ಮಂಗಳೂರಿನಿಂದ ಹೊರಟಿದ್ದ ಟ್ರೈನ್‌ನಲ್ಲಿ ನಟಿಗೆ ಲೈಂಗಿಕ ಕಿರುಕುಳ  

12:50 PM, Friday, February 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

sanushaಮಂಗಳೂರು: ಟ್ರೈನ್‌ನಲ್ಲಿ ಮಲಗಿದ್ದಾಗ ತನಗೆ ಮಧ್ಯರಾತ್ರಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಕೇರಳದ ನಟಿ ಸನುಷಾ ಆರೋಪಿಸಿದ್ದಾರೆ. ನಿದ್ದೆಗೆ ಜಾರಿದಾಗ ಯಾರೋ ಕಾಮುಕ ತುಟಿಯ ಮೇಲೆ ಕೈ ಸವರಿದ್ದಾನೆ. ಇದರಿಂದ ತಕ್ಷಣವೇ ಎಚ್ಚರಗೊಂಡ ನಟಿ ಸನುಷಾ ಆ ಕಾಮುಕನನ್ನು ಹಿಡಿದಿದ್ದಾರೆ.

ಮಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣದಿಂದ ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದ ಮಾವೆಲಿ ಎಕ್ಸ್‌ಪ್ರೆಸ್‍ನಲ್ಲಿ ಈ ಘಟನೆ ನಡೆದಿದೆ. ಸನುಷಾ ಕನ್ನಡದ ಚಿತ್ರವೊಂದರಲ್ಲೂ ನಟಿಸಿದ್ದಾರೆ.

ಕಣ್ಣೂರಿನಿಂದ ತಿರುವನಂತಪುರಂಗೆ ಮಾವೆಲಿ ಎಕ್ಸ್‌ಪ್ರೆಸ್‍ನ 2 ಟೈರ್ ಎಸಿ ಕೋಚ್‍ನಲ್ಲಿ ಸನುಷಾ ಪ್ರಯಾಣಿಸುತ್ತಿದ್ದರು. ಸನುಷಾ ಮೇಲಿನ ಬರ್ತ್‍ನಲ್ಲಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ‘ಟ್ರೈನ್‌‌ಲ್ಲಿ ನಾನು ಮಲಗಿದ್ದಾಗ ಯಾರೋ ಒಬ್ಬ ನನ್ನ ತುಟಿಯ ಮೇಲೆ ಕೈ ಸವರುತ್ತಿದ್ದ. ಕಣ್ಣು ಬಿಟ್ಟು ನೋಡಿದಾಗ ನನಗೆ ಶಾಕ್ ಆಯ್ತು. ತಕ್ಷಣ ನಾನು ಆತನ ಕೈ ಬಿಗಿಯಾಗಿ ಹಿಡಿದು, ಬೆರಳುಗಳನ್ನು ತಿರುಚಿದೆ’ ಎಂದು ಸನುಷಾ ಹೇಳಿದ್ದಾರೆ.

ಅಲ್ಲದೇ, ‘ಸಹಾಯಕ್ಕಾಗಿ ಕೆಳಗಡೆ ಮಲಗಿದ್ದ ವ್ಯಕ್ತಿಯೊಬ್ಬರನ್ನು ಕರೆದೆ. ಆದರೆ, ಆ ವ್ಯಕ್ತಿ ನೆರವಿಗೆ ಬರಲಿಲ್ಲ. ಆಗ ಕಿರುಚಿಕೊಂಡಿದೆ. ಆದರೂ, ಯಾರು ಕೂಡ ನನ್ನ ಸಹಾಯಕ್ಕೆ ಬರಲಿ. ಸಮಯ ಮಧ್ಯರಾತ್ರಿ 1:10 ಆಗಿತ್ತು. ಸ್ಕ್ರಿಪ್ಟ್‌‌ ರೈಟರ್‌‌ ಉನ್ನಿ ಮತ್ತು ರಂಜಿತ್ ಎಂಬ ಪ್ರಯಾಣಿಕ ಇಬ್ಬರೂ ಮಾತ್ರ ನನ್ನ ಸಹಾಯಕ್ಕೆ ಬಂದರು’ ಎಂದು ನಟಿ ಸನುಷಾ ವಿವರಿಸಿದ್ದಾರೆ.

‘ನಂತರ ಸ್ಕ್ರಿಪ್ಟ್‌‌ ರೈಟರ್‌‌ ಉನ್ನಿ ಮತ್ತು ರಂಜಿತ್ ಟಿಟಿಇಯನ್ನು ಕರೆಯಲು ಹೋದರು. ಆಗ ನಾನು ಆ ಆರೋಪಿಯನ್ನು ಅಲುಗಾಡದಂತೆ ಹಿಡಿದುಕೊಂಡೆ. ಟಿಟಿಇ ಬಂದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಮುಂದೆ ಅರ್ಧ ಗಂಟೆಯಲ್ಲಿ ತ್ರಿಶೂರ್‌ ನಿಲ್ದಾಣ ತಲುಪಿದಾಗ ಆರೋಪಿಯನ್ನು ಪೊಲೀಸರು ಬಂಧಿಸಿದರು. ನಾನು ಪೊಲೀಸರಿಗೆ ನನ್ನ ಹೇಳಿಕೆ ಕೊಟ್ಟು, ಅದೇ ಟ್ರೈನ್‌ನಲ್ಲಿ ಪ್ರಯಾಣ ಮುಂದುವರೆಸಿದೆ’ ಎಂದು ನಟಿ ಸನುಷಾ ತಿಳಿಸಿದ್ದಾರೆ.

ನಟಿಗೆ ಕಿರುಕುಳ ನೀಡಿದ ಕಾಮುಕ ಅಂಟೋ ಬೋಸ್‌ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ಕೇಸ್‌ ದಾಖಲಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English