ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಫೆ. 21 ರಂದು ಅಷ್ಟಪವಿತ್ರ ನಾಗಮಂಡಲೋತ್ಸವ

2:39 PM, Friday, February 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Manila ಮಂಗಳೂರು  :  ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ. ಫೆ. 18 ರಿಂದ ಶ್ರೀ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಪ್ರತಿಷ್ಠಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಮೋಹನದಾಸ ಪರಮಹಂಸ ಸ್ವಾಮೀಜಿ  ಯವರು ಕ್ಷೇತ್ರದಲ್ಲಿ ಈ ವರ್ಷ ಅಪೂರ್ವ ಕಾರ್ಯಕ್ರಮವೊಂದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.   ಫೆ. 18ರಂದು ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ದುರ್ಗಾಪರಮೇಶ್ವರಿಗೆ ಸ್ವರ್ಣ ಪ್ರಭಾವಳಿಯ ಮೆರವಣಿಗೆ, ಫೆ. 19ರಂದು ಶ್ರೀನಿವಾಸ ಕಲ್ಯಾಣೋತ್ಸವ, ಫೆ. 20ರಂದು ಪ್ರತಿಷ್ಠಾ ವರ್ಧಂತ್ಯುತ್ಸವ, ಫೆ. 21ರಂದು ಅಷ್ಟಪವಿತ್ರ ನಾಗಮಂಡಲೋತ್ಸವ, ಫೆ. 23ರಂದು ಶ್ರೀ ದೈವಗಳ ನೇಮೋತ್ಸವ, ಫೆ. 25ರಂದು ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

2012  ಚತುಷ್ ಪವಿತ್ರ  ನಾಗಮಂಡಲ ನಡೆದಿತ್ತು ಆ ಬಳಿಕ 5 ವರ್ಷದ ನಂತರ ಅಷ್ಟಪವಿತ್ರ ನಾಗಮಂಡಲೋತ್ಸವ  ನಡೆಯುತ್ತಿದೆ  ಎಂದು ಹೇಳಿದರು.

Manila ಸುಮಾರು 1.5 ಲಕ್ಷ ಮಂದಿ ಭಕ್ತರು ಸೇರುವ ನಿರೀಕ್ಷೆ ಹೊಂದಲಾಗಿದ್ದು, ಅದಕ್ಕಾಗಿ ಕ್ಷೇತ್ರದ ವಠಾರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ವಿಶಾಲ ಪಾಕಶಾಲೆ, ಅನ್ನಛತ್ರ, ಸಭಾಂಗಣಕ್ಕಾಗಿ ವ್ಯವಸ್ಥೆ ಏಪಾರ್ಡು ನಡೆಯುತ್ತಿದೆ. ಈ ಬಾರಿ ಸುಮಾರು  1 ಕಿಲೋ ಮೀಟರ್ ನಷ್ಟು ರಸ್ತೆಗೆ ಕಾಂಕ್ರಿಟೀಕರಣಕ್ಕೆ ಸರಕಾರ ಹಣ ಮಂಜೂರು ಮಾಡಿದೆ. ವಿದ್ಯುತ್ ನಿಗಮ ಕ್ಷೇತ್ರ ಕ್ಕಾಗಿಯೇ  ವಿಶೇಷ  ಟ್ರಾನ್ಸ್ ಫಾರ್ಮರ್ ಅಳವಡಿಸಿದೆ.

ವಿಟ್ಲದಿಂದ ಪೆರ್ಲ ರಸ್ತೆಯಲ್ಲಿ ಸಾಗಿ ಕುದ್ದುಪದವು ಎಂಬಲ್ಲಿ ಬಲಕ್ಕೆ ತಿರುಗಿ, ಪೆರುವಾಯಿ ಮೂಲಕ ಶ್ರೀಧಾಮ  ಬರುವ ರಸ್ತೆ ಬಣ್ಣದ ತೋರಣಗಳಿಂದ ಕಂಗೊಳಿಸುತ್ತಿದೆ.

ಶ್ರೀಕ್ಷೇತ್ರದ ಗುರುಮಠದಲ್ಲಿರುವ ಶ್ರೀ ದುರ್ಗಾಪರಮೇಶ್ವರಿಗೆ ಸ್ವರ್ಣ ಮಂಟಪ ಸಮರ್ಪಣೆಯು ಇದೇ ಸಂದರ್ಭದಲ್ಲಿ ನಡೆಯಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಮರ್ಪಿಸಲಿದ್ದಾರೆ. 1 ಕೆ.ಜಿ. ಚಿನ್ನದಲ್ಲಿ 2.75 ಅಡಿ ಎತ್ತರದ ಮಂಟಪವನ್ನು ನಿರ್ಮಿಸಲಾಗಿದ್ದು, ಮಂಗಳೂರಿನ ಮಂಗಳಾದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದೆ.

ಭಕ್ತರು ಸ್ವರ್ಣ ಮಂಟಪಕ್ಕಾಗಿ 1 ಗ್ರಾಂ, 2 ಗ್ರಾಂ, 4 ಗ್ರಾಂ, 8 ಗ್ರಾಂ ಚಿನ್ನ ಅಥವಾ ಚಿನ್ನದ ಬಾಬ್ತು ನೀಡಬಹುದಾಗಿದೆ.

Manila ಗ್ರಾಮೀಣ ಪ್ರದೇಶದ ಜನರಲ್ಲಿ ಧಾರ್ಮಿಕ ಮೌಲ್ಯಗಳು ನಂಬಿಕೆಗಳನ್ನು ಸೃಜಿಸಿ, ನೈತಿಕ ಶಿಕ್ಷಣಕ್ಕೋಸ್ಕರ ಮಠ ಮಂದಿರಗಳ ಮೂಲಕ ಸಂಸ್ಕಾರವನ್ನು ಭರಿಸಿ ಸದ್ ಪ್ರೇರಣೆ  ನೀಡುವ ಸಲುವಾಗಿ ಅಲ್ಲಲ್ಲಿ ಭಜನಾ ಮಂದಿರಗಳು, ಸಂಸ್ಕಾರ ಭಾರತಿ ಮೂಲಕ ಸತ್ಸಂಗಗಳು ನಡೆಸಲಾಗುತ್ತಿದೆ. ಲೋಕವನ್ನು ಪ್ರಾಕೃತಿಕ ಋಣಾತ್ಮಕತೆಯಿಂದ ರಕ್ಷಿಸಿ ಧರ್ಮಶುದ್ಧಿ, ಭಾವಶುದ್ಧಿಯೊಂದಿಗೆ ಮಾನವೀಮ ಮೌಲ್ಯಗಳನ್ನು ಸದ್ಗುಣಗಳನ್ನು ಬೆಸೆಯುವ ನಿಟ್ಟಿನಲ್ಲಿ ಲೋಕಕಲ್ಯಾಣಾರ್ಥವಾಗಿ ಅಪರೂಪ, ಭಕ್ತಿಪ್ರಧಾನ ಮತ್ತು ಬಹುಕಾಠಿಣ್ಯವಾದ ಅಷ್ಟಪವಿತ್ರ ನಾಗಮಂಡಲ ಸೇವೆ ನಡೆಸಲಾಗುತ್ತಿದೆ  ಎಂದು  ಮೋಹನದಾಸ ಪರಮಹಂಸ ಸ್ವಾಮೀಜಿ ಈ ಸಂದರ್ಭ ಮೆಗಾ ಮೀಡಿಯಾ ನ್ಯೂಸ್ ನೊಂದಿಗೆ ಮಾತನಾಡುತ್ತಾ ಹೇಳಿದರು .

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English