ಬೆಂಗಳೂರು : ಇದುವರೆಗೆ ಮೈ ತುಂಬಾ ಬಟ್ಟೆ ಹಾಕಿಕೊಂಡು ನಟಿಸುತ್ತಿದ್ದ ‘ಮಳೆ’ ಹುಡುಗಿ ಪೂಜಾ ಗಾಂಧಿಗೆ ಹೊಸ ಚಿತ್ರವೊಂದರಲ್ಲಿ ಸೆಕ್ಷೀ ಪಾತ್ರ ಸಿಕ್ಕಿದೆಯಂತೆ. ಮುಂಗಾರು ಮಳೆಯ ನಂತರ ಒಂದಷ್ಟು ಜನಪ್ರಿಯತೆಯನ್ನು ಈಗಲೂ ಉಳಿಸಿಕೊಂಡಿರುವ ನಾಯಕಿ ಈಕೆ. ಸದ್ಯ ಆಕೆ ಒಪ್ಪಿಕೊಂಡ ಚಿತ್ರಗಳು ಖಾಲಿಯಾಗಿವೆ. ಅನಿರೀಕ್ಷಿತವಾಗಿ ಬಂದಿರುವ ಆಫರ್ ಒಂದನ್ನು ಕಣ್ಮುಚ್ಚಿ ಒಪ್ಪಿಕೊಂಡಿರುವ ಆಕೆ ಇದುವರೆಗೂ ನಟಿಸಿರದಷ್ಟು ವಿಭಿನ್ನವಾದ ಮತ್ತು ಮಾದಕ ಪಾತ್ರವನ್ನು ಇದರಲ್ಲಿ ಮಾಡುತ್ತಿದ್ದಾರಂತೆ!
‘ಕೋಟೆ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು. ಅವರು ನಿರ್ಮಿಸುತ್ತಿರುವ ‘ದಂಡುಪಾಳ್ಯ’. ಸಿನಿಮಾದಲ್ಲಿ ಪೂಜಾ ಗಾಂಧಿಯದ್ದು ಸ್ಯಾಡಿಸ್ಟ್ ಕಿಲ್ಲರ್ ಪಾತ್ರ. ಹೆಸರು ಲಕ್ಷ್ಮಿ. ನಿರ್ದೇಶಕರ ಪ್ರಕಾರ ಆಕೆಯದ್ದು ಸೆಕ್ಸೀ ಪಾತ್ರವಂತೆ. ‘ದಂಡುಪಾಳ್ಯ’ದಲ್ಲಿ ಖಳ ನಾಯಕ ಬಾಲಿವುಡ್‌ನ ಮಕ್ರಂದ್ ದೇಶಪಾಂಡೆ. ಗ್ಯಾಂಗಿನಲ್ಲಿ ರಘು ಮುಖರ್ಜಿ, ರವಿಕಾಳೆ, ಮುನಿ, ಯತಿರಾಜ್, ಜೈದೇವ್ ಮುಂತಾದವರಿದ್ದಾರೆ. ‘ರಾಜ್ ದಿ ಶೋ ಮ್ಯಾನ್’ನಲ್ಲಿ ಕಿಚ್ಚೆಬ್ಬಿಸಿದ್ದ ನಿಶಾ ಕೊಟ್ಟಾರಿಯ ಮಾದಕ ನೃತ್ಯವಿದೆಯಂತೆ.
ದಂಡುಪಾಳ್ಯ ಗ್ಯಾಂಗಿನ ಕೃತ್ಯಗಳನ್ನು ಅಧ್ಯಯನ ಮಾಡಲು ನಿರ್ದೇಶಕ ಶ್ರೀನಿವಾಸ ರಾಜು ಜೈಲಿಗೆ ಭೇಟಿ ನೀಡಿದ್ದಾರೆ.ದಂಡುಪಾಳ್ಯ ಗ್ಯಾಂಗಿನ ಸದಸ್ಯರನ್ನು ಭೇಟಿಯಾದ ಅವರು ಪೊಲೀಸರು ಹೇಳುತ್ತಿರುವುದು ಮತ್ತು ಗ್ಯಾಂಗ್ ಹೇಳುತ್ತಿರುವುದಕ್ಕೆ ಅಜಗಜಾಂತರ ವ್ಯತ್ಯಾಸ ಇರುವುದನ್ನು ಕಂಡುಕೊಂಡಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಯಾವುದೇ ತೀರ್ಪನ್ನು ಕೊಡಲು ನಿರ್ದೇಶಕರು ಹೋಗುತ್ತಿಲ್ಲವಂತೆ. ಜನರೇ ನಿರ್ಧರಿಸಲಿ ಎನ್ನುವುದು ಅವರ ಅಭಿಪ್ರಾಯ.ಚಿತ್ರ ಏಕಕಾಲದಲ್ಲಿ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಚಿತ್ರೀಕರಿಸಲಾಗುತ್ತಿದೆಯಂತೆ.
Click this button or press Ctrl+G to toggle between Kannada and English