ಮಡಿಕೇರಿ: ಸಿನೆಮಾದಲ್ಲಿ ಕೆಲವೊಂದು ಡೈಲಾಗ್ ಗಳು ಜನಮಾನಸದಲ್ಲಿ ಅಜರಾಮರವಾಗಿ ಉಳಿಯುತ್ತವೆ. ಉದಾಹರಣೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕುತ್ತೇ ಕನ್ವರ್ ನಹೀ, ಕನ್ವರಲಾಲ್ ಬೋಲೋ, ಬುಲ್ ಬುಲ್ ಮಾತಾಡಕಿಲ್ವಾ ಮುಂತಾದ ಡೈಲಾಗಗಳು ಇಂದಿಗೂ ಜನರಲ್ಲಿ ಆವಾಗಾವಾಗ ಕೇಳಿ ಬರುತ್ತವೆ.
ಚಿತ್ರರಂಗದಲ್ಲಿ ಬರೀ ಹಿರೋಗಳ ಡೈಲಾಗ್ ಗಳೇ ಹೆಚ್ಚು ಜನಪ್ರಿಯವಾಗಿದ್ದವು. ಇದುವರೆಗೂ ಹಿರೋಯಿನ್ ಗಳ ಅದರಲ್ಲೂ ಕನ್ನಡದ ಯಾವ ನಟಿಯರ ಡೈಲಾಗ್ ಗಳು ಜನಮಾನಸದಲ್ಲಿ ಅಚ್ಚೊತ್ತಿರಲಿಲ್ಲ.
ಆದರೆ, ಲವ್ ಮಾಕ್ ಟೇಲ್ ಚಿತ್ರದ “ಹೇಂಗೆ ನಾವು” ಡೈಲಾಗ್ ಸಾಕಷ್ಟು ಯುವತಿಯರು ಈಗಲೂ ಬಳಸುತ್ತಿದ್ದಾರೆ ಎಂದರೆ ಆ ಡೈಲಾಗ್ ಗೆ ಇರುವ ಪಾಪ್ಯುಲ್ಯಾರಿಟಿ ಗೊತ್ತಾಗುತ್ತದೆ.
ಹೌದು, ಈ ಚಿತ್ರದಲ್ಲಿ ನಟಿಸಿದ ನಟಿ ರಚನಾ ಇಂದರ್ ಗೆ ಈ ಡೈಲಾಗ್ ಇಷ್ಟೊಂದು ಪ್ರಸಿದ್ಧಿಯಾಗುತ್ತದೆ ಎಂಬುದು ಊಹಿಸಲಾರದಷ್ಟಿತ್ತಂತೆ.
ಈಗ ಎಲ್ಲೇ ಹೋದರೂ ಈ ಡೈಲಾಗ್ ನೀಂದಲೇ ನನ್ನನ್ನು ಗುರುತಿಸುತ್ತಾರೆ. ಮೊದ ಮೊದಲು ಈ ಡೈಲಾಗ್ ಬಗ್ಗೆ ಅಷ್ಟೊಂದು ಪ್ರಚಾರವಿರಲಿಲ್ಲ. ಆದರೆ ಸಿನಿಮಾ ಆಮೇಜಾನ್ ನಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಒಮ್ಮೇಲೆ ವೈರಲ್ ಆಗಿದೆ ಎಂಬುದು ಖುಷಿಯ ವಿಚಾರ ಎನ್ನುತ್ತಾರೆ ರಚನಾ. ಸದ್ಯ ಲಾಕ್ ಡೌನ್ ನಿಂದ ಮಡಿಕೇರಿಯಲ್ಲಿದ್ದೇನೆ. ಯೂ ಟ್ಯೂಬ್ ಮೂಲಕ ಹೊಸ ಹೊಸ ಅಡುಗೆ ಮಾಡುವುದನ್ನು ಕಲಿತುಕೊಳ್ಳುತ್ತಿದ್ದೇನೆ. ಅಂದ ಹಾಗೆ ಲವ್ ಮಾಕ್ ಟೇಲ್‌ನ ಸೀಕ್ವೇಲ್ ನಲ್ಲಿ ನಾನು ನಟಿಸುವುದು ಬಿಡುವುದು ನಿರ್ದೇಶಕರಿಗೆ ಬಿಟ್ಟಿದ್ದು ಎಂದಿದ್ದಾರೆ.
Click this button or press Ctrl+G to toggle between Kannada and English