ಮಡಿಕೇರಿ ಗ್ರಾಪಂ ಸದಸ್ಯೆ ಮತ್ತು ಆಕೆಯ ಸಂಬಂಧಿಯ ಮೃತದೇಹ ಪತ್ತೆ

Thursday, September 16th, 2021
kamala

ಮಡಿಕೇರಿ : ಮಡಿಕೇರಿ ತಾಲೂಕಿನ ಗ್ರಾಪಂ ಸದಸ್ಯೆ ಮತ್ತು ಆಕೆಯ ಸಂಬಂಧಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅದೇ ಗ್ರಾಮದ  ಗುಡ್ಡದ ಮರವೊಂದರಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಚೆಂಬು ಗ್ರಾಪಂ ಸದಸ್ಯೆ ಕಮಲಾ(35) ಹಾಗೂ ಆಕೆಯ ಸಂಬಂಧಿಕ ಮುತ್ತು (50) ಎಂದು ಗುರುತಿಸಲಾಗಿದೆ. ಸೆ.15ರ ಸಂಜೆಯಿಂದ ಇವರಬ್ಬರು ದಬ್ಬಡ್ಕ ಗ್ರಾಮದಿಂದ ನಾಪತ್ತೆಯಾಗಿದ್ದು, ಗ್ರಾಮಸ್ಥರು ಹುಡುಕಿದರೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಮರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಗ್ರಾಪಂ ಸದಸ್ಯೆ ಕಮಲಾ ವಿವಾಹಿತೆಯಾಗಿದ್ದು, ಒಂದು ಮಗುವಿದೆ. ಮೃತ ಮುತ್ತು ಕಮಲಾ ಅವರ […]

ಮಡಿಕೇರಿಯಲ್ಲಿಒಂಟಿ ಮಹಿಳೆಯ ಕೊಲೆ, ಮೂಡುಬಿದಿರೆಯ ಯುವಕನ ಬಂಧನ

Thursday, March 25th, 2021
Anil

ಮೂಡುಬಿದಿರೆ : ಮಡಿಕೇರಿಯಲ್ಲಿಒಂಟಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮೂಡುಬಿದಿರೆಯ ಯುವಕನನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೂಡುಬಿದಿರೆಯ ಹೊಸಬೆಟ್ಟು ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ. ಆರೋಪಿಯು ನಗರದ ಖಾಸಗಿ ರೆಸಾರ್ಟಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಮಡಿಕೇರಿಯಲ್ಲಿ 70 ವರ್ಷದ ಒಂಟಿ ಮಹಿಳೆ ಲಲಿತಾ ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಲಾಗಿದ್ದು, ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರ್ಕರಣ ದಾಖಲಾಗಿತ್ತು. ಇನ್ನು ಆರೋಪಿಯು ಮಕ್ಯಾನಿಕ್ ಇಂಜಿನಿಯರ್ ಆಗಿದ್ದು, […]

ದಾರಿಯಲ್ಲಿ ಹೋಗಬೇಕಾದ ಪೊಲೀಸ್ ಜೀಪು ಅಂಗಡಿ ನುಗ್ಗಿ ಚೆಲ್ಲಾಪಿಲ್ಲಿ

Thursday, January 7th, 2021
Police Jeep

ಬೆಳ್ತಂಗಡಿ:  ಮಡಿಕೇರಿಯತ್ತ ತೆರಳ ಬೇಕಾದ  ಪೊಲೀಸ್ ಜೀಪ್ವೊಂದು ಗುರುವಾರ  ಬೆಳಗ್ಗೆ ಅಂಗಡಿಗೆ ನುಗ್ಗಿದ ಘಟನೆ ನಾರಾವಿ ಸಮೀಪದ ಈದು ಕ್ರಾಸ್ ಬಳಿ ನಡೆದಿದೆ. ಕಾರ್ಕಳದಿಂದ ಮಡಿಕೇರಿಯತ್ತ ಇನ್ಸ್ ಪೆಕ್ಷನ್ ಗಾಗಿ ತೆರಳುತ್ತಿದ್ದ ಪೊಲೀಸ್ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದೆ. ಜೀಪ್ನಲ್ಲಿದ್ದ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಗಡಿ ಶೋಕೇಸ್ ಸೇರಿ ಇನ್ನಿತರ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ತಲೆಗೆ ಸ್ವಲ್ಪ ಗಾಯವಾಗಿದ್ದು, ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಡಿಕೇರಿ : 5 ವರ್ಷದ ಮಗುವಿನ ಮೇಲೆ 14 ವರ್ಷದ ಬಾಲಕನಿಂದ ಅತ್ಯಾಚಾರ

