ಪ್ರೇಮಿಗಳ ದಿನ ಹೊಸಭಾಷ್ಯ ಬರೆದ ಯುವ ಬ್ರಿಗೇಡ್‌…

10:11 AM, Thursday, February 15th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

uva-brigadeಮಂಗಳೂರು: ಪ್ರೇಮಿಗಳ ದಿನದಂದು ಉತ್ತಮ ಕಾರ್ಯ ಮಾಡುವ ಮೂಲಕ ಮಂಗಳೂರಿನ ಮೂಡಬಿದಿರೆಯ ಯುವ ಬ್ರಿಗೇಡ್‌ ಘಟಕ ಯುವ ಸಮೂಹಕ್ಕೆ ಮಾದರಿಯಾಗಿದೆ.

‘ಪ್ರೇಮಿಗಳ ದಿನಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುವ ಗೆಳೆಯ-ಗೆಳತಿಯರೇ, ನಿಮ್ಮ ಖರ್ಚಿನ ಒಂದು ಭಾಗವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನಮ್ಮ ಸೋದರಿಯ ಚಿಕಿತ್ಸೆಗಾಗಿ ಸೇರಿಸಿ’ ಎಂದು ಮೂಡುಬಿದಿರೆಯ ಯುವ ಬ್ರಿಗೇಡ್ ಮತ್ತು ನವೋದಯ ಫ್ರೆಂಡ್ಸ್ ಬೆದ್ರದ ಸದಸ್ಯರು ಮೂಡುಬಿದಿರೆ ಪೇಟೆಯ ಆವರಣದಲ್ಲಿ ಚೇರ್ ಹಾಕಿ ಧನ ಸಂಗ್ರಹಣೆ ಮಾಡುವ ಮೂಲಕ ಪ್ರೇಮಿಗಳ ದಿನಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

ಮೂಡುಬಿದಿರೆ ಹೋಬಳಿಯ ಧರೆಗುಡ್ಡೆ ಕೆಲ್ಲಪುತ್ತಿಗೆಯ ಮೇಲಿನ ಮನೆಯ ಡೊಂಬಯ್ಯ ಪೂಜಾರಿ ಎಂಬುವರ ಮಗಳು ಪೂಜಾ ಪೂಜಾರಿ (23 ವರ್ಷ) ಕಿಡ್ನಿ ವೈಫಲ್ಯನಿಂದ ಬಳಲುತ್ತಿದ್ದು, ತಾಯಿ, ತಂದೆಯಿಲ್ಲದ ಆಕೆಗೆ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಕಷ್ಟ ಸಾಧ್ಯವಾದುದರಿಂದ ಸಹಾಯ ಹಸ್ತಕ್ಕಾಗಿ ಪತ್ರಿಕೆಗಳ ಮೂಲಕ ಸಹೃದಯರ ನೆರವನ್ನು ಕೋರಿದ್ದರು. ಈ ನಿಟ್ಟಿನಲ್ಲಿ ಯುವ ಬ್ರಿಗೇಡ್‌ನ ಸದಸ್ಯರು ಯುವತಿಯ ಚಿಕಿತ್ಸೆಯ ವೆಚ್ಚಕ್ಕಾಗಿ ತಮ್ಮಿಂದಾಗುವ ಸಹಾಯಕ್ಕಾಗಿ ಕೈ ಜೋಡಿಸಿದ್ದಾರೆ.

ಸಂಜೆ ವೇಳೆಗೆ ಮೂಡುಬಿದಿರೆಯ ಪೇಟೆಯ ಅಂಗಡಿ ಅಂಗಡಿಗಳಿಗೆ ತೆರಳಿದ ಸದಸ್ಯರು ಯುವತಿಯ ಚಿಕಿತ್ಸೆಗಾಗಿ ತಮ್ಮಿಂದಾಗುವಷ್ಟು ಸಹಾಯಧನವನ್ನು ನೀಡುವಂತೆ ಅಂಗಡಿ ಮಾಲೀಕರಲ್ಲಿ ವಿನಂತಿಸಿದರು. ಸಂಗ್ರಹಣೆಯಾದ ಮೊತ್ತವನ್ನು ಇಂದು ಪೂಜಾಳ ಮನೆಗೆ ತೆರಳಿ ಹಸ್ತಾಂತರಿಸಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English