ಮಂಗಳೂರು: ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧನ ಮೃತದೇಹವನ್ನು ಪೊಲೀಸರೇ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿರುವ ಘಟನೆ ಪುತ್ತೂರು ತಾಲೂಕು ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ನಡೆದಿದೆ.
ತರಿಕೆರೆಯ ಜಂಬದಹಳ್ಳಿಯ ಪಳನಿಸ್ವಾಮಿ (80)ಕುಸಿದು ಬಿದ್ದು ಸಾವನ್ನಪ್ಪಿದ್ದರು. ಊರಿನಲ್ಲಿ ದೈವದ ನೇಮ ಇದ್ದ ಕಾರಣ ಶವ ಹೊರಲು ಗ್ರಾಮಸ್ಥರು ಯಾರೂ ಮುಂದೆ ಬಾರದ್ದಕ್ಕೆ ಅಸಹಾಯಕವಾಗಿದ್ದ ಕುಟುಂಬಕ್ಕೆ ಪೊಲೀಸರು ನೆರವಾದರು.
ಪುತ್ತೂರು ಠಾಣೆಯ ಪಿಎಸ್ಐ ಪ್ರಕಾಶ್, ಎಎಸ್ಐ ರವಿ, ಹೋಂಗಾರ್ಡ್ ಸಂದೇಶ್ ಅವರು ವೃದ್ಧನ ಮೃತದೇಹವನ್ನು ಹೊತ್ತು ಮನೆ ತಲುಪಿಸಿದರು.
Click this button or press Ctrl+G to toggle between Kannada and English