ಮೂಡಬಿದಿರೆ: ಇಂದಿನ ಪೀಳಿಗೆ ದೃಶ್ಯ ಮಾಧ್ಯಮದೆಡೆಗಿನವ್ಯಾಮೋಹದಿಂದಇಲ್ಲವೇ ಹಣ ಗಳಿಸುವುದಕ್ಕಾಗಿಪತ್ರಿಕೋದ್ಯಮಕ್ಕೆ ಬರುತ್ತಿದ್ದಾರೆ, ಸೇವಾ ಮನೋಭಾವ ಉಳ್ಳವರ ಸಂಖ್ಯೆಕ್ಷೀಣಿಸುತ್ತಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಂಚಾಲಕ ಶಶಿಧರ್ ಶೆಟ್ಟಿ ತಿಳಿಸಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಹಾಗೂ ಪದವಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಮೀಡಿಯಾ ಬಝ್ó 2018ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ಪತ್ರಿಕಾರಂಗ ಪತ್ರಿಕಾಉದ್ಯಮವಾಗಿರೂಪಾಂತರಗೊಂಡಿದೆ. ಉದ್ಯಮದೆಡೆಗೆ ಸಾಗುತ್ತಾ ನಮ್ಮ ಮಾಧ್ಯಮಗಳು ಸುದ್ದಿ ಮೌಲ್ಯತೆ ಕಳೆದುಕೊಳ್ಳುತ್ತಿವೆ. ನಾವೇ ಮೊದಲು ಸುದ್ದಿ ನೀಡಬೇಕೆಂಬ ಆತುರತೆ, ಯಾವುದೇ ವಿಷಯವನ್ನು ಪರಿಪೂರ್ಣವಾಗಿ ತಿಳಿದುಕೊಳ್ಳುವ ವ್ಯವಧಾನಇಲ್ಲದಿರುವುದರಿಂದ ಸಮಸ್ಯೆಗಳು ಉದ್ಭವವಾಗುತ್ತಿದೆ. ಪೂರ್ವಾಗ್ರಹ ಪೀಡಿತರಾಗಿ ಸಾಮಾಜಿಕಜವಾಬ್ದಾರಿ ಮರೆತು ಪತ್ರಕರ್ತರುಎಂದೂ ಕೆಲಸ ಮಾಡಬಾರದು. ಹಾಗೆ ಮಾಡಿದಲ್ಲಿಅದುಉಗ್ರವಾದ ಎನಿಸಿಕೊಳ್ಳುತ್ತದೆ” ಎಂದುಅಭಿಪ್ರಾಯಪಟ್ಟರು.
ಪತ್ರಕರ್ತರಾದವರು ಪರಿಸರ ಸಂರಕ್ಷಣೆಯಕುರಿತಾದ ಸುದ್ದಿಗಳನ್ನು ಬಿತ್ತರಿಸಬೇಕು. ಪ್ರಾಣಿ-ಪಕ್ಷಿಗಳ ಉಳಿವಿಗೆ ಸುದ್ದಿಗಳ ಮೂಲಕ ಜಾಗೃತಿ ಮೂಡಿಸುವಂಥ ಕಾರ್ಯಗಳು ಅವರಿಂದ ಆಗಬೇಕು. ಕಾನೂನಿನ ಜ್ಞಾನ ನಮ್ಮ ಪಠ್ಯಪುಸ್ತಗಳಲ್ಲಿ ಅಳವಡಿಕೆಯಾಗಬೇಕು. ಇದರಿಂದಉತ್ತಮ ಪತ್ರಕರ್ತರನ್ನು ಹಾಗೂ ಪ್ರಜೆಯನ್ನು ನಿರ್ಮಾಣ ಮಾಡಲು ಸಾಧ್ಯ” ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿದ್ದ ಪರಿಸರವಾದಿ ದಿನೇಶ್ ಹೊಳ್ಳ ಮಾತನಾಡಿ “ಇಂದಿನ ಪರಿಸರ ಸಮಸ್ಯೆಗಳಿಗೆ ನಾವೇ ಕಾರಣೀಭೂತರು. ನಾವು ಕಾಡನ್ನು ವ್ಯಾವಹಾರಿಕವಾಗಿ ನೋಡಲು ಆರಂಭಿಸಿದಾಗಿನಿಂದ ಬರ, ಕ್ಷಾಮ, ಸುನಾಮಿ, ಚಂಡಮಾರುತದಂತಹ ವಿಕೋಪಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲೇಯೇಇದೆಎನ್ನುವುದನ್ನು ಮರೆಯಬಾರದು” ಎಂದು ಹೇಳಿದರು.
ರಾಜ್ಯದ ವಿವಿದೆಡೆಗಳಿಂದ 20 ಕಾಲೇಜುಗಳು ಭಾಗವಹಿಸಿದ್ದ ಈ ರಾಜ್ಯ ಮಟ್ಟದ ಮಾಧ್ಯಮೋತ್ಸವದಲ್ಲಿ ಮಡಿಕೇರಿಯ ಎಫ್.ಎಮ್.ಕೆ.ಎಮ್.ಸಿ ಕಾಲೇಜು ಸಮಗ್ರ ವೀರಾಗ್ರಣಿಯಾಗಿ ಹೊರಹೊಮ್ಮಿತು. ನಿಟ್ಟೆಕಾಲೇಜುರನ್ನರ್-ಅಪ್ ಪಟ್ಟವನ್ನು ಅಲಂಕರಿಸಿತು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀಗೌರಿ ಜೋಶಿ ಮೀಡಿಯಾ ಬಝ್óನ ವರದಿ ವಾಚಿಸಿದರು. ಬಿ.ಎ ವಿದ್ಯಾರ್ಥಿನಿ ನಿಧಿ ಪ್ರಸನ್ನಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಮೂಡಬಿದಿರೆ ಪ್ರೆಸ್‍ಕ್ಲಬ್‍ನಅಧ್ಯಕ್ಷ ಸೀತಾರಾಮ ಆಚಾರ್ಯ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಡಾ.ಮೌಲ್ಯಜೀವನ್‍ರಾಮ್ ಮತ್ತಿತ್ತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English