ಮಂಗಳೂರು: ಬಾಯಾರಿದಾಗ ಎಳನೀರು ಸಿಕ್ಕಿದರೆ ಅದಕ್ಕೆ ಸಾಟಿಯಾಗುವಂಥ ಪಾನೀಯ ಇನ್ನೊಂದಿಲ್ಲ. ಇದೇ ಎಳನೀರಿಗೆ ಮಂಗಳೂರಿನ ನಿವೃತ್ತ ಇಂಜಿನಿಯರ್ ಹೊಸ ಸ್ವಾದ ನೀಡಿದ್ದಾರೆ. ಎಳನೀರಿನ ಗಂಜಿಗೆ ಐಸ್ ಕ್ರೀಮ್ ಬೆರೆಸಿ ತಯಾರು ಮಾಡುವ ಈ ಹೊಸ ತಿನಿಸಿನ ರುಚಿಗೆ ಮಂಗಳೂರಿಗರೇ ಫಿದಾ ಆಗಿದ್ದಾರೆ. ಇದರ ರುಚಿ ಅಂತಿಂಥ ರುಚಿಯಲ್ಲ. ನೀವೆಲ್ಲೂ ಕಂಡಿರದ ರುಚಿರುಚಿಯಾದ ಮಲಾಯಿ ಐಸ್ ಕ್ರೀಮ್ ಇದು. ಮಂಗಳೂರಿನ ಪುಟ್ಟ ಅಂಗಡಿಯಲ್ಲಿ ಈ ಐಸ್ ಕ್ರೀಂ ರೆಡಿಯಾಗುತ್ತದೆ.
ಸ್ಟ್ರಾಬೆರಿ, ಚಾಕ್ಲೇಟ್, ಪೈನಾಪಲ್, ಮೂಸಂಬಿ ಹೀಗೆ ಹತ್ತಕ್ಕೂ ಮಿಕ್ಕಿದ ಫ್ಲೇವರ್ ಗಳಲ್ಲಿ ತಯಾರಿಸೋ ಮಲಾಯಿ ಐಸ್ ಕ್ರೀಮ್ ರುಚಿ ಒಮ್ಮೆ ನೋಡಿದರೆ ಸಾಕು ಎಂಥವರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಮಂಗಳೂರಿನ ಐಡಿಯಲ್ ಐಸ್‍ಕ್ರೀಂಗೆ ‘ಬೆಸ್ಟ್ ಇನ್ ಇಂಡಿಯಾ’ ಪ್ರಶಸ್ತಿ ಈ ಐಸ್ ಕ್ರೀಂ ರುಚಿಗೆ ಮಾರು ಹೋದ ಜನರು ಇದೀಗ ಮಂಗಳೂರಿನ ಬೀದಿಯಲ್ಲಿರುವ ಈ ಪುಟ್ಟ ಅಂಗಡಿಯನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಎಲ್ಲಿದೆ? ಮಂಗಳೂರು ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಈ ಎಳನೀರಿನ ಪುಟ್ಟ ಅಂಗಡಿಗೆ ಜನರು ನಾ ಮುಂದು ತಾ ಮುಂದು ಎಂದು ದಾಂಗುಡಿ ಇಡುತ್ತಿದ್ದಾರೆ.
ಸ್ಥಳದಲ್ಲಿಯೇ ಎಳನೀರು ಕತ್ತರಿಸಿ, ನೀರು ಕುಡಿಯೋಕೆ ಕೊಟ್ಟು ಅದರಲ್ಲಿರುವ ಗಂಜಿಗೆ ಬಾಳೆಹಣ್ಣು, ಐಸ್ ಕ್ರೀಮ್ ಮತ್ತು ಫ್ಲೇವರ್ ಮಿಕ್ಸ್ ಮಾಡಿ ತಯಾರಿಸೋ ಈ ಉಪ ಉತ್ಪನ್ನದ ರುಚಿಯೇ ಅತಿ ವಿಶಿಷ್ಟ; ಸ್ವಾದಿಷ್ಟ. ಐಸ್ ಕ್ರೀಂ ಮಾಡೋಕೆ ಬಂದ್ರು ಎಂಜಿನಿಯರ್ ಇಷ್ಟಕ್ಕೂ ಹೀಗೆ ಎಳನೀರು ಕಡಿದು ಮಲಾಯಿ ಐಸ್ ಕ್ರೀಂ ರೆಡಿ ಮಾಡುತ್ತಿರುವ ಈ ವ್ಯಕ್ತಿ ಕಡಿಮೆ ಆಸಾಮಿಯೇನಲ್ಲ. ಎಂ. ಸೀತಾರಾಮ ಕಾಮತರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದವರು. ದೇಶದ ವಿವಿಧ ಕಂಪನಿಗಳಲ್ಲಿ ಇಂಜಿನಿಯರ್ ಆಗಿ ದುಡಿದವರು.
