ವಿದೇಶಿ ವಿದ್ಯಾರ್ಥಿಗೆ ನೀಡಿರುವುದರ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ. ಶ್ರೀಸಾಮಾನ್ಯರಿಗೆ ಆಧಾರ್ ಕಾರ್ಡ್‌ ಮಾಡಿಸಲು ಇನ್ನೂ ಸಾಧ್ಯವಾಗದಿರುವಾಗ ವಿದೇಶಿ ವಿದ್ಯಾರ್ಥಿಗೆ ಹೇಗೆ ಸುಲಭದಲ್ಲಿ ಆಧಾರ್ ಕಾರ್ಡ್‌ ಸಿಕ್ಕಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ ಎಂದರು.

ಬಿಜೆಪಿ ವತಿಯಿಂದ  ಅಭಿಯಾನ ನಡೆಸಿದರೆ, ಅದನ್ನು ಆಕ್ಷೇಪಿಸುವ ಕಾಂಗ್ರೆಸ್‌ನವರು ಸ್ಥಳೀಯ ಶಾಸಕರ ಕಚೇರಿಯ ಮಹಿಳೆಯೊಬ್ಬರು ಆಪಾರ್ಟ್‌ಮೆಂಟ್‌‌ಗಳಿಗೆ ತೆರಳಿ ಆಧಾರ್ ಕಾರ್ಡ್‌ ಮಾಡಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ವಿಚಾರವನ್ನು ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English