Wednesday, June 3rd, 2020
minor-girl

ಮಡಿಕೇರಿ : ನೆರೆಮನೆಯ 14 ವರ್ಷದ  ಬಾಲಕ  5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿರುವಂತಹ ಆಘಾತಕಾರಿ ಘಟನೆ ಮಡಿಕೇರಿಯ ಹೊರವಲಯದ ಗ್ರಾಮವೊಂದರಲ್ಲಿ ನಡೆದಿದೆ. ನೋವಿನಿಂದ ಬಳಲುತ್ತಿದ್ದ ಮಗುವನ್ನು ಆರೋಗ್ಯ ತಪಾಸಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ಬಾಲಕನನ್ನು ವಶಕ್ಕೆ ಪಡೆದಿದ್ದು, ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ. ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಡಿಕೇರಿಯಲ್ಲಿ  ನಡೆದಿರುವ  ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಸಣ್ಣ ಮಗುವಿನ ಮೇಲೆ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಡಿಕೇರಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ […]

ಮಡಿಕೇರಿಯಲ್ಲಿ ಲಾಕ್‌ ಆದ ‘ಲವ್‌ ಮಾಕ್‌ ಟೇಲ್‌ ಚಿತ್ರದ’ ಹುಡ್ಗಿ

Saturday, May 30th, 2020
Rachana-inder

ಮಡಿಕೇರಿ: ಸಿನೆಮಾದಲ್ಲಿ ಕೆಲವೊಂದು ಡೈಲಾಗ್‌ ಗಳು ಜನಮಾನಸದಲ್ಲಿ ಅಜರಾಮರವಾಗಿ ಉಳಿಯುತ್ತವೆ. ಉದಾಹರಣೆಗೆ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಕುತ್ತೇ ಕನ್ವರ್‌ ನಹೀ, ಕನ್ವರಲಾಲ್‌ ಬೋಲೋ, ಬುಲ್‌ ಬುಲ್‌ ಮಾತಾಡಕಿಲ್ವಾ ಮುಂತಾದ ಡೈಲಾಗಗಳು ಇಂದಿಗೂ ಜನರಲ್ಲಿ ಆವಾಗಾವಾಗ ಕೇಳಿ ಬರುತ್ತವೆ. ಚಿತ್ರರಂಗದಲ್ಲಿ ಬರೀ ಹಿರೋಗಳ ಡೈಲಾಗ್‌ ಗಳೇ ಹೆಚ್ಚು ಜನಪ್ರಿಯವಾಗಿದ್ದವು. ಇದುವರೆಗೂ ಹಿರೋಯಿನ್‌ ಗಳ ಅದರಲ್ಲೂ ಕನ್ನಡದ ಯಾವ ನಟಿಯರ ಡೈಲಾಗ್‌ ಗಳು ಜನಮಾನಸದಲ್ಲಿ ಅಚ್ಚೊತ್ತಿರಲಿಲ್ಲ. ಆದರೆ, ಲವ್‌ ಮಾಕ್‌ ಟೇಲ್‌ ಚಿತ್ರದ “ಹೇಂಗೆ ನಾವು” ಡೈಲಾಗ್‌ ಸಾಕಷ್ಟು […]

ಮಡಿಕೇರಿ: 9 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರ ಸೆರೆ

Tuesday, March 17th, 2020
madikeri

ಮಡಿಕೇರಿ: ಮೂರು ವರ್ಷಗಳಲ್ಲಿ 9 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಸಹಿತ ಮೂವರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿ, ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಸಮೀಪದ ಕಣಗಲ್‌ ನಾಕಲಗೂಡು ನಿವಾಸಿ ಸಣ್ಣಪ್ಪ ಕೆ.ಎನ್‌.ಯಾನೆ ಡೀಲಾಕ್ಷ ಯಾನೆ ಮಧು (45), ಕೊಡ್ಲಿಪೇಟೆ ಹೋಬಳಿಯ ಅವರೆದಾಳು ಗ್ರಾಮದ ಕುಶಾಲ್‌ (47) ಮತ್ತು ಸೋಮವಾರಪೇಟೆ ರೇಂಜರ್‌ ಬ್ಲಾಕ್‌ ನಿವಾಸಿ, ಕಾರ್ಪೊರೇಶ‌ನ್‌ ಬ್ಯಾಂಕ್‌ ಅಟೆಂಡರ್‌ ಗಣೇಶ್‌ ಪ್ರಸಾದ್‌ ಎಂ.ಎಸ್‌. (28) ಬಂಧಿತರು. ಬಂಧಿತರಿಂದ 1.80 ಲ.ರೂ. ಮೌಲ್ಯದ […]

