ಮಂಗಳೂರು: ನಾಗರ ಹಾವೊಂದು ಅಡ್ಡ ಬಂದ ಪರಿಣಾಮ ಖಾಸಗಿ ಬಸ್ ಹಾಗೂ ಒಮ್ನಿ ಕಾರು ಪರಸ್ಪರ ಡಿಕ್ಕಿ ಹೊಡೆದು, ಒಮ್ನಿ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯಲ್ಲಿ ನಡೆದಿದೆ.
ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಒಮ್ನಿ ಕಾರು ತೆರಳುತ್ತಿದ್ದರೆ, ಉಪ್ಪಿನಂಗಡಿಯಿಂದ ಮಂಗಳೂರು ಕಡೆ ಬಸ್ ಹೊರಟಿತ್ತು. ಈ ವೇಳೆ ಬಸ್ ಮುಂದೆ ನಾಗರಹಾವು ಅಡ್ಡ ನಿಂತಿದೆ. ಇದನ್ನು ತಪ್ಪಿಸಲು ಚಾಲಕ ಬಸ್ನ್ನು ಎಡಕ್ಕೆ ತಿರುಗಿಸಿದಾಗ ಕಾರಿಗೆ ಡಿಕ್ಕಿ ಹೊಡೆದಿದೆ.
ಇತ್ತ ಕಾರು ಚಾಲಕ ಕೂಡಾ ನಾಗರಹಾವನ್ನು ತಪ್ಪಿಸಲು ಬ್ರೇಕ್ ಹಾಕಿದರೂ ಅದು ಕಾರಿನಡಿಗೆ ಸಿಕ್ಕಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡ ಕಾರು ಚಾಲಕ ಮೋಹನ್ರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಟ್ಲ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English