ಸಿದ್ದರಾಮಯ್ಯ ತಾಕತ್ತಿದ್ದರೆ ಬೇರೆ ಸಮುದಾಯದ ಧಾರ್ಮಿಕ ಕೇಂದ್ರಗಳಿಗೆ ಕೈಹಾಕಲಿ

10:16 AM, Wednesday, March 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ananth-kumarಮಂಗಳೂರು: ಜನಸುರಕ್ಷಾ ಯಾತ್ರೆ ಬೆಂಗಳೂರು ತಲುಪುವಾಗ ಸಿಎಂ ಕುರ್ಚಿ ಖಾಲಿಯಾಗಬೇಕು. ನಾವು ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ಕಟ್ಟುತ್ತೇವೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.

ಸುರತ್ಕಲ್‌ನ ಕುಳಾಯಿಯಲ್ಲಿ ಬಿಜೆಪಿಯ ಜನಸುರಕ್ಷಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಜನಸುರಕ್ಷಾ ಯಾತ್ರೆ ಎಂಬ ಸುನಾಮಿಗೆ ಸಿಎಂ ಸಿದ್ದರಾಮಯ್ಯ ಹೊರಟು ಹೋಗಬೇಕು. ಇಲ್ಲದಿದ್ದರೆ ಈ ಸುನಾಮಿಯೇ ನಿಮ್ಮನ್ನು ಎಳೆದು ತರುತ್ತದೆ ಎಂದರು ಎಚ್ಚರಿಸಿದ್ದಾರೆ.

ಸಿಎಂ ಸಿದ್ಧರಾಮಯ್ಯರನ್ನು ಕೆಳಗಿಳಿಸಲು ಬಿಜೆಪಿಯೇ ಬೇಕೆಂದಿಲ್ಲ. ಅವರ ಪಕ್ಷದವರೇ ಸಾಕು. ಖರ್ಗೆ, ಪರಂ ಅವರ ಅಧಿಕಾರದ ಮದಕ್ಕೆ ಅಡ್ಡಗಾಲು ಹಾಕಿದ್ದಾರೆ. ಬಹುಸಂಖ್ಯಾತರಿಗೆ ಸಾವಿನ ಭಾಗ್ಯ ಕರುಣಿಸಿದ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ 1700ಕ್ಕೂ ಅಧಿಕ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ ನಡೆದಿದೆ. 178 ಅಧಿಕಾರಿಗಳ ವಿರುದ್ಧ ಕೇಸು ಇದೆ. ಕೆಲವು ಅಧಿಕಾರಿಗಳು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದರು.

ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೂ ಈ ಸರ್ಕಾರ ಕಮಿಷನ್ ತೆಗೆದುಕೊಂಡಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಮುಕ್ತ ಭಾರತ ಆಗಬೇಕಾದರೆ ಕರ್ನಾಟಕದಿಂದ ಶುರುವಾಗಬೇಕು. ಈಗಾಗಲೇ ದೇಶದಲ್ಲಿ 21 ಕಡೆಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಇದೆ. ಕರ್ನಾಟಕದಲ್ಲಿ ಮಾತ್ರ ಧರ್ಮ ರಾಜ್ಯ ಅಲ್ಲ, ದೇಶದಲ್ಲೇ ಭಗವಾಧ್ವಜ ಹಾರಾಡಬೇಕು ಎಂದು ಸಚಿವ ಹೆಗಡೆ ಆಶಿಸಿದರು.

ಹಿಂದೂ ಮಠ ಮಂದಿರಗಳನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರ, ತಾಕತ್ತಿದ್ದರೆ ಬೇರೆ ಸಮುದಾಯದ ಧಾರ್ಮಿಕ ಕೇಂದ್ರಗಳಿಗೆ ಕೈಹಾಕಲಿ ಎಂದು ಸವಾಲು ಹಾಕಿದ್ದಾರೆ.

ಉತ್ತರ ಕನ್ನಡದಲ್ಲಿ ಬುಡಬುಡಿಕೆಯವರು ಮನೆಗೆ ಬಂದರೆ, ಮನೆ ಮಂದಿಯ ತಲೆಮಾರಿನ ಬಗ್ಗೆ ಹೇಳುತ್ತಿದ್ದರು. ಆದರೆ ಬುಡಬುಡಿಕೆ ಸಿಎಂಗೆ ಟಿಪ್ಪು ಹಾಗೂ ಬಹಮನಿ ಸುಲ್ತಾನ ಬಿಟ್ಟರೆ ಬೇರೆ ವಂಶಾವಳಿಗಳ ಬಗ್ಗೆ ಗೊತ್ತೇ ಇಲ್ಲ ಎಂದು ಅನಂತ ಕುಮಾರ ಹೆಗಡೆ ಲೇವಡಿ ಮಾಡಿದರು.

ಮಾಜಿ ಸಚಿವ ಮಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ಡಾ.ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖಂಡರಾದ ಪೂಜಾ ಪೈ, ಸತ್ಯಜಿತ್ ಸುರತ್ಕಲ್, ಉಮಾನಾಥ ಕೋಟ್ಯಾನ್, ಕ್ಯಾ.ಬ್ರಿಜೇಶ್ ಚೌಟ, ರಾಮಚಂದರ್ ಬೈಕಂಪಾಡಿ, ಬಸವರಾಜು ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English