ಮಂಗಳೂರು: ಚುನಾವಣೆಯ ದೃಷ್ಟಿಯಿಂದ ಜನಪ್ರಿಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯರದ್ದು ಚುನಾವಣಾ ಗಿಮಿಕ್ ಬಜೆಟ್ ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಟೀಕಿಸಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ಘೋಷಣೆಯಾದ ಅನುದಾನಗಳಿಗೆ ಹಣ ಎಲ್ಲಿಂದ ಸಂಗ್ರಹಿಸುತ್ತಾರೆ ಎಂಬುದಕ್ಕೆ ಯಾವುದೇ ಪ್ರಸ್ತಾಪವಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಎಂದರು.
ರೈತರ, ಕಾರ್ಮಿಕರ, ಯುವಕರ ಮೀನುಗಾರರ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬಜೆಟ್‌ನ ಪ್ರಯೋಜನವನ್ನು ದೊರಕಿಸಿಕೊಟ್ಟ ಬಜೆಟ್ ಅಭಿವೃದ್ಧಿಯ ದಿಕ್ಷೂಚಕ. ಕರಾವಳಿ ಕರ್ನಾಟಕ ಮೀನುಗಾರರಿಗೆ, ಯುವಕರಿಗೆ, ಪ್ರವಾಸೋದ್ಯಮಕ್ಕೆ, ಪಶ್ಚಿಮವಾಹಿನಿ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಉದ್ಯೋಗ ಸೃಷ್ಟಿಗಾಗಿ ಅನೇಕ ಕಾರ್ಯಕ್ರಮಗಳನ್ನು ಯುವಕರಿಗೆ ಮುಟ್ಟಿಸುವಲ್ಲಿ ಮುಖ್ಯಮಂತ್ರಿಗಳು ಜಾರಿಗೆ ತಂದಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ.
ಬಹುಸಂಖ್ಯಾತರನ್ನು ಕಡೆಗಣಿಸುವ ತಾರತಮ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲೂ ಮುಂದುವರಿಸಿದ್ದಾರೆ. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಚುನಾವಣೆಯ ದೃಷ್ಟಿಯಲ್ಲಿ ಜನರನ್ನು ಮರಳು ಮಾಡುವ ಬಜೆಟ್ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.
ಕರಾವಳಿ ಜಿಲ್ಲೆಗೆ ನಾಲ್ಕು ವರ್ಷಗಳಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಮಂಡಿಸಿದ ಯೋಜನೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿದೆ. ಸುಳ್ಳಿನ ಕಂತೆಯಾಗಿರುವ ಈ ಬಜೆಟ್‌ನಲ್ಲಿ ಜನರಿಗೆ ಯಾವುದೇ ಭರವಸೆಯಿಲ್ಲ ಎಂದರು.
Click this button or press Ctrl+G to toggle between Kannada and English