ಮದುವೆಯಲ್ಲೂ ಹೊರೆ ಕಾಣಿಕೆ, ಫಸ್ಟ್‌‌ ನೈಟ್‌ಗೂ ಅಡ್ಡಿ…ಫ್ರೆಂಡ್ಸ್‌‌ ಕುಚೇಷ್ಟೆಗೆ ನವದಂಪತಿ ಸುಸ್ತು!

12:00 PM, Thursday, March 1st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

marriegeಮಂಗಳೂರು: ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೆಯ ದೊಡ್ಡ ಸಂಭ್ರಮಗಳಲ್ಲಿ ಊರವರು ಕೊಡುಗೆಯಾಗಿ ಹೊರೆ ಕಾಣಿಕೆ ಸಲ್ಲಿಸುವುದನ್ನು ನೋಡಿದ್ದೇವೆ. ಆದರೆ, ಮದುವೆಗೂ ಹೊರೆ ಕಾಣಿಕೆ ಸಲ್ಲಿಸಿದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ರಾಕೇಶ್ ಅವರ ಮದುವೆ ಬಂಟ್ವಾಳ ತಾಲೂಕಿನ ರಾಯಿಯಲ್ಲಿ ಫೆ.20ರಂದು ನಡೆದಿದೆ. ಮದುಮಕ್ಕಳಿಗೆ ಏನಾದರೂ ಸರ್‌‌ಪ್ರೈಸ್ ಗಿಫ್ಟ್ ನೀಡಲೇಬೇಕು ಎಂದುಕೊಂಡಿದ್ದ ರಾಕೇಶ್ ಗೆಳೆಯರು ಈ ರೀತಿ ಮಾಡಿದ್ದಾರೆ. ಇವರ ಕೀಟಲೆಗೆ ಮದುಮಗಳು ಸುಷ್ಮಾ ಕೂಡಾ ದಂಗಾಗಿದ್ದಾರೆ.

ಮದುಮಗ ರಾಕೇಶ್ ಶಾಸ್ತ್ರೋಸ್ತವಾಗಿ ಮೆಹಂದಿ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದರೆ ಇತ್ತ ಸ್ನೇಹಿತರು ಕುಚೇಷ್ಟೆ ಮಾಡೋದಕ್ಕೆ ಹೊಂಚು ಹಾಕುತ್ತಿದ್ದರು. ಆತನ ಮೇಲೆ ಹಳಸಿದ ಟೊಮೆಟೊ, ಹಾಲು, ಸಗಣಿ ನೀರು ಸುರಿದಿದ್ದಾರೆ. ಉಳಿದ ಸ್ನೇಹಿತರ ಮದುವೆಯಲ್ಲಿ ರಾಕೇಶ್ ಕೂಡಾ ಅವರನ್ನು ಗೋಳು ಹೊಯ್ದುಕೊಳ್ಳುತ್ತಿದ್ದರಂತೆ. ಇದನ್ನೇ ನೆಪಮಾಡಿಕೊಂಡು ಸ್ನೇಹಿತರು ರಾಕೇಶನ ಮದುವೆಯಲ್ಲೂ ಸಖತ್ ತುಂಟಾಟವಾಡಿದ್ದಾರೆ.

ಇಷ್ಟಕ್ಕೇ ಸುಮ್ಮನಿರದ ಅವರು, ಮದುವೆ ದಿನ ಕೂಡಾ ‘ರಾಪಟದ ರಾಕೇಶನ ಮದಿಮೆ’ ಎಂದು ಸಾರ್ವಜನಿಕ ಸ್ಥಳದಲ್ಲಿ ದೊಡ್ಡ ಬ್ಯಾನರ್ ಅಳವಡಿಸಿದ್ದರು. ಜೊತೆಗೆ ತರಕಾರಿ, ಹಣ್ಣುಗಳು, ಪಟಾಕಿ ಸೇರಿದಂತೆ ವಿವಿಧ ವಸ್ತುಗಳೊಂದಿಗೆ ಹೊರೆಕಾಣಿಕೆ ಮೆರವಣಿಗೆಯಲ್ಲಿ ಹೊರಟು, ಮಂಟಪವೇರಿದ್ದರು. ಇದನ್ನು ನೋಡಿದ ಸಭಿಕರು ನಗೆಗಡಲಲ್ಲಿ ತೇಲಿದರು.

ಮೊದಲ ರಾತ್ರಿ ಕೂಡಾ ಶೃಂಗಾರಗೊಂಡ ಮದುಮಕ್ಕಳ ಕೋಣೆಯಲ್ಲಿ ಸ್ನೇಹಿತರು ಮಲಗಿ, ಮದುಮಕ್ಕಳನ್ನು ಹೊರಗೆ ಕಳುಹಿಸಿದ್ದರಂತೆ. ಸ್ನೇಹಿತರ ಉಪಟಳ ತಾಳಲಾರದೆ ನವದಂಪತಿ, ಉಡುಪಿಯ ಚಿಕ್ಕಮ್ಮನ ಮನೆಗೆ ಹೋಗಿದ್ದರು. ರಾತ್ರಿ ಅಲ್ಲಿಗೂ ಹೋಗಿದ್ದ ರಾಕೇಶ್ ಸ್ನೇಹಿತರು ಎರಡನೇ ದಿನ ಕೂಡಾ ಅವರಿಗೆ ಅಡ್ಡಿಪಡಿಸಿದ್ದರಂತೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English