ಮಹಾಶಿವರಾತ್ರಿ ವಿಶೇಷ… ಶಿವಪಂಚಾಕ್ಷರಿ ಪಠಣ ಉದ್ಘಾಟನೆ

10:25 AM, Wednesday, February 14th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

dharmastalaಮಂಗಳೂರು: ದೇವರ ಬಗ್ಗೆ ಭಯ ಇರಬಾರದು. ಭಕ್ತಿ, ಪ್ರೀತಿ ಮತ್ತು ನಂಬಿಕೆ ಇರಬೇಕು. ದೇವರ ಭಕ್ತಿ ಮಾಡುವಾಗ ಭಯ, ಸಂಶಯ, ಅಪನಂಬಿಕೆ ಇರಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಆಹೋರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

dharmastala-2ದೇಹ ಮತ್ತು ಆತ್ಮದ ವ್ಯತ್ಯಾಸವನ್ನು ನಾವು ಅರಿತು ಸತ್ಕಾರ್ಯ, ವ್ರತ, ನಿಯಮಗಳು, ಉಪವಾಸ, ಭಕ್ತಿ, ಪ್ರಾರ್ಥನೆ ಮೊದಲಾದ ಧ್ಯಾನದಿಂದ ನಮ್ಮ ದೋಷಗಳನ್ನೆಲ್ಲ ಕಳೆದು ಆತ್ಮವನ್ನು ಪವಿತ್ರ ಹಾಗೂ ಪರಿಶುದ್ಧವಾಗಿ ಮಾಡಬೇಕು.

ದೇವರ ಧ್ಯಾನ ಮತ್ತು ಶುಭ ಚಿಂತನೆಗಳಿಂದ ದೈವತ್ವದೊಂದಿಗೆ ನಮ್ಮಲ್ಲಿ ದಿವ್ಯತೆ, ತೇಜಸ್ಸು ಹಾಗೂ ಆದರ್ಶ ವ್ಯಕ್ತಿತ್ವ ಮೂಡಿಬರುತ್ತದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English