ಅಷ್ಟೇ ಅಲ್ಲ, ಮಂಗಳೂರಿನ ಹೆಸರಾಂತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹತ್ತು ವರ್ಷಗಳ ಕಾಲ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಎಳನೀರು ನೆಚ್ಚಿಕೊಂಡ ಕಾಮತರು ಆದರೆ ವೈಯಕ್ತಿಕ ಕಾರಣದಿಂದ ಇಂಜಿನಿಯರ್ ವೃತ್ತಿಗೆ ಇತಿಶ್ರೀ ಹಾಕಿದ್ದ ಸೀತಾರಾಮ ಕಾಮತರು ನೆಚ್ಚಿಕೊಂಡಿದ್ದು ಎಳನೀರನ್ನು. ಎಳನೀರು ಕಡಿದು ಅದರಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ಯೋಗ ಆರಂಭಿಸಿದರು. ಸ್ಥಳದಲ್ಲೇ ರೆಡಿ ಇವರು ಬಾಳೆಹಣ್ಣು, ಡ್ರೈ ಫ್ರುಟ್ಸ್ ಮತ್ತು ವಿವಿಧ ಫ್ಲೇವರ್ ಬಳಸಿಕೊಂಡು ಎಳನೀರ ಮಲಾಯಿ ಐಸ್ ಕ್ರೀಮ್ ತಯಾರಿಸುವುದೇ ವಿಶಿಷ್ಟವಾಗಿರುತ್ತದೆ.
ಇದನ್ನು ಆಗಿಂದಾಗಲೇ ತಿಂದರಷ್ಟೇ ಹೆಚ್ಚು ರುಚಿ. ಎಲ್ಲಿಲ್ಲದ ಬೇಡಿಕೆ ಇನ್ನು ಈ ಎಳನೀರು ಮಲಾಯಿ ಐಸ್ ಕ್ರೀಮ್ ಸವಿಯಲು ಮಂಗಳೂರಿನವರು ಮಾತ್ರ ಅಲ್ಲ, ವಿದೇಶಗಳಲ್ಲಿ ನೆಲೆಸಿರುವವರೂ ಮಂಗಳೂರಿಗೆ ಭೇಟಿ ನೀಡಿದಾಗ ತಪ್ಪದೇ ಸೀತಾರಾಮ್ ಅವರ ಪುಟ್ಟ ಅಂಗಡಿಗೆ ಭೇಟಿ ನೀಡುತ್ತಾರೆ.
ಹಲವರು ಊರಿಗೆ ಬಂದಾಗ ಮಲಾಯಿ ಐಸ್ ಕ್ರೀಮ್ ಟೇಸ್ಟ್ ನೋಡದೆ ತೆರಳುವುದಿಲ್ಲ. ಎಳನೀರಿಗೆ ಹೊಸ ರೂಪ ಎಳನೀರನ್ನು ಹೇಗೆಲ್ಲಾ ಬಳಸಬಹುದು ಎಂಬುದಕ್ಕೆ ಸೀತಾರಾಮ ಕಾಮತರ ‘ಮಲಾಯಿ ಐಸ್ ಕ್ರೀಂ’ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಕೇವಲ 60 ರೂಪಾಯಿಗೆ ಸ್ಥಳದಲ್ಲಿಯೇ ತಯಾರಿಸಿ ಕೊಡುವ ಈ ಮಲಾಯಿ ಐಸ್ ಕ್ರೀಂ, ಆರೋಗ್ಯಕ್ಕೂ ಉತ್ತಮ. ಇದನ್ನು ಇನ್ನಷ್ಟು ಉನ್ನತೀಕರಿಸಿ ಮಾರುಕಟ್ಟೆಗೆ ತರುವಂತಾದರೆ, ಎಳನೀರಿನ ಬೇಡಿಕೆ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ.
Click this button or press Ctrl+G to toggle between Kannada and English