ಮಂಗಳೂರು: ವ್ಯಕ್ತಿವೋರ್ವ ಸ್ಮಶಾನದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿ.ಸಿ. ರೋಡಿನ ಕೈಕುಂಜೆಯಲ್ಲಿ ನಡೆದಿದೆ.
ಬಿ.ಸಿ. ರೋಡಿನ ರಾಜೇಶ್ (35) ಆತ್ಮಹತ್ಯೆ ಮಾಡಿಕೊಂಡವ. ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿಗಳಾದ ಮಡಿಕೆ, ಬಿಳಿ ಬಟ್ಟೆ, ಊದುಬತ್ತಿ ಮೊದಲಾದುವುಗಳನ್ನು ತಾನೇ ರುದ್ರಭೂಮಿಗೆ ತಂದಿಟ್ಟಿದ್ದಾನೆ. ಬಳಿಕ ಅತ್ತೆಗೆ ಕರೆಮಾಡಿ ರುದ್ರಭೂಮಿಯ ಮೇಲ್ಛಾವಣೆಯಲ್ಲಿರುವ ಕಬ್ಬಿಣದ ಸರಳಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶರಣಾಗುವುದಾಗಿ ತನ್ನ ಅತ್ತೆಗೆ ಫೋನ್ ಮಾಡಿದ್ದ ಎಂದು ತಿಳಿದುಬಂದಿದೆ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿದ್ದಾರೆ.
Click this button or press Ctrl+G to toggle between Kannada and English