ಮಡಿಕೇರಿ: ಮೂರು ವರ್ಷಗಳಲ್ಲಿ 9 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಸಹಿತ ಮೂವರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿ, ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಸಮೀಪದ ಕಣಗಲ್ ನಾಕಲಗೂಡು ನಿವಾಸಿ ಸಣ್ಣಪ್ಪ ಕೆ.ಎನ್.ಯಾನೆ ಡೀಲಾಕ್ಷ ಯಾನೆ ಮಧು (45), ಕೊಡ್ಲಿಪೇಟೆ ಹೋಬಳಿಯ ಅವರೆದಾಳು ಗ್ರಾಮದ ಕುಶಾಲ್ (47) ಮತ್ತು ಸೋಮವಾರಪೇಟೆ ರೇಂಜರ್ ಬ್ಲಾಕ್ ನಿವಾಸಿ, ಕಾರ್ಪೊರೇಶನ್ ಬ್ಯಾಂಕ್ ಅಟೆಂಡರ್ ಗಣೇಶ್ ಪ್ರಸಾದ್ ಎಂ.ಎಸ್. (28) ಬಂಧಿತರು.
ಬಂಧಿತರಿಂದ 1.80 ಲ.ರೂ. ಮೌಲ್ಯದ 61.29 ಗ್ರಾಂ ಚಿನ್ನಾಭರಣ, 27 ಸಾ. ರೂ., 135.78 ಗ್ರಾಂ ಬೆಳ್ಳಿಯ ಆಭರಣಗಳು, ಒಂದು ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಎಸ್‌ಪಿ ಡಾ| ಸುಮನ್ ಡಿ.ಪನ್ನೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Click this button or press Ctrl+G to toggle between Kannada and English