ಅಯ್ಯಪ್ಪ ದೇವರ ಹಾಡಿನಲ್ಲಿ ಯಾವುದೇ ಅವಮಾನ ಮಾಡುವ ಶಬ್ದ ಬಳಕೆಯಾಗಿಲ್ಲ: ಮೊಯ್ದೀನ್‌ ಬಾವ

10:23 AM, Monday, March 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mohauiddin-bavaಮಂಗಳೂರು: ಅಯ್ಯಪ್ಪ ದೇವರ ಹಾಡನ್ನು ನಾನು ವಿಕೃತಗೊಳಿಸಿ ಅಪಮಾನ ಮಾಡಿದ್ದೇನೆಂದು ಮಾಧ್ಯಮಗಳಲ್ಲಿ ಬಂದ ಸುದ್ದಿ ಸತ್ಯಕ್ಕೆ ದೂರವಾದದ್ದು ಹಾಗೂ ಹಾಡಿನಲ್ಲಿ ಯಾವುದೇ ಅವಮಾನ ಮಾಡುವ ಶಬ್ದ ಬಳಕೆಯಾಗಿಲ್ಲ ಎಂದು ಶಾಸಕ ಮೊಯ್ದೀನ್‌ ಬಾವ ಸ್ಪಷ್ಟಪಡಿಸಿದರು.

ಅಯ್ಯಪ್ಪ ದೇವರನ್ನು ಅವಮಾನಿಸಿದ್ದೇನೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಗಮನಕ್ಕೆ ಬಾರದೆ ನನ್ನ ಅಭಿಮಾನಿ ಅಥವಾ ವಿರೋಧಿಗಳಿಂದ ಈ ಕೃತ್ಯ ನಡೆದಿದೆ. ನಾನು ಅಯ್ಯಪ್ಪ ಸ್ವಾಮಿ ಭಕ್ತ. ಈ ಹಾಡಿನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಇಂತಹ ಘಟನೆ ನಡೆಯಬಾರದೆಂದು ವಿಷಾದಿಸಿದರು.

ಮಕರ ಸಂಕ್ರಮಣ ದಿನ ನಾನು ನನ್ನ ಕ್ಷೇತ್ರದ ಅಯ್ಯಪ್ಪ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತೇನೆ ಹಾಗೂ ಮಂದಿರಗಳಿಗೆ ದೇಣಿಗೆ ನೀಡುತ್ತೇನೆ. ನನ್ನಿಂದ ಈ ಕೃತ್ಯ ನಡೆದಿಲ್ಲ. ಈ ಹಾಡು ಕಟ್ಟಿದವರ ಮೇಲೆ ಕ್ರಮ ಕೈಗೊಳ್ಳುವಂತೆ ನಾನು ಆಗ್ರಹಿಸುತ್ತೇನೆ. ನಾನು ಹಿಂದೂ ವಿರೋಧಿ ಅಲ್ಲ.

ಚುನಾವಣೆಗಾಗಿ ಯಾರೋ ಮಾಡಿದ ತಪ್ಪಿಗೆ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಬಹುಸಂಖ್ಯಾತ ಹಿಂದೂಗಳ ಹಾಗೂ ಎಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿದ್ದು, ಎಲ್ಲರಿಗೂ ಸಮಾನ ಆದ್ಯತೆ ನೀಡಿದ್ದೇನೆ. ನನ್ನ ಯಶಸ್ಸನ್ನು ಸಹಿಸಲಾಗದವರಿಂದ ಈ ಕೃತ್ಯ ನಡೆದಿದೆ ಎಂದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English