ಮಡಿಕೇರಿ : ಪ್ರಪಾತಕ್ಕೆ ಉರುಳಿ ಬಿದ್ದ ಹಾಲಿನ ವಾಹನ

Saturday, February 22nd, 2020
dairy

ಮಡಿಕೇರಿ : ಕೂಡಿಗೆ ಹಾಲಿನ ಡೈರಿಯಿಂದ ಮಡಿಕೇರಿ ಮಾರ್ಗವಾಗಿ ಮೂರ್ನಾಡು ಮೂಲಕ ನಾಪೋಕ್ಲು ಕಡೆಗೆ ಹೊರಟಿದ್ದ ಹಾಲಿನ ಕ್ಯಾಂಟರ್, ಮೇಕೇರಿ ಮಸೀದಿ ಬಳಿಯ ತಿರುವಿನ ರಸ್ತೆಯಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ವಾಹನ ಚಲಾಯಿಸುತ್ತಿದ್ದ 30 ವರ್ಷದ ಸ್ವಾಮಿ ಸೇರಿದಂತೆ ಕ್ಯಾಂಟರ್‌ನಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆಯಿಂದ ಕ್ಯಾಂಟರ್‌ನಲ್ಲಿದ್ದ ನೂರಾರು ಲೀಟರ್ ಹಾಲಿನ ಪ್ಯಾಕೇಟ್‌ಗಳು ಚೆಲ್ಲಾಪಿಲ್ಲಿಯಾಗಿ ಹರಿಡಿಕೊಂಡಿದ್ದರೆ, ಹಲವು ಲೀಟರ್‌ನಷ್ಟ ಹಾಲು ಮಣ್ಣು ಪಾಲಾಯಿತು. ಅಪಘಾತದ ಸುದ್ದಿ ತಿಳಿದ ಮೇಕೇರಿ ಗ್ರಾಮಸ್ಥರು ಕ್ಯಾಂಟರ್ ಚಾಲಕ ಸೇರಿದಂತೆ ಗಾಯಾಳುಗಳನ್ನು […]

ಮಡಿಕೇರಿಗೆ ಕಾಂಕ್ರಿಟ್ ರಸ್ತೆ ಭಾಗ್ಯ : ಮುಖ್ಯ ವೃತ್ತಗಳಲ್ಲಿ ಕಾಮಗಾರಿ ಬಿರುಸು

Friday, February 21st, 2020
muttanna

ಮಡಿಕೇರಿ : ಕೊನೆಗೂ ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಮಹಾಮಳೆಯಿಂದ ಹದಗೆಟ್ಟಿದ್ದ ರಸ್ತೆಗಳ ದುರಸ್ತಿಗಾಗಿ ಸಾರ್ವಜನಿಕರು ಒತ್ತಾಯಿಸುತ್ತಲೇ ಬಂದಿದ್ದರೂ ನಗರಸಭೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಬಂದಿತ್ತು. ಇದೀಗ ಮತ್ತೊಂದು ಮಳೆಗಾಲ ಸಮೀಪಿಸುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಆರಂಭಿಸಿದ್ದಾರೆ. ನಗರೋತ್ಥಾನದ ೩ನೇ ಹಂತದ ವಿವಿಧ ಕಾಮಗಾರಿಗಳು ನಗರಸಭೆ ವತಿಯಿಂದ ನಡೆಯುತ್ತಿದ್ದು, ನಗರದ ಇಂದಿರಾಗಾಂಧಿ ವೃತ್ತ ಮತ್ತು ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಸುತ್ತಲೂ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ಎರಡು ಕಾಮಗಾರಿಗಳಿಗೆ […]

ಪಶ್ಚಿಮ ಘಟ್ಟ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ ನೆಹರೂ ಮಂಟಪ

Friday, February 7th, 2020
neharu-mantapa

ಮಡಿಕೇರಿ : ಕೊಡಗು ಎಂದರೆ ಅದು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿದೆ. ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯೂ ಸಹ ಇದೇ ಪುಣ್ಯ ಭೂಮಿಯಲ್ಲಿದೆ. ಇದರೊಂದಿಗೆ ಹಲವಾರು ಪ್ರವಾಸಿ ತಾಣಗಳೂ ಸಹ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ತನ್ನ ಹಸಿರ ಮೈಸಿರಿಯಿಂದಲೇ ಕೊಡಗು ರಾಜ್ಯದಲ್ಲೇ ವಿಶೇಷವಾದ ಸ್ಥಾನ ಹೊಂದಿದೆ. ಅಷ್ಟೇ ಅಲ್ಲದೆ ಐತಿಹಾಸಿಕ ಕಟ್ಟಡಗಳು ಮತ್ತು ಭಾರತೀಯ ಸೈನ್ಯಕ್ಕೆ ಕೊಡುಗೆ ಕೊಟ್ಟಂತಹ ಪ್ರಮುಖ ಸೇನ ನಾಯಕರ ನೆಲೆಬೀಡು ಎಂಬ ವಿಶ್ವಖ್ಯಾತಿಯನ್ನೂ ಸಹ ನಮ್ಮ […]

ಕೊರೊನಾ ವೈರಸ್ ಬಗ್ಗೆ ಆತಂಕ ಬೇಡ : ಮಡಿಕೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅಭಯ

Thursday, February 6th, 2020
sriramulu

ಮಡಿಕೇರಿ : ರಾಜ್ಯದಲ್ಲಿ ಕೊರೊನಾ ವೈರಸ್ ಸಂಬಂಧಿಸಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತೀ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳನ್ನು ಕೊರೊನಾ ಸಂಬಂಧಿಸಿದ ಪ್ರಕರಣಗಳಿಗೆ ಮೀಸಲಿಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ರಾಜ್ಯದ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಂದರುಗಳೂ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಕೊರೊನಾ ವೈರಾಣು ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು. ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸಂಬಂಧಿತ […]