ನವದೆಹಲಿ: ನಾಲ್ಕು ಬಾರಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿರುವ ಟೀಂ ಇಂಡಿಯಾಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ.
ಇಂದು ನ್ಯೂಜಿಲೆಂಡ್‌ನ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೃಥ್ವಿ ಶಾ ಪಡೆ 8 ವಿಕೆಟ್‌ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ನಾಲ್ಕು ಬಾರಿ ವಿಶ್ವಕಪ್ ಎತ್ತಿ ಹಿಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ.
ಫೈನಲ್ ಪಂದ್ಯದಲ್ಲಿ ಪೃಥ್ವಿ ಶಾ ಪಡೆ ಜಯ ದಾಖಲಿಸುತ್ತಿದ್ದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡಕ್ಕೆ ನಗದು ಬಹುಮಾನ ಬಹುಮಾನ ಘೋಷಿಸಿತು. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂಪಾಯಿಗಳನ್ನು ಬಿಸಿಸಿಐ ಘೋಷಿಸಿದೆ. ಕಾಂಗರೂಗಳನ್ನು ಬಗ್ಗು ಬಡಿದ ದ್ರಾವಿಡ್ ಹುಡುಗರು… ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಹೊಸ ದಾಖಲೆ!
ಉಳಿದಂತೆ ತಂಡದ ಆಟಗಾರರಿಗೆ ತಲಾ 30 ಲಕ್ಷ ರೂಪಾಯಿ ಹಾಗೂ ತಂಡದ ಸಿಬ್ಬಂದಿಗೆ ತಲಾ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿದೆ. ವಿಶ್ವಕಪ್ ಎತ್ತಿಹಿಡಿದ ದ್ರಾವಿಡ್ ಬಾಯ್ಸ್… ಸೋಲಿಲ್ಲದ ಸರದಾರರಿಗೆ ಒಲಿದ ವಿಜಯಲಕ್ಷ್ಮೀ!
Click this button or press Ctrl+G to toggle between Kannada and English